ಬೇಬಿ ಬಂಪ್ ಫೋಟೋ ಹಾಕಿ ಗಮನ ಸೆಳೆದ ಸೋನಮ್ ಕಪೂರ್; ಇಲ್ಲಿದೆ ಗ್ಯಾಲರಿ
ಕಪ್ಪು-ಬಿಳುಪಿನ ಫೋಟೋ ಹಾಕಿದ್ದಾರೆ ಸೋನಂ. ಅವರ ಜತೆ ಪತಿ ಆನಂದ್ ಅಹೂಜ ಕೂಡ ಇದ್ದಾರೆ. ಅವರ ಬೇಬಿ ಬಂಪ್ ಫೋಟೋ ಗಮನ ಸೆಳೆದಿದೆ.
Updated on: Mar 21, 2022 | 4:09 PM

ನಟಿ ಸೋನಮ್ ಕಪೂರ್ ಅವರು ಉದ್ಯಮಿ ಆನಂದ್ ಅಹೂಜಾ ಅವರನ್ನು 2018ರಲ್ಲಿ ಮದುವೆ ಆದರು. ಮದುವೆ ಆದ ನಂತರದಲ್ಲಿ ಸೋನಂ ನಟನೆಯಲ್ಲಿ ಅಷ್ಟು ಆ್ಯಕ್ಟೀವ್ ಆಗಿಲ್ಲ. ಈಗ ಅವರ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಸೋನಂ ಕಪೂರ್ ಪ್ರೆಗ್ನೆಂಟ್ ಆಗಿದ್ದಾರೆ. ಹೊಸ ಫೋಟೋಶೂಟ್ ಮೂಲಕ ಈ ವಿಚಾರವನ್ನು ಅವರು ಅಧಿಕೃತ ಮಾಡಿದ್ದಾರೆ. ನಟಿ ಜಾನ್ವಿ ಕಪೂರ್ ಸೇರಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸೋನಂಗೆ ಶುಭಾಶಯ ಕೋರುತ್ತಿದ್ದಾರೆ.

2007ರಲ್ಲಿ ತೆರೆಗೆ ಬಂದ ‘ಸಾವರಿಯಾ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಸೋನಂ ಕಪೂರ್. ಅಲ್ಲಿಂದ ಇಲ್ಲಿಯವರೆಗೆ ಸುಮಾರು 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ, ಅವರಿಗೆ ಚಿತ್ರರಂಗದಲ್ಲಿ ಗಟ್ಟಿ ನೆಲೆ ಸಿಗಲಿಲ್ಲ. ಪ್ರೇಕ್ಷಕರು ಅವರ ನಟನೆಯನ್ನು ಅಷ್ಟು ಇಷ್ಟಪಡಲಿಲ್ಲ.

2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ ಕಡೆಯಿಂದ ಗುಡ್ ನ್ಯೂಸ್ ಸಿಗುತ್ತಿದೆ. ಪ್ರೆಗ್ನೆನ್ಸಿ ಫೋಟೋ ಹಂಚಿಕೊಂಡು ಸೋನಂ ಸಂಭ್ರಮಿಸಿದ್ದಾರೆ.

‘ನಾಲ್ಕು ಕೈಗಳು, ನಿನ್ನನ್ನು ಉತ್ತಮವಾಗಿ ಬೆಳೆಸಲು. ಎರಡು ಹೃದಯ, ಒಂದು ಕುಟುಂಬ, ನಿನಗೆ ಪ್ರೀತಿ ತೋರಲು. ನಿನ್ನನ್ನು ಸ್ವಾಗತಿಸಲು ನಾವು ಕಾಯುತ್ತಿದ್ದೇವೆ’ ಎಂದು ಸೋನಂ ಬರೆದುಕೊಂಡಿದ್ದಾರೆ. ಕಪ್ಪು-ಬಿಳುಪಿನ ಫೋಟೋ ಹಾಕಿದ್ದಾರೆ ಸೋನಂ.,

ಅವರ ಜತೆ ಪತಿ ಆನಂದ್ ಅಹೂಜ ಕೂಡ ಇದ್ದಾರೆ. ಅವರ ಬೇಬಿ ಬಂಪ್ ಫೋಟೋ ಗಮನ ಸೆಳೆದಿದೆ.

ಈ ಫೋಟೋಗೆ ಕಮೆಂಟ್ ಮಾಡಿರುವ ಜಾನ್ವಿ ಅಚ್ಚರಿ ಹೊರ ಹಾಕಿದ್ದಾರೆ. ‘ಓಹ್ ಮೈ ಗಾಡ್, ಏನು?’ ಎಂದು ಆಶ್ಚರ್ಯಕರವಾಗಿ ಕಮೆಂಟ್ ಮಾಡಿದ್ದಾರೆ ಜಾನ್ವಿ.



















