- Kannada News Photo gallery Sonam Kapoor to be mom soon at the age of 40 Sonam Kapoor Baby Shower Photos
ಎರಡನೇ ಬಾರಿಗೆತಾಯಿ ಆಗ್ತಿದ್ದಾರೆ ಸೋನಂ ಕಪೂರ್; ಸೀಮಂತ ಶಾಸ್ತ್ರದ ಫೋಟೋ ವೈರಲ್
ನಟಿ ಸೋನಮ್ ಕಪೂರ್ ಹಾಗೂ ಆನಂದ್ ಅಹೂಜಾ ದಂಪತಿ ಕುಟುಂಬದಲ್ಲಿ ಈಗ ಖುಷಿಯ ದಿನಗಳು ಮತ್ತೊಮ್ಮೆ ಬರೋ ಸಮಯ. ಅವರು ಎರಡನೇ ಬಾರಿಗೆ ಪಾಲಕರಾಗುತ್ತಿದ್ದಾರೆ. ಈ ಸಂಧರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. ಈ ಫೋಟೋಗಳು ಗಮನ ಸೆಳೆಯೋ ರೀತಿಯಲ್ಲಿ ಇದೆ.
Updated on:Feb 09, 2026 | 1:02 PM

ಸೋನಂ ಕಪೂರ್ ಅವರು ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ನಟನೆ ಮಾಡಿದರು. ಆದರೆ, ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲೇ ಇಲ್ಲ. ಈಗ ಅವರು ಫ್ಯಾಮಿಲಿ ಜೊತೆ ಹಾಯಾಗಿದ್ದಾರೆ.

ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ ಕಪೂರ್ ವಿವಾಹ ಆಗಿದ್ದಾರೆ. 2018ರಲ್ಲಿ ಅದ್ದೂರಿಯಾಗಿ ಈ ಮದುವೆ ನಡೆಯಿತು. ಈಗ ಸೋನಂ ಕಪೂರ್ ಅವರು ಎರಡನೇ ಬಾರಿಗೆ ತಾಯಿ ಆಗುತ್ತಿದ್ದಾರೆ.

2022ರಲ್ಲಿ ಸೋನಂ ಕಪೂರ್ ಅವರಿಗೆ ಗಂಡು ಮಗು ಜನಿಸಿತು. ಮಗುವಿಗೆ ಅವರು ವಾಯು ಎಂದು ನಾಮಕರಣ ಮಾಡಿದ್ದಾರೆ. ಈಗ ಎರಡನೇ ಬಾರಿಗೆ ಅವರು ತಾಯಿ ಆಗುತ್ತಿದ್ದಾರೆ. ಅವರ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ.

ಸೋನಂ ಕಪೂರ್ ಬಾಲಿವುಡ್ನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಇವರು ಖ್ಯಾತ ನಟ ಅನಿಲ್ ಕಪೂರ್ ಮಗಳು ಎಂಬ ಕಾರಣಕ್ಕೆ ಸಾಕಷ್ಟು ಆಫರ್ಗಳು ಬಂದವು. ಈ ಆಫರ್ಗಳನ್ನು ಒಪ್ಪಿ ನಟಿಸಿದರು. ಆದರೆ, ದೊಡ್ಡ ಗೆಲುವು ಸಿಕ್ಕಿಲ್ಲ.

Sonam Kapoor (1)

ಸೋನಂ ಅವರಿಗೆ ಈಗ 40 ವರ್ಷ. ಅವರಿಗೆ ಅಭಿಮಾನಿಗಳ ಕಡೆಯಿಂದ ಸಾಕಷ್ಟು ವಿಶ್ಗಳು ಬಂದಿವೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
Published On - 12:56 pm, Mon, 9 February 26




