AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ರೈಲಿನಿಂದ ಇಳಿದು ಹಳಿ ದಾಟಲು ಹೋದಾಗ ಎದುರಿನಿಂದ ಬಂದೇ ಬಿಡ್ತು ಮತ್ತೊಂದು ರೈಲು

ಮಹಾರಾಷ್ಟ್ರದ ವಸಾಯಿ ರೋಡ್ ರೈಲು ನಿಲ್ದಾಣದಲ್ಲಿ ಅಪಾಯಕಾರಿ ಘಟನೆಯೊಂದು ನಡೆದಿದೆ. ಹಳಿ ದಾಟಲು ಯತ್ನಿಸಿದ ವ್ಯಕ್ತಿಯೊಬ್ಬರು ಎರಡು ರೈಲುಗಳ ನಡುವೆ ಸಿಲುಕಿ ಜೀವನ್ಮರಣ ಹೋರಾಟ ನಡೆಸಿ ಅದೃಷ್ಟವಶಾತ್ ಪಾರಾಗಿದ್ದಾರೆ. ಈ ವೈರಲ್ ವಿಡಿಯೋ ನಿರ್ಲಕ್ಷ್ಯದ ಅಪಾಯವನ್ನು ಎತ್ತಿ ತೋರಿಸುತ್ತದೆ, ಇಂತಹ ಅಜಾಗರೂಕ ಕ್ರಮಗಳು ಗಂಭೀರ ಪರಿಣಾಮಗಳನ್ನು ಬೀರಬಹುದು ಎಂದು ಎಚ್ಚರಿಸುತ್ತದೆ.

ಒಂದು ರೈಲಿನಿಂದ ಇಳಿದು ಹಳಿ ದಾಟಲು ಹೋದಾಗ ಎದುರಿನಿಂದ ಬಂದೇ ಬಿಡ್ತು ಮತ್ತೊಂದು ರೈಲು
ರೈಲು
ನಯನಾ ರಾಜೀವ್
|

Updated on: Jul 21, 2026 | 1:12 PM

Share

ಮುಂಬೈ, ಜುಲೈ 21: ಜೀವವನ್ನು ಪಣಕ್ಕಿಟ್ಟು ತೆಗೆದುಕೊಳ್ಳುವ ಒಂದು ನಿರ್ಧಾರವು ಎಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಮಹಾರಾಷ್ಟ್ರದ ವಸಾಯಿ ರೋಡ್ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ನಿಂತಿದ್ದ ರೈಲಿನಿಂದ ಆಚೆ ಬಂದ ವ್ಯಕ್ತಿ ಲೋಹದ ಗ್ರಿಲ್ ದಾಟಿ ಮತ್ತೊಂದು ಕಡೆ ಇರುವ ಪ್ಲಾಟ್​ಫಾರ್ಮ್​ಗೆ ಹೋಗಲು ಯತ್ನಿಸಿದ್ದಾರೆ. ಆದರೆ ಗ್ರಿಲ್ ಮೇಲೆ ಹತ್ತುತ್ತಿದ್ದಂತೆಯೇ ಮತ್ತೊಂದು ಹಳಿಯಲ್ಲಿ ರೈಲು(Train) ಬಂದಿತ್ತು. ಆಗ ಎಲ್ಲೂ ಹೋಗಲಾಗದೆ ಸಂಕಟದಲ್ಲಿ ಸಿಲುಕಿದ್ದಾರೆ. ಅಷ್ಟೇ ಅಲ್ಲದೆ ಹಳಿಯಲ್ಲಿ ಚಲಿಸುತ್ತಿದ್ದಂತೆ ಗ್ರಿಲ್ ಮೇಲೆ ಹತ್ತಿದ್ದ ವ್ಯಕ್ತಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆದರೆ ಅದೃಷ್ಟವಶಾತ್ ಹಳಿಯ ಮೇಲೆ ಬಿದ್ದಿಲ್ಲ.

ವ್ಯಕ್ತಿಯೊಬ್ಬ ರೈಲಿನ ಹೊರಭಾಗದ ಕಬ್ಬಿಣದ ಗ್ರಿಲ್‌ಗಳನ್ನು ಹಿಡಿದುಕೊಂಡು ಅಪಾಯಕಾರಿಯಾಗಿ ಕುಳಿತಿದ್ದ. ಈ ವೇಳೆ ಪಕ್ಕದ ಹಳಿಯಲ್ಲಿ ಮತ್ತೊಂದು ರೈಲು ನಿಧಾನವಾಗಿ ಬರಲು ಪ್ರಾರಂಭಿಸಿತು. ಎರಡೂ ರೈಲುಗಳ ನಡುವಿನ ಜಾಗ ತೀವ್ರ ಕಿರಿದಾಗಿದ್ದರಿಂದ, ಆ ವ್ಯಕ್ತಿ ಅಲ್ಲಿಂದ ತಪ್ಪಿಸಿಕೊಳ್ಳಲಾಗದೆ ನಡುವಲ್ಲೇ ಸಿಲುಕಿಕೊಂಡಿದ್ದಾರೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ತಾಂತ್ರಿಕ ದೋಷ: ಯಶವಂತಪುರ – ಮಾದಾವರ ನಡುವೆ ರೈಲು ಸಂಚಾರ ವ್ಯತ್ಯಯ!

ಎದುರಿನ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ಸಂಪೂರ್ಣ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಾ, ರೈಲು ಹತ್ತಿರ ಬರುತ್ತಿದೆ, ಸುರಕ್ಷಿತವಾಗಿರಿ ಎಂದು ನಿರಂತರವಾಗಿ ಕಿರುಚುತ್ತಾ ಎಚ್ಚರಿಕೆ ನೀಡುತ್ತಿರುವುದು ವೀಡಿಯೊದಲ್ಲಿದೆ. ಜನರ ಎಚ್ಚರಿಕೆಯ ಹೊರತಾಗಿಯೂ ಆ ವ್ಯಕ್ತಿ ಅಲ್ಲಿಂದ ಕದಲುವುದು ಸಾಧ್ಯವಾಗಲಿಲ್ಲ. ರೈಲು ಆತನ ಅತ್ಯಂತ ಸಮೀಪದಿಂದ ಹಾದುಹೋದಾಗ, ಗಾಬರಿಯಿಂದ ಆತ ತನ್ನ ಹಿಡಿತ ತಪ್ಪಿ ಗ್ರಿಲ್‌ನಿಂದ ಕೆಳಗೆ ಜಾರಿಬಿದ್ದಿದ್ದಾರೆ. ಆದರೆ, ಅತ್ಯಂತ ಅದೃಷ್ಟವಶಾತ್ ಕ್ಷಣಾರ್ಧದಲ್ಲಿ ತನ್ನ ಸಮತೋಲನವನ್ನು ಕಾಯ್ದುಕೊಂಡು, ರೈಲಿನ ಚಕ್ರಗಳ ಅಡಿಗೆ ಬೀಳದೆ ಬೃಹತ್ ದುರಂತದಿಂದ ಪಾರಾಗಿದ್ದಾರೆ.

ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ಹಂಚಿಕೊಳ್ಳಲಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದು ಕೇವಲ ಅಪಾಯವಲ್ಲ, ಆತ ಜೀವಂತವಾಗಿ ಉಸಿರಾಡುತ್ತಿರುವುದೇ ಆತನ ಅದೃಷ್ಟ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಚಲಿಸುವ ರೈಲುಗಳ ಬಳಿ ಇಂತಹ ಬೇಜವಾಬ್ದಾರಿ ಸಾಹಸಗಳನ್ನು ಪ್ರದರ್ಶಿಸುವುದು ಎಷ್ಟು ಆಪಾಯಕಾರಿ ಎಂಬುದಕ್ಕೆ ಈ ವೀಡಿಯೊ ಕಣ್ಣು ತೆರೆಸುವಂತಿರೆಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!