- Kannada News Photo gallery Sreeleela bags big opportunity starring alongside with kireeti reddy sreeleela pics
Sreeleela: ಶ್ರೀಲೀಲಾ ಬತ್ತಳಿಕೆಗೆ ಹೊಸ ಸಿನಿಮಾ; ಕಿರೀಟಿ ರೆಡ್ಡಿ ಮೊದಲ ಚಿತ್ರಕ್ಕೆ ನಾಯಕಿಯಾದ ‘ಕಿಸ್’ ಬೆಡಗಿ
Kireeti Reddy | Sreeleela: ‘ಕಿಸ್’ ಚಿತ್ರದ ಮೂಲಕ ಗಮನಸೆಳೆದ ಶ್ರೀಲೀಲಾ ನಂತರ ಸಾಲುಸಾಲು ಹಿಟ್ ಚಿತ್ರ ನೀಡಿದವರು. ಇದೀಗ ಅವರ ಬತ್ತಳಿಕೆಗೆ ಹೊಸ ಚಿತ್ರ ಸೇರಿದೆ. ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಾಯಕನಾಗಿ ಪದಾರ್ಪಣೆ ಮಾಡಲಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ದ್ವಿಭಾಷಾ ಚಿತ್ರವೊಂದರಲ್ಲಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ.
Updated on:Mar 05, 2022 | 2:12 PM


ತೆಲುಗಿನಲ್ಲೂ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ನಟಿಯ ಬತ್ತಳಿಕೆಗೆ ಹೊಸ ಸಿನಿಮಾ ಸೇರ್ಪಡೆಯಾಗಿದೆ.

ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಮೊದಲ ಬಾರಿಗೆ ಶ್ರೀಲೀಲಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಮಾಯಾಬಜಾರ್’ ನಿರ್ದೇಶಿಸಿದ್ದ ರಾಧಾಕೃಷ್ಣ ರೆಡ್ಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

‘ಬಾಹುಬಲಿ’, ‘ಪುಷ್ಪ’ ಸಿನಿಮಾಗಳ ತಂತ್ರಜ್ಞರು ಕಿರೀಟಿ ರೆಡ್ಡಿ ಹೊಸ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ.

ದೇವಿ ಶ್ರೀ ಪ್ರಸಾದ್ ಸಂಗೀತ ಹಾಗೂ ‘ಬಾಹುಬಲಿ’ ಖ್ಯಾತಿಯ ಸೆಂಥಿಲ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.

ಇಂತಹ ದೊಡ್ಡ ಚಿತ್ರದ ಭಾಗವಾಗಿರುವುದಕ್ಕೆ ಶ್ರೀಲೀಲಾ ಖುಷಿಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿರುವ ಶ್ರೀಲೀಲಾ ಆಗಾಗ ಹೊಸ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಶ್ರೀಲೀಲಾ
Published On - 2:11 pm, Sat, 5 March 22



















