- Kannada News Photo gallery Telugu Actress Malavika Nair act with Golden Star Ganesh In Krishnam Pranaya Sakhi Movie
Malavika Nair: ಗಣೇಶ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಮಾಳವಿಕಾ ನಾಯರ್; ಇವರ ಹಿನ್ನೆಲೆ ಬಗ್ಗೆ ಇಲ್ಲಿದೆ ವಿವರ
ಮಾಳವಿಕಾಗೆ ಚಿತ್ರರಂಗದಲ್ಲಿ 10 ವರ್ಷಗಳ ಅನುಭವ ಇದೆ. 2012ರಲ್ಲಿ ರಿಲೀಸ್ ಆದ ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಉಸ್ತಾದ್ ಹೋಟೆಲ್’ ಚಿತ್ರಲದಲ್ಲಿ ಮೊದಲು ಮಾಳವಿಕಾ ನಟಿಸಿದರು.
Updated on:Jul 01, 2023 | 1:20 PM

ಗಣೇಶ್ ನಟನೆಯ ಹೊಸ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಕೃಷ್ಣಂ ಪ್ರಣಯ ಸಖಿ’ ಎಂಬ ಶೀರ್ಷಿಕೆ ನಿಡಲಾಗಿದೆ. ಈ ಚಿತ್ರದ ಮೂಲಕ ತೆಲುಗು ನಟಿ ಮಾಳವಿಕಾ ನಾಯರ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಮಾಳವಿಕಾಗೆ ಚಿತ್ರರಂಗದಲ್ಲಿ 10 ವರ್ಷಗಳ ಅನುಭವ ಇದೆ. 2012ರಲ್ಲಿ ರಿಲೀಸ್ ಆದ ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಉಸ್ತಾದ್ ಹೋಟೆಲ್’ ಚಿತ್ರದಲ್ಲಿ ಮೊದಲು ಮಾಳವಿಕಾ ನಟಿಸಿದರು.

ನಂತರ ತಮಿಳು ಚಿತ್ರದಲ್ಲೂ ಮಾಳವಿಕಾ ನಟಿಸಿದರು. ದೆಹಲಿ ಮೂಲದ ಮಾಳವಿಕಾಗೆ 2015ರ ನಂತರ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿತು.

2015ರಲ್ಲಿ ರಿಲೀಸ್ ಆದ ತೆಲುಗಿನ ‘ಯವಡೆ ಸುಬ್ರಹ್ಮಣ್ಯಮ್’ ಚಿತ್ರದಲ್ಲಿ ಮಾಳವಿಕಾ ನಟಿಸಿದರು. ಅಲ್ಲಿಂದ ಅವರಿಗೆ ಟಾಲಿವುಡ್ನಲ್ಲಿ ಸಾಲು ಸಾಲು ಆಫರ್ಗಳು ಸಿಕ್ಕವು.

ಬಳಿಕ ‘ಮಹಾನಟಿ’, ‘ಟ್ಯಾಕ್ಸಿವಾಲಾ’, ‘ಥ್ಯಾಂಕ್ ಯೂ’ ಮೊದಲಾದ ತೆಲುಗು ಸಿನಿಮಾಗಳಲ್ಲಿ ಮಾಳವಿಕಾ ನಟಿಸಿದರು. ಈ ಮೂಲಕ ಅವರು ಫೇಮಸ್ ಆಗಿದ್ದಾರೆ.

ಗಣೇಶ್ ಚಿತ್ರಕ್ಕೆ ಮಾಳವಿಕಾ ನಾಯಕಿ ಆಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಈಗ ಈ ವಿಚಾರ ಅಧಿಕೃತ ಆಗಿದೆ.

‘ದಂಡುಪಾಳ್ಯ’ ಖ್ಯಾತಿಯ ಶ್ರೀನಿವಾಸರಾಜು ‘ಕೃಷ್ಣಂ ಪ್ರಣಯ ಸಖಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು ಸೇರಿ ಅನೇಕರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
Published On - 12:46 pm, Sat, 1 July 23




