- Kannada News Photo gallery The drona that came to protect Bandipur forest wealth, here are the photos
ಬಂಡೀಪುರ ಅರಣ್ಯ ಸಂಪತ್ತು ರಕ್ಷಣೆ ಮಾಡಲು ಬಂದ ದ್ರೋಣ, ಇಲ್ಲಿದೆ ಫೋಟೋಸ್
ಬಂಡೀಪುರ ಅಂದ್ರೆ, ಪ್ರಾಕೃತಿಕ ಸಂಪತ್ತು. ಅರಣ್ಯ ಇಲಾಖೆ ಕಣ್ಣು ತಪ್ಪಿಸಿ ಇಲ್ಲಿನ ವನ್ಯ ಸಂಪತ್ತನ್ನು ಕಳ್ಳರು ಲೂಟಿ ಮಾಡುತ್ತಲೆ ಇದ್ದಾರೆ. ಇಂತಹ ಕಳ್ಳಕಾಕರ ಹೆಡೆಮುರಿ ಕಟ್ಟಲು ಬಂಡೀಪುರ ಅರಣ್ಯಕ್ಕೆ ಇದೀಗ ದ್ರೋಣ ಬಂದಿದ್ದಾನೆ. ದ್ರೋಣ ಅಂದ್ರೆ ಯಾರು ಅಂತಿರಾ? ಇಲ್ಲಿದೆ ನೋಡಿ.
Updated on: Jun 17, 2023 | 1:37 PM

ಇವನ ಹೆಸರು ದ್ರೋಣ. ಬಂಡೀಪುರ ಅರಣ್ಯ ಕಾವಲಿಗೆ ಬಂದಿರುವ ಹೊಸ ಸೇನಾನಿ. ಹೌದು,ಅರಣ್ಯ ಸಂಪತ್ತಿನ ಮೇಲೆ ಕಳ್ಳ ಕಾಕರ ಕಣ್ಣು ಇದ್ದೆ ಇರುತ್ತೆ. ಇಂತಹ ಕಳ್ಳ ಕಾಕರಿಗೆ ಈ ಹಿಂದೆ ಬಂಡೀಪುರದಲ್ಲಿ ರಾಣಾ ಹೆಡೆಮುರಿ ಕಟ್ಟುತಿದ್ದ. ಆದ್ರೆ, ಅವನ ನಿಧನದಿಂದ ಅರಣ್ಯ ಇಲಾಖೆಗೆ ದೊಡ್ಡ ನಷ್ಟವೆ ಆಗಿತ್ತು. ಇದೀಗ ಆ ಜಾಗಕ್ಕೆ ಹೊಸದಾಗಿ ದ್ರೋಣ ಬಂದಿದ್ದಾನೆ.

ಜರ್ಮನ್ ಶಫರ್ಡ್ ಜಾತಿಯ ಈ ಶ್ವಾನ. ಕಳ್ಳಕಾಕರ ವಾಸನೆ ಹಿಡಿಯುವುದರಲ್ಲಿ ಸಖತ್ ಫೇಮಸ್. ಈ ಹಿಂದೆ ಇದ್ದ ರಾಣಾ ಕೂಡ ಹಲವು ಕಳ್ಳತನ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದ.

ಇದೀಗ ಅದೇ ಜಾತಿಗೆ ಸೇರಿದ್ದ ದ್ರೋಣ ಕೂಡ ಕಳ್ಳರಿಗೆ ಹೆಡೆಮುರಿ ಕಟ್ಟಲು ಹಲವು ತಿಂಗಳ ಕಾಲ ಎಲ್ಲಾ ರೀತಿಯ ತರಭೇತಿ ಪಡೆದು ಬಂಡೀಪುರಕ್ಕೆ ಆಗಮಿಸಿದ್ದ. ಈಗಷ್ಟೆ ಬಂದರು ಈಗಾಗಲೇ ಆನೆ ಸೆರೆ ಕಾರ್ಯಚರಣೆ ಸೇರಿದಂತೆ ಹಲವು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾನೆ.

ಸದ್ಯ ದ್ರೋಣನನ್ನ ನೋಡಿಕೊಳ್ಳಲು ಅರಣ್ಯ ಇಲಾಖೆಯ ಸ್ಪೆಷಲ್ ಟೈಗರ್ ಫೋರ್ಸ್ ನೌಕರ ಕಾಳ ಎಂಬುವವರು ನೇಮಕವಾಗಿದ್ದಾರೆ. ಸದ್ಯ ಕಾಳ ಹಾಗೂ ದ್ರೋಣ ಇಬ್ಬರಿಗೂ ಈಗ ಇಲಾಖೆ ವತಿಯಿಂದ ಟ್ರೈನಿಂಗ್ ನೀಡಲಾಗಿದೆ.

ಹುಲಿ ಕಾರ್ಯಾಚರಣೆ, ಮರಗಳ್ಳರು ಬೇಟೆಗಾರರ ಹಿಡಿಯಲು ಈ ಶ್ವಾನ ಇಲಾಖೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ. ಈ ಹಿಂದೆ ಸಿಬ್ಬಂದಿಗಳು ಭೇದಿಸಲಾಗದ ಹಲವು ಪ್ರಕರಣಗಳನ್ನ ರಾಣಾ ಭೇದಿಸಿ ಯಶಸ್ವಿಯಾಗಿದ್ದ.

ಹುಲಿ ಕಾರ್ಯಾಚರಣೆ, ಮರಗಳ್ಳರು ಬೇಟೆಗಾರರ ಹಿಡಿಯಲು ಈ ಶ್ವಾನ ಇಲಾಖೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ. ಈ ಹಿಂದೆ ಸಿಬ್ಬಂದಿಗಳು ಭೇದಿಸಲಾಗದ ಹಲವು ಪ್ರಕರಣಗಳನ್ನ ರಾಣಾ ಭೇದಿಸಿ ಯಶಸ್ವಿಯಾಗಿದ್ದ.ಒಟ್ಟಾರೆ, ಇಷ್ಟು ದಿನ ಕಳ್ಳಕಾಕರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದ ರಾಣಾ ಜಾಗವನ್ನ ತುಂಬಲು ದ್ರೋಣ ಆಗಮಿಸಿದ್ದಾನೆ. ರಾಣಾ ಮಾದರಿಯಲ್ಲಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ ದ್ರೋಣ ಕೂಡ ಯಶಸ್ವಿಯಾಗಲಿ ಎಂಬುದೆ ನಮ್ಮ ಆಶಯ.



















