- Kannada News Photo gallery The pre wedding shoot of the cute couple that caught the attention of Creativity
Viral News : ಕ್ರಿಯೇಟಿವಿಟಿಯಿಂದಲೇ ಗಮನ ಸೆಳೆದಿದ್ದ ಮುದ್ದಾದ ಜೋಡಿಯ ಪ್ರೀ ವೆಡ್ಡಿಂಗ್ ಶೂಟ್ಗಳಿವು!
ಇತ್ತೀಚಿನ ವರ್ಷಗಳಲ್ಲಿ ಮದುವೆ ಪೂರ್ವ ಫೋಟೋಶೂಟ್ ಎನ್ನುವುದು ಒಂದು ಟ್ರೆಂಡ್ ಸೃಷ್ಟಿಸಿದೆ. ಮದುವೆಯಾಗುವ ಮುನ್ನ ವಿಭಿನ್ನ ರೀತಿಯ ವಿಡಿಯೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಕ್ರಿಯೇಟಿವಿಯಾಗಿ ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಫೋಟೊ ತೆಗೆಸಿಕೊಳ್ಳಲು ಇಷ್ಟ ಪಡುತ್ತಾರೆ. ಕೆಲವೊಮ್ಮೆ ಈ ಪ್ರೀ ವೆಡ್ಡಿಂಗ್ ಶೂಟ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರೀ ವೆಡ್ಡಿಂಗ್ ಶೂಟ್ ಗಳಿವು.
Updated on: Feb 12, 2024 | 10:31 AM

ದೇವಸ್ಥಾನದಲ್ಲಿ ಕ್ರಿಯೇಟಿವ್ ಪ್ರೀ ವೆಡ್ಡಿಂಗ್ ಶೂಟ್ : ಮದುವೆ ಫೋಟೋ ಶೂಟ್ ಗಾಗಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಆಯ್ಕೆಯೇ ದೇವಸ್ಥಾನವಾಗಿರುತ್ತದೆ. ಈ ಹಿಂದೆ ಶಿವಾರ್ಚಕ ಮಧು ದೀಕ್ಷಿತ್ ಎಂಬುವವರು ಪ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಚನ್ನಪಟ್ಟಣದವರಾಗಿದ್ದ ದೀಕ್ಷಿತ್ ಅವರ ಪ್ರೀವೆಡ್ಡಿಂಗ್ ಫೋಟೋಶೂಟ್ ವಿಡಿಯೋ ಎಲ್ಲರ ಗಮನ ಸೆಳೆದಿತ್ತು.

ಪೊಲೀಸ್ ಸ್ಟೇಷನ್ ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ : ಹೈದರಾಬಾದ್ ಪೊಲೀಸ್ ಜೋಡಿಯ ಪ್ರೀ ವೆಡ್ಡಿಂಗ್ ವಿಡಿಯೋ ಶೂಟಿಂಗ್ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಮುದ್ದಾದ ಜೋಡಿಯು ಪೊಲೀಸ್ ಸ್ಟೇಷನ್ ನಲ್ಲಿ ಪೊಲೀಸ್ ಕಾರು, ಪೊಲೀಸ್ ಉಡುಗೆ ಬಳಸಿ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿದ್ದರು. ಈ ಕ್ರಿಯೇಟಿವ್ ಫೋಟೋ ಶೂಟ್ ಗೆ ಮೆಚ್ಚುಗೆ ವ್ಯಕ್ತವಾಗಿತ್ತು

ಚರಂಡಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ : ಹೊಸ ಜೀವನಕ್ಕೆ ಕಾಲಿಡಲಿರುವ ಜೋಡಿಗಳಿಬ್ಬರೂ ಬಹಳ ಕ್ರಿಯೇಟಿವ್ ಆಗಿ ಫೋಟೋಶೂಟ್ ಗಲೀಜು ಎನಿಸುವಂತಹ ಚರಂಡಿಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದರು. ಕಸ, ಪ್ಲಾಸ್ಟಿಕ್ , ತ್ಯಾಜ್ಯಗಳು ರಾಶಿ ತುಂಬಿದ ಚರಂಡಿಯ ಮಧ್ಯಭಾಗದಲ್ಲಿ ನಿಂತು ಕೊಂಡು ಕ್ಯಾಮೆರಾಗೆ ವಿಭಿನ್ನ ಭಂಗಿಯಲ್ಲಿ ಪೋಸ್ ನೀಡಿದ್ದರು. ಈ ಜೋಡಿಯ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಹಳ್ಳಿಯ ಸೊಗಡಿನಲ್ಲಿ ಜೋಡಿಯ ಫೋಟೋಶೂಟ್ : ಹಳ್ಳಿ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಈ ಹಿಂದೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವ ರೈತ ಅಭಿಲಾಷ್ ಚನ್ನಪಟ್ಟಣದ ಕೃತಿಕಾ ಎಂಬುವವರು ಹಳ್ಳಿಯ ಸೊಗಡಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಈ ಪ್ರೀ ವೆಡ್ಡಿಂಗ್ ಶೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಅಪ್ಪಟ ಮಣ್ಣಿನ ಮಕ್ಕಳಂತೆ ನವಜೋಡಿಯ ಫೋಟೋಶೂಟ್ : ಅಪ್ಪಟ ಮಣ್ಣಿನ ಮಕ್ಕಳಂತೆ ಹಳ್ಳಿಯ ಸೊಗಡಿನಲ್ಲಿ ನವ ಜೋಡಿಗಳು ಸಾಂಪ್ರದಾಯಿಕವಾಗಿ ಹೊಲದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಹೊಸ ಜೀವನಕ್ಕೆ ಕಾಲಿಡುತ್ತಿದ್ದ ಈ ಜೋಡಿಯು ಸಾಂಪ್ರದಾಯಿಕವಾಗಿ ಹೊಲಗದ್ದೆಗಳಲ್ಲಿ ಉಳುಮೆ ಮಾಡುತ್ತ, ವಧು ಕೃಷಿಕನ ಪತ್ನಿಯಾಗಿ ಬುತ್ತಿ ಹಿಡಿದು ಬರುವ ಈ ಎಲ್ಲಾ ದೃಶ್ಯದಿಂದಾಗಿ ಈ ಫೋಟೋ ಶೂಟ್ ಆತ್ಯಾರ್ಕಷವಾಗಿ ಮೂಡಿ ಬಂದಿತ್ತು. ಜೋಡಿಯ ಈ ಫೋಟೋ ಶೂಟ್ ಗೆ ನೋಡುಗರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ-ವೆಡ್ಡಿಂಗ್ ಶೂಟ್: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ-ವೆಡ್ಡಿಂಗ್ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಗುತ್ತಿಗೆ ಆಧಾರಿತ ವೈದ್ಯರಾಗಿರುವ ಡಾ. ಅಭಿಷೇಕ್ ಎನ್ನುವವರು ವೆಡ್ಡಿಂಗ್ ಶೂಟ್ ಮಾಡಿಸಿದವರಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿದೆ.




