AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಜೀವಿಗಳು ತಮ್ಮ ಸಂಗಾತಿಗೆ ತುಂಬಾನೇ ನಿಷ್ಠವಾಗಿರುತ್ತಂತೆ

ಮನುಷ್ಯರೇ ಆಗಿರಲಿ ಅಥವಾ ಪ್ರಾಣಿಗಳೇ ಪ್ರೀತಿಯಲ್ಲಿ ಆಕರ್ಷಣೆ ಕಳೆದುಕೊಂಡಾಗ ಇನ್ನೊರ್ವರತ್ತ ಆಕರ್ಷಿತರಾಗುವುದಿದೆ. ಅದರಲ್ಲೂ ಇಂದಿನ ದಿನಗಳಲ್ಲಿ ಮನುಷ್ಯರಲ್ಲಿ ಪ್ರೀತಿ, ಪ್ರೇಮ, ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ. ಡಿವೋರ್ಸ್‌, ಪ್ರೀತಿಯಲ್ಲಿ ಮೋಸ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಆದ್ರೆ ಈ ಕೆಲವೊಂದಿಷ್ಟು ಜೀವಿಗಳು ಪ್ರೀತಿಯಲ್ಲಿ ತುಂಬಾನೇ ನಿಷ್ಠವಾಗಿರುತ್ತಂತೆ. ಹೌದು ಇವುಗಳು ತಮ್ಮ ಸಂಗಾತಿಗೆ ಜೀವನದುದ್ದಕ್ಕೂ ನಿಷ್ಠವಾಗಿರುತ್ತವೆ. ಒಂದು ವೇಳೆ ತನ್ನ ಸಂಗಾತಿ ಸಾವನ್ನಪ್ಪಿದರೆ ಆ ಜೀವಿ ಒಂಟಿಯಾಗಿಯೇ ಜೀವನಪರ್ಯಂತ ಬದುಕುತ್ತವಂತೆ. ಹಾಗಿದ್ರೆ ತಮ್ಮ ಸಂಗಾತಿಗೆ ತುಂಬಾನೇ ನಿಷ್ಠವಾಗಿರುವ ಜೀವಿಗಳು ಯಾವುದೆಂಬುದನ್ನು ನೋಡೋಣ ಬನ್ನಿ.

ಮಾಲಾಶ್ರೀ ಅಂಚನ್​
|

Updated on:Jun 11, 2025 | 10:26 PM

Share
ಹಂಸಗಳು: ಹಂಸ ಜೋಡಿಗಳನ್ನು  ಪ್ರೀತಿಯ ನಿಜವಾದ  ಸಂಕೇತವೆಂದು ಪರಿಗಣಿಸಲಾಗುತ್ತದೆ. ಒಂದು ಹಂಸವು ಇನ್ನೊಂದರೊಂದಿಗೆ ಜೋಡಿಯಾದ ನಂತರ, ಅವು ಒಟ್ಟಿಗೆ ಗೂಡುಗಳನ್ನು ನಿರ್ಮಿಸುತ್ತವೆ, ಮಕ್ಕಳನ್ನು ಒಟ್ಟಿಗೆ ಬೆಳೆಸುತ್ತವೆ ಮತ್ತು ಪೋಷಕರ ಕರ್ತವ್ಯಗಳನ್ನು ಹಂಚಿಕೊಳ್ಳುತ್ತವೆ ಹೀಗೆ ಇವಗಳು ಒಮ್ಮೆ ಜೋಡಿಯಾದ ನಂತರ,  ಯಾವಾಗಲೂ ಜೊತೆಯಾಗಿಯೇ ಇರುತ್ತವೆ.  ಪ್ರೀತಿ ಮತ್ತು ನಿಷ್ಠೆಗೆ ಹೆಸರುವಾಸಿಯಾಗಿರುವ ಇವುಗಳುತಮ್ಮ ಸಂಗಾತಿ ಸತ್ತರೆ, ಇನ್ನೊಬ್ಬ ಸಂಗಾತಿಯನ್ನು ಕಂಡುಕೊಳ್ಳುವುದಿಲ್ಲ. ಇವುಗಳು ಒಂದೇ ಸಂಗಾತಿಗೆ ನಿಷ್ಠವಾಗಿರುತ್ತದೆ.

1 / 6
ತೋಳಗಳು: ತೋಳಗಳು ಅಪಾಯಕಾರಿಯಾಗಿ ಕಾಣುತ್ತವೆ,  ಆದರೆ ಅವುಗಳು ಪ್ರೀತಿಯ ವಿಚಾರದಲ್ಲಿ ತುಂಬಾನೇ ಸೌಮ್ಯವಾಗಿರುತ್ತವೆ. ಅವುಗಳು ತಮ್ಮ ಕುಟುಂಬ ಮತ್ತು ಸಂಗಾತಿಗೆ ಬಹಳ ನಿಷ್ಠವಾಗಿರುತ್ತವೆ. ಸಾಮಾನ್ಯವಾಗಿ ಅವು ಒಂದೇ ಸಂಗಾತಿಯೊಂದಿಗೆ ಜೀವನಪರ್ಯಂತ ಜೀವಿಸುತ್ತವೆ.  ಸಂಗಾತಿಯೊಂದಿಗೆ ಒಟ್ಟಿಗೆ ಜೀವಿಸುವ, ಬೇಟೆಯಾಡುವ ಮತ್ತು ಮರಿಗಳನ್ನು ನೋಡಿಕೊಳ್ಳುವ ತೋಳಗಳು ತಮ್ಮ ಸಂಗಾತಿ ಸತ್ತರೆ, ಅವು ಹೆಚ್ಚಾಗಿ ಒಂಟಿಯಾಗಿಯೇ  ವಾಸಿಸುತ್ತವೆ.

2 / 6
ಬೋಳು ಹದ್ದು: ಅಮೆರಿಕ ರಾಷ್ಟ್ರೀಯ ಪಕ್ಷಿಯಾದ ಬೋಳು ಹದ್ದುಗಳು ತಮ್ಮ ಸಂಗಾತಿಗೆ ತುಂಬಾನೇ ನಿಷ್ಠವಾಗಿರುತ್ತವೆ.  ಒಮ್ಮೆ ಅವು ಸಂಗಾತಿಯನ್ನು ಆರಿಸಿಕೊಂಡರೆ, ಅವು ಜೀವನಪರ್ಯಂತ ಒಂದೇ ಸಂಗಾತಿಯ ಜೊತೆಗೆ ಜೀವಿಸುತ್ತವೆ.

3 / 6
ಪೆಂಗ್ವಿನ್‌: ಪೆಂಗ್ವಿನ್‌ಗಳು ತಮ್ಮ ಸಂಗಾತಿಗೆ ತುಂಬಾ ನಿಷ್ಠವಾಗಿರುತ್ತವೆ. ಇವುಗಳು ತಮ್ಮ ಜೀವನದುದ್ದಕ್ಕೂ ಒಂದೇ ಸಂಗಾತಿಯೊಂದಿಗೆ ಇರುತ್ತವೆ. ಅವುಗಳು ಒಟ್ಟಿಗೆ ಮರಿಗಳನ್ನು ನೋಡಿಕೊಳ್ಳುತ್ತವೆ. ಪೆಂಗ್ವಿನ್‌ಗಳ ನಡುವಿನ ಪ್ರೀತಿಯ ಭಾವನೆ ತುಂಬಾ ಪ್ರಬಲವಾಗಿರುತ್ತದೆ.

4 / 6
ಬೀವರ್‌ಗಳು: ಬೀವರ್‌ಗಳನ್ನು ವಿಶ್ವದ ಅತ್ಯಂತ ಶ್ರಮಶೀಲ ಪ್ರಾಣಿಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಅತ್ಯುತ್ತಮ ಎಂಜಿನಿಯರ್‌ ಅಂತಲೇ ಹೆಸರುವಾಸಿಯಾಗಿರುವ ಈ ಪುಟ್ಟ ಪ್ರೀತಿ, ಸಂಬಂಧದ ವಿಚಾರದಲ್ಲೂ ತುಂಬಾನೇ ನಿಷ್ಠವಾಗಿರುತ್ತವೆ. ಈ ಪ್ರಾಣಿಗಳು ಪ್ರತಿಯೊಂದು ಕೆಲಸವನ್ನು ತಮ್ಮ ಜೀವನ ಸಂಗಾತಿಯೊಂದಿಗೆ ಒಟ್ಟಿಗೆ ಮಾಡುತ್ತವೆ. ಅವುಗಳು ತಮ್ಮ ಇಡೀ ಜೀವನವನ್ನು ತಮ್ಮ ಸಂಗಾತಿಯೊಂದಿಗೆ ಕಳೆಯುತ್ತವೆ.

5 / 6
ಗಿಬ್ಬನ್ಸ್: ಮಂಗನ ಜಾತಿಗೆ ಸೇರಿದ ಈ ಪ್ರಾಣಿಗಳು ಸಹ ಸಂಗಾತಿಗೆ ತುಂಬಾ ನಿಷ್ಠವಾಗಿರುತ್ತವೆ. ಅವು ತಮ್ಮ ಸಂಗಾತಿಗಳೊಂದಿಗೆ ನಿಕಟ ಬಂಧಗಳನ್ನು ಸೃಷ್ಟಿಸುತ್ತವೆ. ಅವು ತಮ್ಮ ಮರಿಗಳನ್ನು ಒಟ್ಟಿಗೆ ಬೆಳೆಸುತ್ತವೆ ಮತ್ತು ಹೆಚ್ಚಿನ ಸಮಯವನ್ನು ತಮ್ಮ ಸಂಗಾತಿಯೊಂದಿಗೆ ಕಳೆಯುತ್ತವೆ. ತಮ್ಮ ಸಂಗಾತಿ ಸತ್ತರೆ ಒಂಟಿಯಾಗಿ ವಾಸಿಸುತ್ತವೆ.

6 / 6

Published On - 10:25 pm, Wed, 11 June 25

ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ

ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್

ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ

ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ