ಹೈದರಾಬಾದ್ ಪೊಲೀಸ್ ಕಚೇರಿಯಲ್ಲಿ ತೆಲುಗು ಸಿನಿಮಾ ಸ್ಟಾರ್ಗಳು: ಚಿತ್ರಗಳಲ್ಲಿ ನೋಡಿ
Tollywood top movie stars: ಮೆಗಾಸ್ಟಾರ್ ಚಿರಂಜೀವಿ, ಅಕ್ಕಿನೇನಿ ನಾಗಾರ್ಜು, ವೆಂಕಟೇಶ್, ನಾನಿ ಇನ್ನೂ ಹಲವಾರು ಮಂದಿ ಸ್ಟಾರ್ ನಟರು, ನಿರ್ಮಾಪಕರುಗಳು ಹೈದರಾಬಾದ್ನ ಪೊಲೀಸ್ ಆಯುಕ್ತರ ಕಚೇರಿಗೆ ಪ್ರಮುಖವಾದ ಕಾರಣದಿಂದಾಗಿ ಭೇಟಿ ನೀಡಿದ್ದರು. ತೆಲುಗು ಚಿತ್ರರಂಗದೊಂದಿಗೆ ಪೊಲೀಸರು ಸಭೆ ನಡೆಸಿ, ಕೆಲವು ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.

- ತೆಲುಗು ಚಿತ್ರರಂಗದ ಹಲವಾರು ಟಾಪ್ ಸ್ಟಾರ್ ನಟರು, ನಿರ್ದೇಶಕರು, ನಿರ್ಮಾಪಕರುಗಳು ಹೈದರಾಬಾದ್ನ ಪೊಲೀಸ್ ಕಚೇರಿಯಲ್ಲಿ ಸೇರಿದ್ದರು.
- ಅಸಲಿಗೆ ಹೈದರಾಬಾದ್ ಪೊಲೀಸರೇ ತೆಲುಗು ಚಿತ್ರರಂಗದ ಟಾಪ್ ನಟರು, ನಿರ್ಮಾಪಕರು, ನಿರ್ದೇಶಕರುಗಳಿಗೆ ಠಾಣೆಗೆ ಬರುವಂತೆ ಆಹ್ವಾನ ನೀಡಿದ್ದರು.
- ಚಿತ್ರರಂಗಕ್ಕೆ ಮಾರಕವಾಗಿರುವ ಪೈರಸಿ ಕುರಿತಂತೆ ಹೈದರಾಬಾದ್ ಪೊಲೀಸರು ಪ್ರಮುಖ ಪ್ರಕರಣವೊಂದನ್ನು ಪತ್ತೆ ಹಚ್ಚಿ ಕ್ರಮ ಕೈಗೊಂಡಿರುವ ಕಾರಣ ಪೊಲೀಸರೇ ತೆಲುಗು ಚಿತ್ರರಂಗದವರನ್ನು ಕರೆಸಿ ಮಾಹಿತಿ ಹಂಚಿಕೊಂಡರು.
- ಬಲು ಸಕ್ರಿಯವಾಗಿದ್ದ ಕೆಲ ಪ್ರಮುಖ ಪೈರಸಿ ರಾಕೆಟ್ ಅನ್ನು ಹೈದರಾಬಾದ್ ಪೊಲೀಸರು ಹಿಡಿದಿದ್ದಾರೆ. ಅವರ ಕಾರ್ಯವೈಖರಿ, ಪೈರಸಿ ತಡೆಯಲು ತೆಲುಗು ಚಿತ್ರರಂಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪೊಲೀಸರು ಈ ವೇಳೆ ವಿವರಿಸಿದ್ದಾರೆ.
- ಸಿನಿಮಾಗಳು ಬಿಡುಗಡೆ ಆಗುವ ಮುಂಚೆಯೇ ಡಿಜಿಟಲ್ ಹ್ಯಾಕರ್ಗಳು ಹ್ಯಾಕ್ ಮಾಡಿ ಸಿನಿಮಾಗಳನ್ನು ಕದಿಯುತ್ತಿದ್ದ ಬಗ್ಗೆ ಪೊಲೀಸರು ಚಿತ್ರರಂಗದವರಿಗೆ ಮಾಹಿತಿ ನೀಡಿದ್ದಾರೆ.
- ಮೆಗಾಸ್ಟಾರ್ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಅಲ್ಲು ಅರವಿಂದ್, ಸುರೇಶ್ ಬಾಬು, ನಾನಿ, ರಾಮ್ ಪೋತಿನೇನಿ, ದಿಲ್ ರಾಜು ಇನ್ನೂ ಹಲವಾರು ಮಂದಿ ಈ ಸಭೆಯಲ್ಲಿ ಭಾಗಿ ಆಗಿದ್ದರು.










