- Kannada News Photo gallery UAE Astronaut Sultan Al Neyadi Captures Cyclone Biparjoy From Space Station
Cyclone Biparjoy: ಬಾಹ್ಯಾಕಾಶದಿಂದ ಬಿಪೋರ್‌ಜಾಯ್ ಚಂಡಮಾರುತ ಹೇಗೆ ಕಾಣಿಸುತ್ತದೆ?; ಚಿತ್ರಗಳಲ್ಲಿ ನೋಡಿ
ಬಾಹ್ಯಾಕಾಶದಿಂದ ನೋಡಿದರೆ ಬಿಪೋರ್‌ಜಾಯ್ ಚಂಡಮಾರುತ ಹೇಗೆ ಕಾಣುತ್ತದೆ? ಯುಎಇ ಗಗನಯಾತ್ರಿ ಸುಲ್ತಾನ್ ಅಲ್ ನೆಯಾಡಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆ ಹಿಡಿದಿರುವ ಚಿತ್ರಗಳು ಇಲ್ಲಿವೆ.
Updated on:Jun 15, 2023 | 2:50 PM

ಬಿಪೋರ್‌ಜಾಯ್ ಚಂಡಮಾರುತದ ಚಿತ್ರವನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಯೊಬ್ಬರು ಸೆರೆ ಹಿಡಿದಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗಗನಯಾತ್ರಿ ಸುಲ್ತಾನ್ ಅಲ್ ನೆಯಾಡಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಅರಬ್ಬೀ ಸಮುದ್ರದ ಮೇಲೆ ಬಿಪೋರ್‌ಜಾಯ್ ಚಂಡಮಾರುತದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ

ನನ್ನ ಹಿಂದಿನ ವಿಡಿಯೊದಲ್ಲಿ ಭರವಸೆ ನೀಡಿದಂತೆ ಬಿಪೋರ್‌ಜಾಯ್ ಚಂಡಮಾರುತವು ಅರಬ್ಪೀ ಸಮುದ್ರದಲ್ಲಿ ರೂಪುಗೊಳ್ಳುವ ಕೆಲವು ಚಿತ್ರಗಳನ್ನು ನಾನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಎರಡು ದಿನಗಳಲ್ಲಿ ಕ್ಲಿಕ್ ಮಾಡಿದ್ದೇನೆ ಎಂದು ಅಲ್ ನೆಯಾಡಿ ಟ್ವೀಟ್ ಮಾಡಿದ್ದಾರೆ.

ಎರಡು ದಿನಗಳ ಹಿಂದೆ ಅರಬ್ಬೀ ಸಮುದ್ರದ ಮೇಲೆ ದೈತ್ಯಾಕಾರದ ಚಂಡಮಾರುತವು ಭಾರತದ ಕರಾವಳಿಯತ್ತ ಸಾಗುತ್ತಿರುವುದನ್ನು ತೋರಿಸುವ ವಿಡಿಯೊವನ್ನು ಅಲ್ ನೆಯಾಡಿ ಹಂಚಿಕೊಂಡಿದ್ದರು.

ಗುರುವಾರ ಸಂಜೆ ಬಿಪೋರ್‌ಜಾಯ್ ಚಂಡಮಾರುತ ಗುಜರಾತಿನ ಕಚ್‌ಗೆ ಅಪ್ಪಳಿಸುವ ನಿರೀಕ್ಷೆಯಿದೆ. 74,000 ಕ್ಕೂ ಹೆಚ್ಚು ಜನರನ್ನು ಕರಾವಳಿ ಪ್ರದೇಶಗಳಿಂದ ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ

ಬಿಪೋರ್‌ಜಾಯ್ ಚಂಡಮಾರುತವು ಪ್ರಸ್ತುತ ಗುಜರಾತ್ ಕರಾವಳಿಯಿಂದ ಸುಮಾರು 200 ಕಿಮೀ ದೂರದಲ್ಲಿ ಮಾಂಡ್ವಿ ಮತ್ತು ಕರಾಚಿ ನಡುವೆ ಜಖೌ ಬಂದರಿನ ಬಳಿ ಸಂಜೆ 4-8 ಗಂಟೆಯ ನಡುವೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಚಂಡಮಾರುತವು ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳು ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಯಲ್ಲಿ ಭಾರೀ ಮಳೆ ಮತ್ತು ಪ್ರಬಲ ಗಾಳಿಗೆ ಕಾರಣವಾಗಲಿದೆ

ವರ್ಗ 3 ರ ಅತ್ಯಂತ ತೀವ್ರ ಚಂಡಮಾರುತ ಎಂದು ವರ್ಗೀಕರಿಸಿರುವ ಬಿಪೋರ್‌ಜಾಯ್ ಚಂಡಮಾರುತವು ಗಂಟೆಗೆ 120-130 ಕಿಮೀ ವೇಗದಲ್ಲಿ ಗಾಳಿಯನ್ನು ತರುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
Published On - 2:48 pm, Thu, 15 June 23



















