ಜೈಲಿಂದ ಹೊರಬಂದ ಅಲ್ಲು ಅರ್ಜುನ್ ಅನ್ನು ಭೇಟಿಯಾದ ನಟ ಉಪೇಂದ್ರ
Upendra-Allu Arjun: ಜೈಲಿನಿಂದ ಹೊರ ಬಂದಿರುವ ಅಲ್ಲು ಅರ್ಜುನ್ ಅನ್ನು ಹಲವು ಅಭಿಮಾನಿಗಳು, ಚಿತ್ರರಂಗದ ಪ್ರಮುಖರು ಅಲ್ಲು ಅರ್ಜುನ್ ಮನೆಗೆ ತೆರಳಿ ಅವರನ್ನು ಇಂದು ಭೇಟಿ ಆಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ನಟ ಉಪೇಂದ್ರ, ನಿರ್ಮಾಪಕ, ಲಹರಿ ಸಂಸ್ಥೆ ಮಾಲೀಕ ಲಹರಿ ವೇಲು ಅವರು ಸಹ ಅಲ್ಲು ಅರ್ಜುನ್ ನಿವಾಸಕ್ಕೆ ತೆರಳಿ ಅಲ್ಲು ಅರ್ಜುನ್ ಅನ್ನು ಭೇಟಿಯಾಗಿದ್ದಾರೆ.
Updated on: Dec 14, 2024 | 2:54 PM

ನಟ ಅಲ್ಲು ಅರ್ಜುನ್ ಇಂದು ಮುಂಜಾನೆ (ಡಿಸೆಂಬರ್ 14) ಚಂಚಲಗೂಡ ಜೈಲಿನಿಂದ ಹೊರಗೆ ಬಂದಿದ್ದಾರೆ. ಹಲವು ಅಭಿಮಾನಿಗಳು, ಚಿತ್ರರಂಗದ ಪ್ರಮುಖರು ಅಲ್ಲು ಅರ್ಜುನ್ ಮನೆಗೆ ತೆರಳಿ ಅವರನ್ನು ಇಂದು ಭೇಟಿ ಆಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ.

ಇದೇ ದಿನ ನಟ ಉಪೇಂದ್ರ, ನಿರ್ಮಾಪಕ, ಲಹರಿ ಸಂಸ್ಥೆ ಮಾಲೀಕ ಲಹರಿ ವೇಲು ಅವರು ಸಹ ಅಲ್ಲು ಅರ್ಜುನ್ ನಿವಾಸಕ್ಕೆ ತೆರಳಿ ಅಲ್ಲು ಅರ್ಜುನ್ ಅನ್ನು ಭೇಟಿಯಾಗಿದ್ದಾರೆ. ಉಪ್ಪಿ-ಅಲ್ಲು ಭೇಟಿಯ ಚಿತ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಉಪೇಂದ್ರ ಅವರು ತಮ್ಮ ‘ಯುಐ’ ಸಿನಿಮಾದ ಪ್ರಚಾರಕ್ಕಾಗಿ ಹೈದರಾಬಾದ್ಗೆ ತೆರಳಿದ್ದವು. ಈ ವೇಳೆ ಅಲ್ಲು ಅರ್ಜುನ್ ನಿವಾಸಕ್ಕೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಉಪೇಂದ್ರ ಹಾಗೂ ಅಲ್ಲು ಅರ್ಜುನ್ ಈ ಹಿಂದೆ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲಿ ನಟಿಸಿದ್ದರು.

ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾವನ್ನು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರ ಗೀತಾ ಪ್ರೊಡಕ್ಷನ್ ಮೂಲಕ ಆಂಧ್ರ ಮತ್ತು ತೆಲಂಗಾಣಗಳಲ್ಲಿ ವಿತರಣೆ ಮಾಡಲಾಗುತ್ತಿದೆ.

‘ಯುಐ’ ಸಿನಿಮಾವನ್ನು ಉಪ್ಪಿ ನಿರ್ದೇಶಿಸಿ, ನಟಿಸಿದ್ದು, ಈ ಸಿನಿಮಾ 2050 ರಲ್ಲಿ ನಡೆಯುವ ಕತೆಯಂತೆ. ಸಿನಿಮಾದ ಹಾಡು ಹಾಗೂ ಟ್ರೈಲರ್ ಬಹುವಾಗಿ ಗಮನ ಸೆಳೆದಿದೆ. ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ ಇನ್ನಿತರೆ ಭಾಷೆಗಳಲ್ಲಿ ಡಿಸೆಂಬರ್ 20ಕ್ಕೆ ಬಿಡುಗಡೆ ಆಗಲಿದೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



