Urfi Javed: ‘ನಿಮ್ಮ ತಾಯಿ, ತಂಗಿ, ಪ್ರೇಯಸಿ ಬಟ್ಟೆ ಬಗ್ಗೆ ಕೆಟ್ಟ ಕಮೆಂಟ್ ಮಾಡಿ, ನನ್ನ ಬಟ್ಟೆ ಬಗ್ಗೆ ಅಲ್ಲ’: ಉರ್ಫಿ ಗರಂ
Urfi Javed Viral Photo: ಪಾಪರಾಜಿಗಳ ಜೊತೆ ಯಾವಾಗಲೂ ನಗುತ್ತಾ ಮಾತನಾಡುವ ಉರ್ಫಿ ಜಾವೇದ್ ಅವರು ಈಗ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಎಲ್ಲರಿಗೂ ಖಡಕ್ ವಾರ್ನಿಂಗ್ ನೀಡಿದ್ದಾರೆ.
Updated on:Sep 07, 2022 | 2:42 PM

Urfi Javed slams paps for badly commenting on her dress Video goes viral

Urfi Javed slams paps for badly commenting on her dress Video goes viral

‘ನಿಮ್ಮ ತಾಯಿ, ತಂಗಿ, ಗರ್ಲ್ಫ್ರೆಂಡ್ ಬಟ್ಟೆಯ ಬಗ್ಗೆ ಕೆಟ್ಟದಾಗಿ ಮಾತನಾಡಿ, ನನ್ನ ಬಟ್ಟೆ ಬಗ್ಗೆ ಮಾತನಾಡಬೇಡಿ’ ಎಂದು ಉರ್ಫಿ ಜಾವೇದ್ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಇನ್ನೊಮ್ಮೆ ಈ ರೀತಿ ಮಾತನಾಡಿದರೆ ಹುಷಾರ್ ಎಂದು ಅವರು ಆವಾಜ್ ಹಾಕಿದ್ದಾರೆ.

ಪಾಪರಾಜಿಗಳನ್ನು ಉರ್ಫಿ ಜಾವೇದ್ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉರ್ಫಿ ಮಾಡಿದ್ದು ಸರಿ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಇಷ್ಟು ಒರಟಾಗಿ ನಡೆದುಕೊಳ್ಳಬಾರದಿತ್ತು ಎಂದು ಇನ್ನು ಕೆಲವರು ಅಭಿಪ್ರಾಯ ತಿಳಿಸಿದ್ದಾರೆ.

‘ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಸ್ಪರ್ಧಿಸಿದ ಬಳಿಕ ಉರ್ಫಿ ಜಾವೇದ್ ಅವರ ಜನಪ್ರಿಯತೆ ಹೆಚ್ಚಿತು. ನಂತರ ಅವರು ವಿಚಿತ್ರ ಬಟ್ಟೆಗಳ ಮೂಲಕವೇ ಹೆಚ್ಚು ಗುರುತಿಸಿಕೊಳ್ಳಲು ಆರಂಭಿಸಿದರು. ಪ್ರತಿ ದಿನ ಅವರ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತವೆ.
Published On - 2:42 pm, Wed, 7 September 22



















