- Kannada News Photo gallery US Open 2022 prize money sees a bump with maximum rewards going to qualifiers
US Open 2022: ಗೆದ್ದವರಿಗೆ ಸಿಗುವ ಹಣವೆಷ್ಟು ಗೊತ್ತಾ? ಐಪಿಎಲ್ ಚಾಂಪಿಯನ್ ತಂಡಕ್ಕೂ ಇಷ್ಟು ಮೊತ್ತ ಸಿಗುವುದಿಲ್ಲ..!
US Open 2022: ಯುಎಸ್ ಓಪನ್‌ನ ಬಹುಮಾನದ ಹಣವನ್ನು ಘೋಷಿಸಲಾಗಿದ್ದು, ಅದನ್ನು ಗೆಲ್ಲುವ ಸಿಂಗಲ್ಸ್ ಆಟಗಾರನಿಗೆ ಈ ಬಾರಿ 26 ಮಿಲಿಯನ್ ಡಾಲರ್, ಎಂದರೆ 20.73 ಕೋಟಿ ರೂ. ಬಹುಮಾನ ಸಿಗಲಿದೆ.
Updated on:Aug 19, 2022 | 6:45 PM

ಐಪಿಎಲ್ 2022 ರಲ್ಲಿ ಚಾಂಪಿಯನ್ ಆದ ಗುಜರಾತ್ ಟೈಟಾನ್ಸ್ ಬಹುಮಾನವಾಗಿ 20 ಕೋಟಿ ಗಳಿಸಿತು. ಆದರೆ ಟೆನಿಸ್‌ನಲ್ಲಿ ಚಾಂಪಿಯನ್ ಆಗುವ ಸಿಂಗಲ್ಸ್ ಆಟಗಾರನಿಗೆ ಐಪಿಎಲ್ ತಂಡಕ್ಕಿಂತ ಹೆಚ್ಚು ಹಣ ಸಿಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ. ಇದು ಅಚ್ಚರಿಯಾದರೂ ಸತ್ಯ.

ವಾಸ್ತವವಾಗಿ, ಯುಎಸ್ ಓಪನ್‌ನ ಬಹುಮಾನದ ಹಣವನ್ನು ಘೋಷಿಸಲಾಗಿದ್ದು, ಅದನ್ನು ಗೆಲ್ಲುವ ಸಿಂಗಲ್ಸ್ ಆಟಗಾರನಿಗೆ ಈ ಬಾರಿ 26 ಮಿಲಿಯನ್ ಡಾಲರ್, ಎಂದರೆ 20.73 ಕೋಟಿ ರೂ. ಬಹುಮಾನ ಸಿಗಲಿದೆ. ಈ ಬಾರಿ ಗ್ರ್ಯಾಂಡ್‌ಸ್ಲಾಮ್‌ನ ಒಟ್ಟು ಬಹುಮಾನದ ಮೊತ್ತವನ್ನು 6 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ .

ಅಮೇರಿಕನ್ ಟೆನಿಸ್ ಅಸೋಸಿಯೇಷನ್ ಪ್ರಧಾನ ಸುತ್ತಿಗೆ ಪ್ರವೇಶಿಸಿದ ಆಟಗಾರನಿಗೆ 80,000 ಡಾಲರ್ ಬಹುಮಾನ ಸಿಗಲಿದೆ. ಎರಡನೇ ಸುತ್ತನ್ನು ತಲುಪಿದರೆ 1.21 ಮಿಲಿಯನ್ ಡಾಲರ್ ಬಹುಮಾನ ಪಡೆಯಲಿದ್ದಾರೆ.

ಯುಎಸ್ ಓಪನ್‌ನ ಕ್ವಾರ್ಟರ್-ಫೈನಲ್ ತಲುಪುವವರು 445,000 ಡಾಲರ್ ಮತ್ತು ಸೆಮಿ-ಫೈನಲ್‌ನಲ್ಲಿ ಆಡುವವರು 705,000 ಡಾಲರ್ ಪಡೆಯುತ್ತಾರೆ. ರನ್ನರ್ ಅಪ್ಗೆ 1.3 ಮಿಲಿಯನ್ ಡಾಲರ್ ನೀಡಲಾಗುವುದು. ಕಳೆದ ಬಾರಿ ಒಟ್ಟು ಬಹುಮಾನದ ಮೊತ್ತ 55 ಮಿಲಿಯನ್ ಡಾಲರ್ ಆಗಿತ್ತು.

ಈ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಮೊತ್ತ 52 ಮಿಲಿಯನ್ ಡಾಲರ್ ಆಗಿದ್ದರೆ, ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್‌ನಲ್ಲಿ ಬಹುಮಾನದ ಮೊತ್ತ ಸುಮಾರು 49 ಮಿಲಿಯನ್ ಡಾಲರ್ ಆಗಿತ್ತು. ಆಗಸ್ಟ್ 29 ರಿಂದ ಈ ಬಾರಿಯ US ಓಪನ್ ಪ್ರಾರಂಭವಾಗಲಿದೆ.
Published On - 6:45 pm, Fri, 19 August 22









