ಗ್ಲಾಮರ್​ ಹೆಚ್ಚುತ್ತಿದೆ ಆದರೆ ಅವಕಾಶ ಸಿಗುತ್ತಿಲ್ಲ; ಕಷ್ಟದಲ್ಲಿದೆ ನಟಿ ಹನಿ ರೋಸ್​ ಭವಿಷ್ಯ

‘ವೀರ ಸಿಂಹ ರೆಡ್ಡಿ’ ಚಿತ್ರದ ಮೂಲಕ ಹನಿ ರೋಸ್​ ಖ್ಯಾತಿ ಹೆಚ್ಚಿತು. ಸೋಶಿಯಲ್​ ಮೀಡಿಯಾದಲ್ಲಿ ಅವರು ಸಖತ್​ ಆ್ಯಕ್ಟೀವ್ ಆಗಿದ್ದಾರೆ.

ಮದನ್​ ಕುಮಾರ್​
|

Updated on: Apr 12, 2023 | 10:58 AM

​ಖ್ಯಾತ ನಟಿ ಹನಿ ರೋಸ್​ ಅವರು ಗ್ಲಾಮರಸ್​ ಫೋಟೋಗಳ ಮೂಲಕ ಪಡ್ಡೆಗಳ ಕಣ್ಣು ಕುಕ್ಕುತ್ತಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ಟಾಲಿವುಡ್​ ಅಂಗಳದಲ್ಲಿ ಟಾಕ್​ ಶುರುವಾಗಿದೆ.

1 / 5
ಈ ವರ್ಷ ತೆರೆಕಂಡ ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ಹನಿ ರೋಸ್​ ಅವರು ಬಾಲಯ್ಯಗೆ ಜೋಡಿಯಾಗಿ ನಟಿಸಿದರು. ಸಿನಿಮಾದ ಕಾರ್ಯಕ್ರಮಗಳಲ್ಲಿ ಅವರು ಹಾಟ್​ ಆಗಿ ಕಾಣಿಸಿಕೊಂಡು ಗಮನ ಸೆಳೆದರು. ಆದರೆ ಹೊಸ ಅವಕಾಶಗಳು ಮಾತ್ರ ಅವರಿಗೆ ಸಿಗುತ್ತಿಲ್ಲ.

2 / 5
‘ವೀರ ಸಿಂಹ ರೆಡ್ಡಿ’ ಚಿತ್ರ ಸೂಪರ್​ ಹಿಟ್​ ಆದಾಗ ಹನಿ ರೋಸ್​ ಜನಪ್ರಿಯತೆ ಹೆಚ್ಚಿತು. ಇನ್ಮುಂದೆ ಅವರು ಟಾಲಿವುಡ್​ನಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಾರೆ ಎಂದುಕೊಳ್ಳಲಾಯಿತು. ಆದರೆ ನಿರೀಕ್ಷೆಯಂತೆ ಏನೂ ಆಗುತ್ತಿಲ್ಲ. ಹನಿ ರೋಸ್​ ಹೊಸ ಸಿನಿಮಾ ಒಪ್ಪಿಕೊಂಡ ಬಗ್ಗೆ ವರದಿ ಆಗಿಲ್ಲ.

3 / 5
2005ರಲ್ಲೇ ಹನಿ ರೋಸ್​ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆಗ ಅವರಿಗೆ ಕೇವಲ 14 ವರ್ಷ ವಯಸ್ಸು. ಹೆಚ್ಚಾಗಿ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಅವರು ತಮಿಳು, ಕನ್ನಡ, ತೆಲುಗಿನ ಕೆಲವು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

4 / 5
ಹನಿ ರೋಸ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬಗೆಬಗೆಯ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಟ್ರೆಂಡ್​ನಲ್ಲಿ ಇರಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 27 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.

5 / 5
Follow us