- TV9 Kannada Photo gallery Veerappan History How This Smuggler Became Most Wanted In Karnataka And Tamil Nadu
ವೀರಪ್ಪನ್ ‘ಮೋಸ್ಟ್ ವಾಂಟೆಡ್’ ಎನಿಸಿಕೊಳ್ಳಲು ಕಾರಣ ಒಂದೆರಡಲ್ಲ; ಇಲ್ಲಿದೆ ರಕ್ತಚರಿತ ಇತಿಹಾಸ
ಆನೆಗಳ ದಂತಕ್ಕೆ ಭಾರೀ ಬೆಲೆ ಇದೆ. ಇದು ವೀರಪ್ಪನ್ಗೆ ಗೊತ್ತಿತ್ತು. ದಂತಕ್ಕಾಗಿ ಈತ ಹಲವು ಆನೆಗಳನ್ನು ಹತ್ಯೆ ಮಾಡಿದ್ದ. ಒಂದು ಮೂಲಗಳ ಪ್ರಕಾರ 200-2000 ಸಾವಿರ ಆನೆಗಳನ್ನು ಈತ ಹತ್ಯೆ ಮಾಡಿರಬಹುದು ಎಂದು ಊಹಿಸಲಾಗಿದೆ.
Updated on:Aug 04, 2023 | 1:03 PM

ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಮೋಸ್ಟ್ ವಾಟೆಂಡ್ ಪಟ್ಟ ಪಡೆದಿದ್ದ ವೀರಪ್ಪನ್ ಕುರಿತ ‘ದಿ ಹಂಟ್ ಫಾರ್ ವೀರಪ್ಪನ್’ ಸಾಕ್ಷ್ಯಚಿತ್ರ ನೆಟ್ಫ್ಲಿಕ್ಸ್ ಮೂಲಕ ರಿಲೀಸ್ ಆಗಿದೆ. ಈತ ಯಾರು? ಈತ ಮೋಸ್ಟ್ ವಾಂಟೆಡ್ ಎನಿಸಿಕೊಳ್ಳಲು ಕೇವಲ ಒಂದೆರಡು ಘಟನೆಗಳು ಕಾರಣವಲ್ಲ. ವೀರಪ್ಪನ್ ಬಗ್ಗೆ ಹಲವು ಆರೋಪಗಳಿವೆ.

1952ರ ಜನವರಿ 18ರಂದು ತಮಿಳುನಾಡಿನ ಗೋಪಿನಾಥಂನಲ್ಲಿ ವೀರಪ್ಪನ್ ಜನಿಸಿದ. ಈತ ಜನರಿಗೆ ಹಣದ ಆಮಿಷ ಒಡ್ಡುತ್ತಿದ್ದ. ಸ್ಥಳೀಯರಿಗೆ ಕೈತುಂಬ ಹಣ ನೀಡಿ ಅವರಿಂದ ರಕ್ಷಣೆ ಪಡೆಯುತ್ತಿದ್ದ. ಇದು ಈತನ ನಿತ್ಯ ಕಾಯಕವಾಗಿತ್ತು.

ಆನೆಗಳ ದಂತಕ್ಕೆ ಭಾರೀ ಬೆಲೆ ಇದೆ. ಇದು ವೀರಪ್ಪನ್ಗೆ ಗೊತ್ತಿತ್ತು. ದಂತಕ್ಕಾಗಿ ಈತ ಹಲವು ಆನೆಗಳನ್ನು ಹತ್ಯೆ ಮಾಡಿದ್ದ. ಒಂದು ಮೂಲಗಳ ಪ್ರಕಾರ 200-2000 ಸಾವಿರ ಆನೆಗಳನ್ನು ಈತ ಹತ್ಯೆ ಮಾಡಿರಬಹುದು ಎಂದು ಊಹಿಸಲಾಗಿದೆ. ರಕ್ತಚಂದನದ ಮರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಈತ ಕಳ್ಳಸಾಗಣೆ ಮಾಡಿದ ಮರ ಹಾಗೂ ದಂತಗಳ ಮೌಲ್ಯ 2000+ ಕೋಟಿ ರೂಪಾಯಿ ಎನ್ನಲಾಗಿದೆ.

ವೀರಪ್ಪನ್ ಹುಡುಕಾಟಕ್ಕೆ ಕರ್ನಾಟಕ ಹಾಗೂ ತಮಿಳುನಾಡಿನ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿದರು. ಆದರೆ, ಸಮನ್ವಯದ ಕೊರೆತೆಯಿಂದ ಇದು ಸಾಧ್ಯವಾಗಿಲ್ಲ.

ಚಿದಂಬರಂ ಹೆಸರ ಅರಣ್ಯ ಅಧಿಕಾರಿಯನ್ನು ವೀರಪ್ಪನ್ 1987ರಲ್ಲಿ ಹತ್ಯೆ ಮಾಡಿದ. ಬಳಿಕ ಆತ ಅನೇಕರನ್ನು ಕೊಂದಿದ್ದ. ಈ ಕಾರಣಕ್ಕೆ ವಿಶೇಷ ಕಾರ್ಯಪಡೆಯನ್ನು ಸಿದ್ಧಪಡಿಸಲಾಯಿತು. ಕರ್ನಾಟಕದಲ್ಲಿ ಶಂಕರ್ ಬಿದರಿ ಅವರು ಇದರ ನೇತೃತ್ವ ವಹಿಸಿಕೊಂಡಿದ್ದರು. ತಮಿಳುನಾಡಿನಲ್ಲಿ ಸಂಜಯ್ ಅರೋರಾ ಅವರು ಇದರ ಮುಖ್ಯಸ್ಥಿಕೆ ವಹಿಸಿಕೊಂಡರು.

ವೀರಪ್ಪನ್ ವಿಶೇಷ ಕಾರ್ಯಪಡೆಗೆ ತನ್ನದೇ ರೀತಿಯಲ್ಲಿ ಉತ್ತರ ನೀಡಿದ್ದ. 1993ರಲ್ಲಿ ಈತ ಪಾಲಾರ್ನಲ್ಲಿ ಬ್ಲಾಸ್ಟ್ ನಡೆಸಿದ್ದ. ಈ ವೇಳೆ 22 ಜನರು ಮೃತಪಟ್ಟಿದ್ದರು. ವೀರಪ್ಪನ್ ತನ್ನ ಜೀವಿತಾವಧಿಯಲ್ಲಿ 60 ಫಾರೆಸ್ಟ್ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿ 160 ಜನರ ಕೊಂದಿದ್ದಾನೆ ಎನ್ನಲಾಗಿದೆ.

2000ನೇ ಇಸ್ವಿಯಲ್ಲಿ ಡಾ. ರಾಜ್ಕುಮಾರ್ ಅವರನ್ನು ವೀರಪ್ಪನ್ ಕಿಡ್ನ್ಯಾಪ್ ಮಾಡಿದ. ಹಲವು ತಿಂಗಳ ಕಾಲ ರಾಜ್ಕುಮಾರ್ ಕಾಡಲ್ಲೇ ಇದ್ದರು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.

2004ರಲ್ಲಿ ತಮಿಳುನಾಡಿನ ಧರ್ಮಪುರಿಯಲ್ಲಿ ವೀರಪ್ಪನ್ನ ಕೊಲ್ಲಲಾಯಿತು. ಇದಾದ ಬಳಿಕ ಅನೇಕರು ನಿಟ್ಟುಸಿರುವ ಬಿಡುವಂತೆ ಆಯಿತು.
Published On - 12:53 pm, Fri, 4 August 23

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More



