ಬೇರೆ ಲುಕ್ನಲ್ಲಿ ಬಂದ ವಿಜಯ್ ದೇವರಕೊಂಡ; ಹೊಸ ಚಿತ್ರಕ್ಕೆ ಮುಹೂರ್ತ
ತೆಲುಗಿನ ಬೇಡಿಕೆಯ ನಟ ವಿಜಯ್ ದೇವರಕೊಂಡ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಕಿಂಗ್ಡಮ್’ ಚಿತ್ರದಲ್ಲಿ. ಇದಾದ ಬಳಿಕ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಈ ಸಿನಿಮಾದ ಮುಹೂರ್ತದ ಫೋಟೋಗಳು ಗಮನ ಸೆಳೆದಿವೆ. ಈ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ.
Updated on: Oct 12, 2025 | 12:53 PM

ವಿಜಯ್ ದೇವರಕೊಂಡ ಹಾಗೂ ಕೀರ್ತಿ ಸುರೇಶ್ ಅವರು ಒಟ್ಟಾಗಿ ನಟಿಸುತ್ತಿರುವ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದ ಮುಹೂರ್ತದ ಫೋಟೋಗಳು ವೈರಲ್ ಆಗಿವೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.

ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ. ನಿರ್ಮಾಪಕ ನಿರಂಜನ್ ರೆಡ್ಡಿ ಕ್ಯಾಮೆರಾ ಆನ್ ಮಾಡಿದರು. ನಿರ್ದೇಶಕ ಹನು ರಾಘವಪುಡಿ ಮೊದಲ ದೃಶ್ಯವನ್ನು ನಿರ್ದೇಶಿಸಿದರು ಅನ್ನೋದು ವಿಶೇಷ.

ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ದಿಲ್ ರಾಜು ಮತ್ತು ಶಿರೀಶ್ ಈ ಸಿನಿಮಾನ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ SVC 59 ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಿಂದ ವಿಜಯ್ಗೆ ಗೆಲುವು ಸಿಗುತ್ತದೆಯೇ ಎನ್ನುವ ಕುತೂಹಲ ಮೂಡಿದೆ.

ರವಿಕಿರಣ್ ಕೋಲಾ ಈ ಪ್ರಾಜೆಕ್ಟ್ ನಿರ್ದೇಶ ಮಾಡುತ್ತಿದ್ದಾರೆ. ವೆಂಕಟೇಶ್ವರ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಮೂಡಿಬರುತ್ತಿರುವ 59 ಚಿತ್ರ ಇದು ಅನ್ನೋದು ವಿಶೇಷ. ವಿಜಯ್ ಹಾಗೂ ಕೀರ್ತಿ ಸುರೇಶ್ ಅವರನ್ನು ದೊಡ್ಡ ಪರದೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಸಿನಿಮಾದ ಕಥೆ ಗ್ರಾಮೀಣ ಕಥೆಯನ್ನು ಹೊಂದಿದೆ. ಆ್ಯಕ್ಷನ್ ಡ್ರಾಮಾ ಇರಲಿದೆ. ಅಕ್ಟೋಬರ್ 16ರಿಂದ ಶೂಟಿಂಗ್ ಆರಂಭ ಆಗಲಿದೆ. ವಿಜಯ್ ದೇವರಕೊಂಡ ಅವರ ಲುಕ್ ಗಮನ ಸೆಳೆಯುವ ರೀತಿಯಲ್ಲಿ ಇದೆ.




