ಗ್ಯಾಸ್ ಸ್ಟವ್ ಜ್ವಾಲೆಯ ಬಣ್ಣವು ನೀಡುತ್ತೆ ಅಪಾಯದ ಸೂಚನೆ, ಇಲ್ಲಿದೆ ಮಾಹಿತಿ
ಗ್ಯಾಸ್ ಸ್ಟವ್ ಜ್ವಾಲೆಯ ಬಣ್ಣ ಬದಲಾವಣೆಯಾಗುವುದನ್ನು ಗಮನಿಸಿದ್ದೀರಬಹುದು. ಸಾಮಾನ್ಯವಾಗಿ ನೀಲಿ ಬಣ್ಣ ಕಾಣಿಸಿಕೊಂಡರೆ ಸುರಕ್ಷಿತವಾಗಿ ಉರಿಯುತ್ತಿದೆಯೇ ಎಂದು ಸೂಚಿಸುತ್ತದೆ. ಕೆಲವೊಮ್ಮೆ ಕೆಂಪು ಅಥವಾ ಹಳದಿ ಜ್ವಾಲೆಗಳು ಕಾಣಿಸಿಕೊಳ್ಳುತ್ತವೆ. ಗ್ಯಾಸ್ ಸ್ಟೌವ್ ಅನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಬರ್ನರ್ ರಂಧ್ರಗಳು ಮುಚ್ಚಿಹೋಗಿರಬಹುದು. ಈ ಬಣ್ಣ ಬದಲಾವಣೆಯೂ ಪ್ರಾಥಮಿಕವಾಗಿ ಸ್ಟೌವ್‌ನಿಂದ ಹೊರಸೂಸುವ ಇಂಗಾಲದ ಮಾನಾಕ್ಸೈಡ್ ಅನಿಲದಿಂದ ಉಂಟಾಗುತ್ತದೆ. ಕೆಂಪು ಅಥವಾ ಹಳದಿ ಜ್ವಾಲೆಯು ಸಾಮಾನ್ಯವಾಗಿ ಈ ಹಾನಿಕಾರಕ ಅನಿಲದ ಉಪಸ್ಥಿತಿಯನ್ನು ಸೂಚಿಸುತ್ತದೆ. ಹೀಗಾಗಿ ಬಣ್ಣ ಗ್ಯಾಸ್ ಸ್ಟವ್ ಬಣ್ಣ ನೋಡಿ ಅಪಾಯದ ಸೂಚನೆ ಕಂಡು ಬಂದರೆ ತಕ್ಷಣವೇ ಕ್ರಮ ಕೈಗೊಳ್ಳುವುದು ಸೂಕ್ತ.

1 / 5

2 / 5

3 / 5

4 / 5

5 / 5




