ಗುಲಾಬಿ ಹೂವನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ವಿಶೇಷ ಮಾಸ. ಹೀಗಾಗಿ ಸಾಮಾನ್ಯವಾಗಿಯೇ ಈ ತಿಂಗಳಲ್ಲಿ ಹೆಚ್ಚು ಗುಲಾಬಿ ಹೂಗಳು ಸೇಲ್ ಆಗುತ್ತವೆ. ಹಾಗೂ ಹೂವಿನ ಬೆಲೆ ಏರುತ್ತದೆ. ಆದ್ರೆ ನಾವಿಂದು ಹೇಳಲು ಹೊರಟಿರುವುದು ವಿಶ್ವದ ದುಬಾರಿ ಗುಲಾಬಿ ಹೂವಿನ ಬಗ್ಗೆ. ಇದು ಬರೋಬ್ಬರಿ 130 ಕೋಟಿ ರೂ ಬೆಲೆ ಬಾಳುತ್ತೆ.
ಪ್ರಪಂಚದಾದ್ಯಂತ 16 ವಿವಿಧ ಬಣ್ಣಗಳ ಗುಲಾಬಿ ಹೂಗಳನ್ನು ನಾವು ಕಾಣಬಹುದು. ಪ್ರತಿಯೊಂದು ಹೂ ತನ್ನದೇ ಆದ ವಿಶಿಷ್ಟ, ವಿಶೇಷತೆಯನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಕೆಲವು ಸುಗಂಧ ಮತ್ತು ಸೌಂದರ್ಯಕ್ಕೆ ಪ್ರಸಿದ್ಧವಾಗಿವೆ. ಸದ್ಯ ಜೂಲಿಯೆಟ್ ಎಂಬ ಗುಲಾಬಿ ವಿಶ್ವದ ಅತ್ಯಂತ ದುಬಾರಿ ಗುಲಾಬಿಯಾಗಿದೆ.
130 ಕೋಟಿ ರೂ ಬೆಲೆ ಬಾಳುತ್ತೆ.
ಈ ಹೂವು ಅರಳಲು 15 ದಿನಗಳೇ ಬೇಕು. ಈ ಗುಲಾಬಿ ಹೂ ಹಲವಾರು ಗುಲಾಬಿಗಳನ್ನು ಮಿಶ್ರಣ ಮಾಡುವ ಮೂಲಕ ಆಸ್ಟಿನ್ ಈ ಅಪರೂಪದ ಹೂವನ್ನು ಕಷ್ಟಪಟ್ಟು ಬೆಳೆದಿದ್ದಾರೆ. 2006 ರಲ್ಲಿ ಈ ಗುಲಾಬಿ ಮೊದಲ ಬಾರಿಗೆ ಯಶಸ್ವಿಯಾಗಿ ಅರಳಿತ್ತು.
2006ರಲ್ಲಿ ಈ ಗುಲಾಬಿ ಸುಮಾರು 90 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಜೂಲಿಯೆಟ್‌ನ ಬೆಲೆಗೆ ಮತ್ತೊಂದು ಕಾರಣವೆಂದರೆ ಇದನ್ನ ಬೆಳೆಯುವುದು ಸುಲಭವಲ್ಲ. ಈ ಹೂ ಸುಗಂಧ ದ್ರವ್ಯದಂತೆ ಭಾಸವಾಗುತ್ತದೆ. ಇದು ಸುಮಾರು 40 ದಳಗಳನ್ನು ಹೊಂದಿದೆ.
ರೋಮಿಯೋ ಮತ್ತು ಜೂಲಿಯೆಟ್ ಪ್ರೇಮಕಥೆಯನ್ನು ವಿಶ್ವದ ಅತ್ಯಂತ ರೋಮ್ಯಾಂಟಿಕ್ ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ಗುಲಾಬಿಗೆ ಜೂಲಿಯೆಟ್ ಎಂಬ ಹೆಸರಿಡಲಾಗಿದೆ. ಜೂಲಿಯೆಟ್ ಗುಲಾಬಿಯ ಬೆಲೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
Published On - 8:24 am, Fri, 10 February 23