Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನಿಸಿಂಗ್ ಕಾನ್ಸರ್ಟ್​ನಲ್ಲಿ ನಟ ಯಶ್ ಭಾಗಿ, ಇಲ್ಲಿವೆ ಕೆಲ ಚಿತ್ರಗಳು

Yash: ಹನಿ ಸಿಂಗ್​ ಅವರ ಲೈವ್ ಕಾನ್ಸರ್ಟ್​ನಲ್ಲಿ ನಟ ಯಶ್ ಭಾಗವಹಿಸಿದ್ದರು. ವೇದಿಕೆ ಮೇಲೆ ಕನ್ನಡದಲ್ಲಿಯೇ ಮಾತನಾಡಿದ ನಟ ಯಶ್, ಗಾಯಕ ಹನಿ ಸಿಂಗ್ ಅವರನ್ನು ಸಹ ಕನ್ನಡದಲ್ಲಿ ಹಾಡು ಹಾಡುವಂತೆ ಒತ್ತಾಯ ಮಾಡಿದರು. ಹನಿಸಿಂಗ್ ಕಾನ್ಸರ್ಟ್​ನಲ್ಲಿ ಯಶ್ ಭಾಗಿಯಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿವೆ ಕೆಲವು ಚಿತ್ರಗಳು.

ಮಂಜುನಾಥ ಸಿ.
|

Updated on: Mar 23, 2025 | 1:33 PM

ಶನಿವಾರದಂದು ಖ್ಯಾತ ರ್ಯಾಪರ್, ಗಾಯಕ ಹನಿಸಿಂಗ್ ಅವರ ಲೈವ್ ಕಾನ್ಸರ್ಟ್ ಬಲು ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆಯಿತು. ಕಾನ್ಸರ್ಟ್​ನಲ್ಲಿ ಅತಿಥಿಯಾಗಿ ನಟ ಯಶ್ ಭಾಗವಹಿಸಿದ್ದರು.

1 / 6
ಹನಿ ಸಿಂಗ್​ ಅವರ ಲೈವ್ ಕಾನ್ಸರ್ಟ್​ನಲ್ಲಿ ಶೋ ಸ್ಟಾಪರ್ ರೀತಿ ಅದ್ಧೂರಿ ಎಂಟ್ರಿ ಕೊಟ್ಟ ನಟ ಯಶ್ ವೇದಿಕೆ ಮೇಲೆ ಕನ್ನಡದಲ್ಲಿಯೇ ಮಾತನಾಡಿ, ಗಾಯಕ ಹನಿ ಸಿಂಗ್ ಅವರಿಗೆ ಸ್ವಾಗತ ಕೋರಿದರು.

2 / 6
‘ಎಲ್ಲರಿಗೂ ನಮಸ್ಕಾರ, ಮೊದಲು ಇವರಿಗೆ ಸ್ವಾಗತ ಕೋರೋಣ, ನಿಮಗೆ ಬೆಂಗಳೂರಿಗೆ ಸ್ವಾಗತ’ ಎಂದು ಹನಿಸಿಂಗ್ ಅವರಿಗೆ ಸ್ವಾಗತ ಕೋರಿದರು. ಬಳಿಕ ಹನಿ ಸಿಂಗ್ ಅವರಿಗೆ, ‘ನೀವು ಕನ್ನಡದಲ್ಲಿಯೂ ಹಾಡು ಹಾಡಬೇಕು’ ಎಂದು ಒತ್ತಾಯಿಸಿದರು. ಅದಕ್ಕೆ ಹನಿ ಸಿಂಗ್, ‘ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಹಾಡು ಹಾಡುವುದಾಗಿ’ ಹೇಳಿದರು.

3 / 6
ನಟ ಯಶ್, ಅವರು ಹನಿ ಸಿಂಗ್ ಕಾನ್ಸರ್ಟ್​ಗೆ ಬಂದಿದ್ದು ಅಲ್ಲಿ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿತು. ಯಶ್, ಹನಿ ಸಿಂಗ್ ಕಾನ್ಸರ್ಟ್​ನಲ್ಲಿ ಭಾಗಿ ಆಗುತ್ತಾರೆ ಎಂಬ ಯಾವುದೇ ಮುನ್ಸೂಚನೆ ಇರಲಿಲ್ಲ.

4 / 6
ಈಗ ಯಶ್, ಅವರು ಹನಿಸಿಂಗ್ ಅವರ ಕಾನ್ಸರ್ಟ್​ಗೆ ನ ವೇದಿಕೆಗೆ ಬಂದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹಿಂದಿ ಹಾಡುಗಳ ಕಾನ್ಸರ್ಟ್​ನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ಮಾತ್ರವಲ್ಲದೆ, ಗಾಯಕನನ್ನು ಕನ್ನಡದ ಹಾಡುಗಳನ್ನು ಹಾಡಿ ಎಂದು ಒತ್ತಾಯಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

5 / 6
ಹನಿ ಸಿಂಗ್ ಸಹ ತಮ್ಮ ಇನ್​ಸ್ಟಾಗ್ರಾಂನಲ್ಲಿ ಯಶ್​ ಅವರ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡಿದ್ದು, ‘ನನ್ನ ಬೆಂಗಳೂರು ಕಾನ್ಸರ್ಟ್​ಗೆ ಬಂದು ಹರಸಿದ್ದಕ್ಕೆ ನನ್ನ ಸಹೋದರ ಯಶ್​ಗೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ದಿಲ್ಜೀತ್ ದೊಸ್ಸಾಂಜ್ ಬೆಂಗಳೂರಿನಲ್ಲಿ ಲೈವ್ ಕಾನ್ಸರ್ಟ್ ಮಾಡಿದಾಗ ದೀಪಿಕಾ ಪಡುಕೋಣೆಯನ್ನು ಸರ್ಪ್ರೈಸ್ ಅತಿಥಿಯಾಗಿ ಕರೆಸಿದ್ದರು.

6 / 6
Follow us
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ

2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್

ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು

ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್

ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?

ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ

ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ

ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ

ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ

ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ