ನಬನ್ನಾ ಚಲೋ ವೇಳೆ ಪೊಲೀಸರ ದಬ್ಬಾಳಿಕೆಗೆ ಬಿಜೆಪಿ ಕಿಡಿ; ಬಿಜೆಪಿಯವರು ಗೂಂಡಾಗಳೆಂದ ಟಿಎಂಸಿ

ಶಾಂತಿಯುತ ಪ್ರತಿಭಟನೆಯನ್ನು ಅರ್ಥಮಾಡಿಕೊಳ್ಳದ ಅಥವಾ ಶಾಂತಿಯುತ ಸಹಬಾಳ್ವೆಗೆ ಅವಕಾಶ ನೀಡದ ಗಲಭೆಕೋರರು ಮತ್ತು ಗೂಂಡಾಗಳ ಗುಂಪು ಅದು ಎಂದು ಎಂದು ಟಿಎಂಸಿ ಬಿಜೆಪಿಯನ್ನು ಟೀಕಿಸಿದೆ

ನಬನ್ನಾ ಚಲೋ ವೇಳೆ ಪೊಲೀಸರ ದಬ್ಬಾಳಿಕೆಗೆ ಬಿಜೆಪಿ ಕಿಡಿ; ಬಿಜೆಪಿಯವರು ಗೂಂಡಾಗಳೆಂದ ಟಿಎಂಸಿ
ನಬನ್ನಾ ಚಲೋ ರ್ಯಾಲಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 14, 2022 | 12:02 PM

ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಸಚಿವಾಲಯಕ್ಕೆ ನಡೆಸಿದ ‘ನಬನ್ನಾ ಚಲೋ’ ( Nabanna Chalo)ಮೆರವಣಿಗೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬಂಗಾಳ ಪೊಲೀಸರ ನಡುವ ಘರ್ಷಣೆ ಉಂಟಾಗಿದ್ದು ಪಶ್ಚಿಮ ಬಂಗಾಳದ (West Bengal) ಬೀದಿಗಳು ರಣರಂಗವಾಗಿ ಮಾರ್ಪಟ್ಟಿವೆ. ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಪಿ ಮತ್ತು ಬಂಗಾಳ ಪೊಲೀಸರ ನಡುವಿನ ಘರ್ಷಣೆಯಲ್ಲಿ ಮುಖಂಡರಾದ ಮಿನಾ ದೇವಿ ಪುರೋಹಿತ್ ಮತ್ತು ಸ್ವಪನ್ ದಾಸ್‌ಗುಪ್ತಾ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಮತ್ತು ಬಿಜೆಪಿ ಸದಸ್ಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬಂಗಾಳದ ಹಲವು ಬಿಜೆಪಿ ಮುಖಂಡರನ್ನು ಮಂಗಳವಾರ ಬಂಧಿಸಲಾಗಿದೆ. ಮೂಲಗಳ ಪ್ರಕಾರ ಮಿನಾ ದೇವಿ ಪುರೋಹಿತ್ ಅವರ ಪರಿಸ್ಥಿತಿ ಗಂಭೀರವಾಗಿದೆ. ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಪಕ್ಷದ ಹೂಗ್ಲಿ ಸಂಸದ ಲಾಕೆಟ್ ಚಟರ್ಜಿ ಮತ್ತು ಹಿರಿಯ ನಾಯಕ ರಾಹುಲ್ ಸಿನ್ಹಾ ಅವರನ್ನೂ ಬಂಧಿಸಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ.ಏತನ್ಮಧ್ಯೆ, ತಮ್ಮ ಬೆಂಬಲಿಗರನ್ನು ಬಂಧಿಸಿರುವ ರೀತಿ ಕಾನೂನುಬಾಹಿರ ಎಂದು ಬಿಜೆಪಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತವೆ. ಇಂದು ಬಂಗಾಳ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಜೆಪಿ ಕೂಡ ಈ ವಿಷಯವನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ ಟಿಎಂಸಿ ಮಹಿಳಾ ವಿಭಾಗ ಕೇಂದ್ರೀಯ ಸಂಸ್ಥೆಗಳ ವಿರುದ್ಧ ರ್ಯಾಲಿ ನಡೆಸಲಿದೆ.

ಬಿಜೆಪಿ VS ಟಿಎಂಸಿ ಜಟಾಪಟಿ

ಮಮತಾ ಬ್ಯಾನರ್ಜಿ  ತಮ್ಮ ಸ್ಥಾನವನ್ನು ತೊರೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಬಿಜೆಪಿಯ ರಾಹುಲ್ ಸಿನ್ಹಾ ಹೇಳಿದ್ದಾರೆ. ನಬನ್ನಾ ಚಲೋ ರ್ಯಾಲಿಯಲ್ಲಿ ಮಂಗಳವಾರ ಬಂಧನಕ್ಕೊಳಗಾಗಿದ್ದ ಬಿಜೆಪಿ ನಾಯಕ ರಾಹುಲ್ ಸಿನ್ಹಾ, ಮಮತಾ ಬ್ಯಾನರ್ಜಿ “ತಮ್ಮ ಸ್ಥಾನವನ್ನು ತೊರೆಯುವವರೆಗೆ ಬಿಜೆಪಿ ಆಂದೋಲನವನ್ನು ಮುಂದುವರೆಸುತ್ತದೆ ಎಂದು ಹೇಳಿದರು.  ನಮ್ಮ ಬೆಂಬಲಿಗರ ಮೇಲೆ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ ಮೂಲಕ ನಮ್ಮ ಪ್ರಜಾಸತ್ತಾತ್ಮಕ ಆಂದೋಲನವನ್ನು ಹಿಂಸಾತ್ಮಕವಾಗಿ ಪರಿವರ್ತಿಸಿದ ರೀತಿಯನ್ನು ನಾನು ಖಂಡಿಸುತ್ತೇನೆ. ನನ್ನ ತಲೆ ಮತ್ತು ಕೈಗೆ ಗಾಯವಾಗಿತ್ತು. ಮಮತಾ ಬ್ಯಾನರ್ಜಿ ಅವರು ತಮ್ಮ ಸ್ಥಾನವನ್ನು ಬಿಟ್ಟು ಹೋಗುವವರೆಗೂ ನಾವು ಆಂದೋಲನವನ್ನು ಮುಂದುವರಿಸುತ್ತೇವೆ ಎಂದು ಬಿಜೆಪಿ ನಾಯಕ ರಾಹುಲ್ ಸಿನ್ಹಾ ಪೊಲೀಸ್ ಕಸ್ಟಡಿಯಿಂದ ಬಿಡುಗಡೆಯಾದ ನಂತರ ಹೇಳಿದರು.

ಇದನ್ನೂ ಓದಿ
Image
ಹಿಂದೂ ಧರ್ಮದ ಮೂಲಮಂತ್ರ ‘ಓಂ ಶಾಂತಿ’ ಆದರೆ ಬಿಜೆಪಿ ದೇಶದಲ್ಲಿ ‘ಅಶಾಂತಿ’ ಸೃಷ್ಟಿಸುತ್ತಿದೆ: ರಾಹುಲ್ ಗಾಂಧಿ
Image
ನನ್ನ ಮೈ ಮುಟ್ಟಬೇಡಿ, ನಾನು ಗಂಡು ಎಂದು ಮಹಿಳಾ ಪೊಲೀಸರಲ್ಲಿ ಹೇಳಿದ ಬಿಜೆಪಿ ನಾಯಕ; ಲೇವಡಿ ಮಾಡಿದ ಟಿಎಂಸಿ
Image
ಮಮತಾ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಕೋಲ್ಕತ್ತಾದಲ್ಲಿ ಬಿಜೆಪಿ ಪ್ರತಿಭಟನೆ: ಕಾರಿಗೆ ಬೆಂಕಿ, ಪೊಲೀಸರಿಂದ ಅಶ್ರುವಾಯು ಪ್ರಯೋಗ
Image
Nabanna March: ಟಿಎಂಸಿ ಭ್ರಷ್ಟಾಚಾರದ ವಿರುದ್ಧ ಬಂಗಾಳ ಬಿಜೆಪಿಯ ನಬನ್ನ ಚಲೋ ಪಾದಯಾತ್ರೆ

ನಬನ್ನಾ ಅಭಿಜನ ರ್ಯಾಲಿಯಲ್ಲಿ 30 ಪೊಲೀಸರಿಗೆ ಗಾಯ

ನಬನ್ನಾ ಅಭಿಜನ ರ್ಯಾಲಿಯಲ್ಲಿ ಸುಮಾರು 30 ಪೊಲೀಸರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 14 ಪೊಲೀಸ್ ಸಿಬ್ಬಂದಿ ಪ್ರಸ್ತುತ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಸಂವಹನ ವಿಭಾಗದ ಅಸಿಸ್ಟೆಂಟ್ ಕಮಿಷನರ್ ದೇಬಜಿತ್ ಚಟ್ಟೋಪಾಧ್ಯಾಯ ಅವರ ಬಲಗೈ ಮುರಿತ ಮತ್ತು ಬಲ ಕಣ್ಣಿನ ಹುಬ್ಬುಗಳ ಬಳಿ ಗಾಯಗಳಾಗಿವೆ.  ಒಟ್ಟು 25 ಪೊಲೀಸ್ ಸಿಬ್ಬಂದಿ (20 ಪುರುಷರು ಮತ್ತು 5 ಮಹಿಳೆಯರು) ಪ್ರಸ್ತುತ MCH ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏತನ್ಮಧ್ಯೆ, 43 ಜನರು (37 ಪುರುಷರು ಮತ್ತು 6 ಮಹಿಳೆಯರು) ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಇಂದು ಸಂಜೆ 5 ಗಂಟೆಗೆ ಪೊಲೀಸ್ ಸಿಬ್ಬಂದಿಯನ್ನು ನೋಡಲು ಎಸ್‌ಎಸ್‌ಕೆಎಂಗೆ ಭೇಟಿ ನೀಡಲಿದ್ದಾರೆ.

ಕೇಂದ್ರ ಏಜೆನ್ಸಿಗಳ ‘ದುರುಪಯೋಗ’ದ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ತರಲು ಟಿಎಂಸಿ ನಿರ್ಧಾರ

ಕೇಂದ್ರೀಯ ತನಿಖಾ ದಳ ಮತ್ತು ಪಶ್ಚಿಮ ಬಂಗಾಳದ ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ಸಂಸ್ಥೆಗಳ “ಹೈಪರ್ಆಕ್ಟಿವ್” ಡ್ರೈವ್‌ಗಳ ವಿರುದ್ಧ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿಧಾನಸಭೆಯಲ್ಲಿ ಒಂದು ನಿರ್ಣಯವನ್ನು ಮಂಡಿಸಲಿದೆ. ಸೆಪ್ಟೆಂಬರ್ 14 ರಿಂದ ವಿಧಾನಸಭೆಯ ಕಿರು ಅಧಿವೇಶನ ನಡೆಯಲಿದ್ದು, ಈ ವೇಳೆ ಪ್ರಸ್ತಾವನೆ ಮಂಡನೆಯಾಗಲಿದೆ. ಈಗಾಗಲೇ ವಿಧಾನಸಭೆಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯ ಸೋಮವಾರ ಹೇಳಿದ್ದಾರೆ.

ರ್ಯಾಲಿಯಲ್ಲಿ ಪಾಲ್ಗೊಳ್ಳದಂತೆ ಬಿಜೆಪಿ ಬೆಂಬಲಿಗರನ್ನು ಬಲವಂತವಾಗಿ ತಡೆದಿರುವ ಕುರಿತು ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿ ಕೋರಿದ ಹೈಕೋರ್ಟ್

ಬಿಜೆಪಿ ಬೆಂಬಲಿಗರು ನಬನ್ನಾ ಕಾರ್ಯಕ್ರಮಕ್ಕೆ ತೆರಳದಂತೆ ಬಲವಂತವಾಗಿ ತಡೆದ ಆರೋಪದ ಮೇಲೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಯಿಂದ ವರದಿ ಕೇಳಿದೆ. ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಆರ್ ಭಾರದ್ವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಕೋಲ್ಕತ್ತಾದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ರ್ಯಾಲಿಗೆ ಸಂಬಂಧಿಸಿದಂತೆ ಯಾವುದೇ ಅನಗತ್ಯ ಬಂಧನವನ್ನು ಮಾಡದಂತೆ ಪೀಠವು ರಾಜ್ಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ರ್ಯಾಲಿಯಲ್ಲಿ ಪಾಲ್ಗೊಳ್ಳದಂತೆ ಬಿಜೆಪಿ ಬೆಂಬಲಿಗರನ್ನು ಬಲವಂತವಾಗಿ ತಡೆದಿರುವ ಆರೋಪದ ಕುರಿತು ಸೆಪ್ಟೆಂಬರ್ 19ರೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಗೃಹ ಕಾರ್ಯದರ್ಶಿಗೆ ನ್ಯಾಯಾಲಯ ಸೂಚಿಸಿದೆ.

1,235 ಕಾರ್ಯಕರ್ತರನ್ನು ಬಂಧಿಸಲಾಗಿದೆ, 3 ಮಂದಿಗೆ ತೀವ್ರ ಗಾಯ: ಬಿಜೆಪಿ

ನಬನ್ನಾ ಚಲೋ ಪ್ರತಿಭಟನೆಯ ವೇಳೆ  ಪಕ್ಷದ 1235 ಕಾರ್ಯಕರ್ತರನ್ನು ಬಂಧಿಸಲಾಗಿದೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬಿಜೆಪಿ ಮಂಗಳವಾರ ಹೇಳಿದೆ. ಮಂಗಳವಾರ ನಡೆದ ಘರ್ಷಣೆಯಲ್ಲಿ ಗಾಯಗೊಂಡಿರುವ ಬಿಜೆಪಿ ನಾಯಕಿ ಮಿನಾ ದೇವಿ ಪುರೋಹಿತ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ  ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನೆಯ ವೇಳೆ 200 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಗೆ ಗಾಯ: ಸುವೇಂದು ಅಧಿಕಾರಿ

ಪಕ್ಷದ ‘ನಬನ್ನಾ ಚಲೋ’ ಪ್ರತಿಭಟನೆಯ ವೇಳೆ 200 ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

ಅದು ಗಲಭೆಕೋರರು ಮತ್ತು ಗೂಂಡಾಗಳ ಗುಂಪು: ಬಿಜೆಪಿ ವಿರುದ್ಧ ಟಿಎಂಸಿ ವಾಗ್ದಾಳಿ

“ಶಾಂತಿಯುತ ಪ್ರತಿಭಟನೆಯನ್ನು ಅರ್ಥಮಾಡಿಕೊಳ್ಳದ ಅಥವಾ ಶಾಂತಿಯುತ ಸಹಬಾಳ್ವೆಗೆ ಅವಕಾಶ ನೀಡದ ಗಲಭೆಕೋರರು ಮತ್ತು ಗೂಂಡಾಗಳ ಗುಂಪು ಅದು ಎಂದು ಎಂದು ಟಿಎಂಸಿ  ಬಿಜೆಪಿಯನ್ನು ಟೀಕಿಸಿದೆ. “ಸಾರ್ವಜನಿಕ ಶಾಂತಿಯನ್ನು ಹಾಳುಮಾಡುವ ಮತ್ತು ಸರ್ಕಾರಿ ಆಸ್ತಿಗೆ ಹಾನಿ ಮಾಡುವ ಈ ಲಜ್ಜೆಗೆಟ್ಟ ಪ್ರಯತ್ನವನ್ನು ನಾವು ಖಂಡಿಸುತ್ತೇವೆ. ಆಡಳಿತಾತ್ಮಕ ಸಭೆಗಾಗಿ ಮೇದಿನಿಪುರದಲ್ಲಿ ಆಡಳಿತಾತ್ಮಕ ಸಭೆಗೆ ಆಗಮಿಸಿದ್ದ ಮಮತಾ ಬ್ಯಾನರ್ಜಿ, ರ್ಯಾಲಿಯಲ್ಲಿ ಬಿಜೆಪಿಗೆ ಜನರೇ ಇರಲಿಲ್ಲ ಎಂದು ಹೇಳಿದ್ದಾರೆ.

Published On - 11:59 am, Wed, 14 September 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ