ನನ್ನ ಮೈ ಮುಟ್ಟಬೇಡಿ, ನಾನು ಗಂಡು ಎಂದು ಮಹಿಳಾ ಪೊಲೀಸರಲ್ಲಿ ಹೇಳಿದ ಬಿಜೆಪಿ ನಾಯಕ; ಲೇವಡಿ ಮಾಡಿದ ಟಿಎಂಸಿ
ಬಳಿಕ ಮಾತನಾಡಿದ ಸುವೇಂದು, ನನ್ನನ್ನು ಬಲವಂತವಾಗಿ ಹಿಡಿದೆಳೆಯಲೆತ್ನಿಸಿದರೂ ನಾನು ಮಹಿಳೆಗೆ ಗೌರವ ಕೊಡುವ ಕಾರಣ ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ.
ದೆಹಲಿ: ಮಮತಾ ಬ್ಯಾನರ್ಜಿ (Mamata Banerjee) ಅವರ ತೃಣಮೂಲ ಕಾಂಗ್ರೆಸ್ ನೇತೃತ್ವದ (TMC) ಪಶ್ಚಿಮ ಬಂಗಾಳದ ಸರ್ಕಾರ ವಿರುದ್ಧ ಬಿಜೆಪಿ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದೆ. ಈ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ನಡೆದ ಘರ್ಷಣೆಯಲ್ಲಿ, ಬಿಜೆಪಿ ನಾಯಕರು ಹೇಳಿದ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಮಹಿಳಾ ಪೊಲೀಸರಲ್ಲಿ ಈ ಮಾತು ಹೇಳಿದ್ದು ಇದನ್ನು ಟಿಎಂಸಿ ಟ್ರೋಲ್ ಮಾಡುತ್ತಿದೆ. ನನ್ನ ಮೈ ಮುಟ್ಟಬೇಡ. ನೀನು ಹೆಂಗಸು, ನಾನು ಗಂಡು ಎಂದು ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ (Suvendu Adhikari)ಹೇಳುತ್ತಿರುವ ವಿಡಿಯೊವನ್ನು ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ. ಸುವೇಂದು ಅವರನ್ನು ಜೈಲು ವ್ಯಾನ್‌ಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದ ಮಹಿಳಾ ಪೊಲೀಸರಲ್ಲಿ ಅವರು ಈ ರೀತಿ ಹೇಳಿದ್ದಾರೆ. ನಾನೊಬ್ಬ ಕಾನೂನು ಪಾಲಿಸುವ ನಾಗರಿಕ ಎಂದ ಸುವೇಂದು, ಪುರುಷ ಪೋಲೀಸರನ್ನು ಕರೆದಿದ್ದಾರೆ. ಸುವೇಂದು ಹಿರಿಯ ಅಧಿಕಾರಿ ಆಕಾಶ್ ಮಘರಿಯಾ ಕರೆದೊಯ್ದಿದ್ದಾರೆ. ಬಳಿಕ ಮಾತನಾಡಿದ ಸುವೇಂದು, ನನ್ನನ್ನು ಬಲವಂತವಾಗಿ ಹಿಡಿದೆಳೆಯಲೆತ್ನಿಸಿದರೂ ನಾನು ಮಹಿಳೆಗೆ ಗೌರವ ಕೊಡುವ ಕಾರಣ ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ. ಬಂಧಿತರಾಗಿರುವ ಪಕ್ಷದ ಸಂಸದ ಲಾಕೆಟ್ ಚಟರ್ಜಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ “ನಾನು ಪ್ರತಿ ಮಹಿಳೆಯ ದೃಷ್ಟಿಯಲ್ಲಿ ಮಾ ದುರ್ಗೆಯನ್ನು ನೋಡುತ್ತೇನೆ” ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಸುವೇಂಧು ಅಧಿಕಾರಿ ಅವರು 2021 ರ ಬಂಗಾಳ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರಿದ್ದರು. ಇದಕ್ಕಿಂತ ಮೊದಲು ಅವರು ತೃಣಮೂಲ ಕಾಂಗ್ರೆಸ್‌ನ ನಾಯಕಿ ಮತ್ತು ಮಮತಾ ಬ್ಯಾನರ್ಜಿ ಅವರ ನಿಕಟ ಸಹಾಯಕರಾಗಿದ್ದರು.
.@BJP4India‘s 56-inch chest model BUSTED!
Proclamation of the day: “Don’t touch my body. I am male!” pic.twitter.com/hHiWr0yuHE
— All India Trinamool Congress (@AITCofficial) September 13, 2022
ಮಮತಾ ಬ್ಯಾನರ್ಜಿ ಸರ್ಕಾರದ ಪ್ರಧಾನ ಕಚೇರಿಯಾದ ನಬನ್ನಾಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ಹಲವಾರು ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಆಡಳಿತ ಪಕ್ಷದ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಈ ಪ್ರತಿಭಟನೆ ನಡೆಸಿದೆ.