Rajya Sabha elections ರಾಜ್ಯಸಭಾ ಚುನಾವಣೆ ಹೇಗೆ ನಡೆಯುತ್ತದೆ? ಮತದಾನ ಪ್ರಕ್ರಿಯೆ ಹೇಗಿರುತ್ತದೆ? ಇಲ್ಲಿದೆ ಮಾಹಿತಿ

ಮೊದಲ ಸುತ್ತಿನ ಮತದಾನದ ನಂತರ ಫಲಿತಾಂಶಗಳು ಹೆಚ್ಚಾಗಿ ಸ್ಪಷ್ಟವಾಗಿದ್ದರೂ, ಅಭ್ಯರ್ಥಿಗಳು ನಿರ್ದಿಷ್ಟ ಸಂಖ್ಯೆಯನ್ನು ಪಡೆಯಲು ವಿಫಲವಾದರೆ ಪ್ರಕ್ರಿಯೆಯು ಎರಡನೇ ಸುತ್ತಿಗೆ ಪ್ರವೇಶಿಸಬಹುದು...

Rajya Sabha elections ರಾಜ್ಯಸಭಾ ಚುನಾವಣೆ ಹೇಗೆ ನಡೆಯುತ್ತದೆ? ಮತದಾನ ಪ್ರಕ್ರಿಯೆ ಹೇಗಿರುತ್ತದೆ? ಇಲ್ಲಿದೆ ಮಾಹಿತಿ
ರಾಜ್ಯಸಭಾ ಚುನಾವಣೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 08, 2022 | 2:00 PM

ಜೂನ್ 10ರಂದು ರಾಜ್ಯಸಭೆಯ (Rajya Sabha elections) 57 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆಗೆ ಸಿದ್ಧವಾಗಿವೆ. ಜೂನ್ ಮತ್ತು ಆಗಸ್ಟ್ ತಿಂಗಳ ಮಧ್ಯೆ ರಾಜ್ಯಸಭಾ ಸದಸ್ಯರ ((Rajya Sabha Member)ನಿವೃತ್ತಿಯಿಂದಾಗಿ ತೆರವಾಗಿದ್ದ 57 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈಗಾಗಲೇ 41 ಮಂದ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 16 ಸ್ಥಾನಗಳಿಗೆ ಮತದಾನ ಮೂಲಕ ಸದಸ್ಯರ ಆಯ್ಕೆಯಾಗಬೇಕಿದೆ. ಅದೇ ವೇಳೆ ಲೋಕಸಭಾ ಸದಸ್ಯರನ್ನು(Lok Sabha) ನೇರ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಾರ್ವತ್ರಿಕ ಚುನಾವಣೆ ಮೂಲಕ ಲೋಕಸಭಾ ಸದಸ್ಯರನ್ನು ಜನರೇ ಆಯ್ಕೆ ಮಾಡುತ್ತಾರೆ. ಆದರೆ ರಾಜ್ಯಸಭಾ ಚುನಾವಣೆಯ ಪ್ರಕ್ರಿಯೆಯೇ ಭಿನ್ನವಾಗಿದೆ.

ಯಾರೆಲ್ಲ ಮತದಾನ ಮಾಡಬಹುದು?

ರಾಜ್ಯಸಭೆಯು ಪರೋಕ್ಷ ಚುನಾವಣೆಯನ್ನು ಹೊಂದಿದ್ದು, ರಾಜ್ಯ ಶಾಸಕಾಂಗ ಸಭೆಗಳ ಚುನಾಯಿತ ಸದಸ್ಯರು ಮಾತ್ರ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಇದನ್ನು ಒಂದೇ ಬಾರಿ ವರ್ಗಾವಣೆ (STV) ಮಾಡಬಹುದಾದ ಮತದ ಮೂಲಕ ನಡೆಸಲಾಗುತ್ತದೆ ಮತ್ತು ಪ್ರಮಾಣಾನುಗುಣ ಪ್ರಾತಿನಿಧ್ಯದ ತತ್ವವನ್ನು ಆಧರಿಸಿದೆ. ಸರಳವಾಗಿ ಹೇಳುವುದಾದರೆ ಮೇಲ್ಮನೆಯಲ್ಲಿ ಬಹುಮತದ ಪಕ್ಷವು ಏಕಸ್ವಾಮ್ಯವನ್ನು ಹಿಡಿದಿಟ್ಟುಕೊಳ್ಳುವುದನ್ನು ತಡೆಯಲು, ಒಂದು ಅಥವಾ ಹೆಚ್ಚಿನ ಪಕ್ಷಗಳ ಸಂಸದರ ಬಣವು ತಮ್ಮ ಆಯ್ಕೆಯ ಸದಸ್ಯರನ್ನು ಆಯ್ಕೆ ಮಾಡಬಹುದು. ಇವು ಅಗತ್ಯ ಸಂಖ್ಯೆಗಳನ್ನು ಹೊಂದಿದ್ದರೆ ಅವರನ್ನು ರಾಜ್ಯಸಭೆಗೆ ಕಳುಹಿಸಬಹುದು.

ಇದನ್ನೂ ಓದಿ
Image
ರಾಜಕೀಯದಲ್ಲಿ ಯಾವುದು ಕೂಡ ಶಾಶ್ವತ ಅಲ್ಲ; ಪಾಲಿಟಿಕ್ಸ್ ಇಸ್ ಆರ್ಟ್ ಆಫ್ ಪಾಸಿಬಲಿಟಿ -ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Image
ರಾಜ್ಯಸಭಾ ಚುನಾವಣೆ: 4ನೇ ಅಭ್ಯರ್ಥಿ ಗೆಲ್ಲಲು ಅಡ್ಡ ಮತದಾನವೇ ನಿರ್ಣಾಯಕ, ಮೂರೂ ಪಕ್ಷಗಳಲ್ಲಿ ತಳಮಳ
Image
ರಾಜ್ಯಸಭೆ ಚುನಾವಣೆ ಸಂಬಂಧ ಖರ್ಗೆ ಯಾರೊಂದಿಗೂ ಸಂಧಾನ ನಡೆಸಿಲ್ಲ, ಸುಳ್ಳು ಸುದ್ದಿ ಹಬ್ಬಿಸಲಾಗಿದೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
Image
Rajya Sabha Election: ಪಿ. ಚಿದಂಬರಂ, ಕಪಿಲ್ ಸಿಬಲ್ ಸೇರಿ 41 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ

ಹೇಗಿರುತ್ತದೆ ಪ್ರಕ್ರಿಯೆ?

ರಾಜ್ಯಸಭಾ ಮತದಾನವು ಸ್ವಲ್ಪ ಸಂಕೀರ್ಣವಾಗಿರುತ್ತದೆ. ಚುನಾವಣೆಯಲ್ಲಿ ಭಾಗವಹಿಸುವ ಒಟ್ಟು ಅಭ್ಯರ್ಥಿಗಳ ಸಂಖ್ಯೆಗಿಂತ ಖಾಲಿ ಹುದ್ದೆಗಳ ಸಂಖ್ಯೆ ಕಡಿಮೆಯಿದ್ದರೆ ಮಾತ್ರ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ. ವಿಪಕ್ಷಗಳ ಅಸೆಂಬ್ಲಿ ಬಲಾಬಲವು ಈಗಾಗಲೇ ತಿಳಿದಿರುವುದರಿಂದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷವು ಗೆಲ್ಲುವ ಸ್ಥಾನಗಳ ಸಂಖ್ಯೆಯನ್ನು ಊಹಿಸುವುದು ಸುಲಭ. ಉದಾಹರಣೆಗೆ ಆಡಳಿತಾರೂಢ ಪಕ್ಷ ಮತ್ತು ಅದರ ಮೈತ್ರಿ ಪಕ್ಷಗಳು ಒಟ್ಟು ಸೀಟುಗಳಲ್ಲಿ ಶೇ 60ರಷ್ಟು ಅಧಿಪತ್ಯಹೊಂದಿದ್ದರೆ, ರಾಜ್ಯಸಭಾ ಮತದಾನ 10ಸೀಟುಗಳಿಗೆ ನಡೆಯುತ್ತದೆ. ಇದರಲ್ಲಿ ಆಡಳಿತಾರೂಢ ಪಕ್ಷವು 6 ಮತ್ತ ವಿಪಕ್ಷ 4 ಸೀಟುಗಳಿಸುತ್ತದೆ.

ಒಂದು ಬಾರಿ ವರ್ಗಾವಣೆ ಮಾಡಬಹುದಾದ ಮತದ ತತ್ವವು ಮತದಾರರಿಗೆ ಆದ್ಯತೆಯ ಕ್ರಮದಲ್ಲಿ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯು ಚುನಾವಣೆಯಲ್ಲಿ ಗೆಲ್ಲಲು ನಿರ್ದಿಷ್ಟ ಸಂಖ್ಯೆಯ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯಬೇಕು, ಅದು ಮತದಾರರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಮೊದಲ ಹಂತದ ಮತದಾನದಲ್ಲಿ , ಪ್ರತಿ ಮೊದಲ ಪ್ರಾಶಸ್ತ್ಯದ ಮತದ ಮೌಲ್ಯವನ್ನು 100 ಪಾಯಿಂಟ್‌ಗಳಲ್ಲಿ ಮೌಲ್ಯೀಕರಿಸಲಾಗುತ್ತದೆ. ಅಭ್ಯರ್ಥಿಯು ಒಟ್ಟು ಮತ ಚಲಾಯಿಸುವ ಶಾಸಕರ ಸಂಖ್ಯೆಯನ್ನು ಚುನಾವಣೆ ಸ್ಪರ್ಧಿಸಿದ ಸ್ಥಾನಗಳ ಸಂಖ್ಯೆ ಪ್ಲಸ್ ಒಂದರಿಂದ ಭಾಗಿಸುವ ಮೂಲಕ ಪಡೆದ ಅಂಶಕ್ಕಿಂತ ಒಂದು ಅಂಕವನ್ನು ಹೆಚ್ಚು ಗಳಿಸಬೇಕಾಗುತ್ತದೆ. ಅದು ಹೇಗೆಂದರೆ 220 ಶಾಸಕರು ಮತದಾನ ಮಾಡಲಿದ್ದು, 10 ಸೀಟುಗಳಿಗೆ ಮತದಾನ ನಡೆಯುತ್ತದೆ ಎಂದಿಟ್ಟುಕೊಳ್ಳೋಣ. ಹೀಗಿರುವಾಗ ಅಭ್ಯರ್ಥಿಯು 220/(10+1) = 22 ಮತಗಳಿಸುತ್ತಾರೆ . 22 ಮತ ಅಂದರೆ 2200 ವಾಲ್ಯೂ ಪಾಯಿಂಟ್ಸ್. ಈ ಸಂಖ್ಯೆಯನ್ನು ಲೆಕ್ಕ ಹಾಕುವ ಸೂತ್ರ – [(ಶಾಸಕರ ಸಂಖ್ಯೆ X 100) / (ಖಾಲಿ ಸ್ಥಾನ + 1)] + 1.

ಮೊದಲ ಸುತ್ತಿನ ಮತದಾನದ ನಂತರ ಫಲಿತಾಂಶಗಳು ಹೆಚ್ಚಾಗಿ ಸ್ಪಷ್ಟವಾಗಿದ್ದರೂ, ಅಭ್ಯರ್ಥಿಗಳು ನಿರ್ದಿಷ್ಟ ಸಂಖ್ಯೆಯನ್ನು ಪಡೆಯಲು ವಿಫಲವಾದರೆ ಪ್ರಕ್ರಿಯೆಯು ಎರಡನೇ ಸುತ್ತಿಗೆ ಪ್ರವೇಶಿಸಬಹುದು. ಒಬ್ಬ ಸದಸ್ಯನನ್ನು ಆಯ್ಕೆ ಮಾಡಿದ ನಂತರ ಅವರ ಪಟ್ಟಿಯಲ್ಲಿನ ಹೆಚ್ಚುವರಿ ಮತಗಳನ್ನು ಆದ್ಯತೆಯ ಪಟ್ಟಿಯ ಕ್ರಮವನ್ನು ಅನುಸರಿಸಿ ನಂತರದ ಸದಸ್ಯರ ಪಾಲಿಗೆ ಕಡಿಮೆ ಮೌಲ್ಯದೊಂದಿಗೆ ವರ್ಗಾಯಿಸಲಾಗುತ್ತದೆ. ಲೋಕಸಭೆ ಚುನಾವಣೆಗಿಂತ ಭಿನ್ನವಾಗಿ ಮುಕ್ತ ಮತದಾನ ವ್ಯವಸ್ಥೆಯ ಮೂಲಕ ಮತದಾನವನ್ನು ನಡೆಸಲಾಗುತ್ತದೆ. ಭ್ರಷ್ಟಾಚಾರ-ಪ್ರೇರಿತ ಅಡ್ಡ ಮತದಾನವನ್ನು ತಡೆಗಟ್ಟಲು ಇದನ್ನು ಮಾಡಲಾಗುತ್ತದೆ ಮತ್ತು ಶಾಸಕರು ತಮ್ಮ ಮತಗಳನ್ನು ಪಕ್ಷದಿಂದ ನೇಮಿಸಲ್ಪಟ್ಟ ಅಧಿಕೃತ ಏಜೆಂಟ್‌ಗೆ ತೋರಿಸಬೇಕಾಗುತ್ತದೆ. ಅಂದಹಾಗೆ ರಾಜ್ಯಸಭಾ ಚುನಾವಣೆಯಲ್ಲಿ NOTA ಆಯ್ಕೆ ಇರುವುದಿಲ್ಲ.

ಈಗಿನಂತೆ ಸಂವಿಧಾನವು ಮೇಲ್ಮನೆಯಲ್ಲಿ ಗರಿಷ್ಠ 250 ಸದಸ್ಯರನ್ನು ಅನುಮತಿಸುತ್ತದೆ, ಅದರಲ್ಲಿ 238 ಒಂದು ಬಾರಿ ವರ್ಗಾವಣೆ ಮತಗಳ ವ್ಯವಸ್ಥೆಯಿಂದ ಚುನಾಯಿತರಾಗುತ್ತಾರೆ. ಆದರೆ ಸಂಗೀತ, ಕ್ರೀಡೆ, ಅರ್ಥಶಾಸ್ತ್ರ ಮತ್ತು ಇತರ ವಿವಿಧ ಕ್ಷೇತ್ರಗಳಿಂದ 12 ಸದಸ್ಯರನ್ನು ರಾಷ್ಟ್ರಪತಿ ನಾಮನಿರ್ದೇಶನ ಮಾಡುತ್ತಾರೆ. ರಾಜ್ಯಸಭಾ ಸದಸ್ಯರ ಅವಧಿ ಆರು ವರ್ಷ. ಒಟ್ಟು ಸದಸ್ಯರಲ್ಲಿ ಮೂರನೇ ಎರಡರಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ.

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್