ಕಾಂಗ್ರೆಸ್​ ಬೆನ್ನಲ್ಲೇ ಬಿಜೆಪಿಯಲ್ಲಿಯೂ ಶುರುವಾಗುತ್ತಾ ಆಂತರಿಕ ಕಲಹ? ವಿಪಕ್ಷ ನಾಯಕನ ಬದಲಾವಣೆ ಚರ್ಚೆ ಮುನ್ನೆಲೆಗೆ

ಆಡಳಿತಾರೂಢ ಕಾಂಗ್ರೆಸ್​​ನಲ್ಲಿ ಭಿನ್ನಮತದ ಕೂಗು ಜೋರಾಗಿರುವ ಬೆನ್ನಲ್ಲೇ ಇದೀಗ ಪ್ರತಿಪಕ್ಷ ಬಿಜೆಪಿಯಲ್ಲಿಯೂ ನಾಯಕತ್ವದ ಕೂಗು ದೊಡ್ಡದಾಗುವ ಲಕ್ಷಣಗಳು ಕಾಣಿಸಿವೆ. ಈ ಮಧ್ಯೆ, ರಾಜ್ಯದಲ್ಲಿ ಪಕ್ಷವನ್ನು ಸರಿಪಡಿಸಬೇಕು ಎಂದು ಹಿರಿಯ ನಾಯಕರೊಬ್ಬರು ಹೈಕಮಾಂಡ್​ಗೆ ಪತ್ರ ಬರೆದಿದ್ದಾರೆ. ಬಿಜೆಪಿಯ ಆಂತರಿಕ ಬೆಳವಣಿಗೆಗಳ ಇತ್ತೀಚಿನ ಮಾಹಿತಿ ಇಲ್ಲಿದೆ.

ಕಾಂಗ್ರೆಸ್​ ಬೆನ್ನಲ್ಲೇ ಬಿಜೆಪಿಯಲ್ಲಿಯೂ ಶುರುವಾಗುತ್ತಾ ಆಂತರಿಕ ಕಲಹ? ವಿಪಕ್ಷ ನಾಯಕನ ಬದಲಾವಣೆ ಚರ್ಚೆ ಮುನ್ನೆಲೆಗೆ
ಆರ್ ಅಶೋಕ, ಬಿವೈ ವಿಜಯೇಂದ್ರ
Follow us
| Updated By: ಗಣಪತಿ ಶರ್ಮ

Updated on: Jul 02, 2024 | 6:57 AM

ಬೆಂಗಳೂರು, ಜುಲೈ 2: ಆಡಳಿತ ಪಕ್ಷ ಕಾಂಗ್ರೆಸ್​​ನಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆಗಳು ಶುರುವಾದ ಜೊತೆಯಲ್ಲೇ ವಿಪಕ್ಷ ಬಿಜೆಪಿಯಲ್ಲಿ ವಿಪಕ್ಷ ನಾಯಕರ ಬದಲಾವಣೆಯ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ. ಪ್ರತಿಪಕ್ಷ ಬಿಜೆಪಿಯಲ್ಲಿ ವಿಪಕ್ಷ ನಾಯಕರ ಕುರಿತು ಇದೀಗ ಗುಸು ಗುಸು ಚರ್ಚೆ ಶುರುವಾಗಿದ್ದು, ವಿಧಾನಸಭೆಯಲ್ಲಿ ವಿಪಕ್ಷ ನಾಯಕರನ್ನೇ ಬದಲಾಯಿಸಿಬಿಡುತ್ತಾರೆ ಎಂಬ ಮಟ್ಟಿಗೆ ಚರ್ಚೆ ಮುಂದಕ್ಕೆ ಹೋಗಿದೆ. ಮೇಲ್ಮನೆಯಲ್ಲಿ ಸಿಟಿ ರವಿಗೆ ಅವಕಾಶ ಕೊಡಲು ಕೆಳಮನೆಯಲ್ಲಿ ಅಶೋಕ್ ಸ್ಥಾನ ಪಲ್ಲಟವಾದರೂ ಅಚ್ಚರಿ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ.

ಜಾತಿ ಸಮೀಕರಣ ಕಾರಣ

ಒಂದೆಡೆ ವಿಧಾನ ಪರಿಷತ್​​​ನಲ್ಲಿ ವಿಪಕ್ಷ ನಾಯಕರಾಗಿ ಸಿಟಿ ರವಿ ನೇಮಕವಾಗುತ್ತದೆ ಎಂಬ ಚರ್ಚೆಯ ಜೊತೆಗೆ ವಿಧಾನಸಭೆಯಲ್ಲಿ ಹಾಲಿ ವಿಪಕ್ಷ ನಾಯಕ ಆರ್‌. ಅಶೋಕ್ ಅವರನ್ನೇ ಬದಲಾಯಿಸಲಾಗುತ್ತದೆ ಎಂಬ ಹಂತಕ್ಕೆ ಪಕ್ಷದೊಳಗಿನ ಚರ್ಚೆ ಮುಂದುವರಿದಿದೆ. ವಿಧಾನಸಭೆಯಲ್ಲಿ ಈಗಾಗಲೇ ಒಕ್ಕಲಿಗ ಆರ್. ಅಶೋಕ್ ವಿಪಕ್ಷ ನಾಯಕರಾಗಿರುವ ಕಾರಣ ಮತ್ತೊಬ್ಬ ಒಕ್ಕಲಿಗ ಸಿಟಿ ರವಿಗೆ ಅವಕಾಶದ ಸಾಧ್ಯತೆ ಕ್ಷೀಣ ಎಂಬ ಚರ್ಚೆಯೂ ಇದೆ. ಇದರ ಜೊತೆಗೆ ವಿಧಾನಸಭೆಯಲ್ಲಿ ಅಶೋಕ್ ಸ್ಥಾನಕ್ಕೆ ಒಬಿಸಿ ಸಮುದಾಯದ ಶಾಸಕ ವಿ. ಸುನೀಲ್ ಕುಮಾರ್ ನೇಮಿಸಿ ವಿಧಾನ ಪರಿಷತ್​​​ನಲ್ಲಿ ಒಕ್ಕಲಿಗ ಸಿಟಿ ರವಿಗೆ ಅವಕಾಶ ಕೊಡುತ್ತಾರೆ ಎಂಬುದು ಪಕ್ಷದೊಳಗಿನ ಮತ್ತೊಂದು ಜಾತಿ ಸಮೀಕರಣ.‌

ಈ ಮಧ್ಯೆ ವಿಧಾನ ಪರಿಷತ್​​ನಲ್ಲಿ ಒಬಿಸಿ ಸಮುದಾಯದ ಎನ್.‌ ರವಿಕುಮಾರ್ ಅಥವಾ ದಲಿತ ಸಮುದಾಯದ ಛಲವಾದಿ ನಾರಾಯಣಸ್ವಾಮಿಗೆ ಅವಕಾಶ ಕೊಡಿಸಲು ಸತತ ಪ್ರಯತ್ನ ನಡೆದಿದೆ. ವಿಧಾನಸಭೆಯಲ್ಲಿ ಒಕ್ಕಲಿಗ ವಿಪಕ್ಷ ನಾಯಕ ಇರುವ ಕಾರಣ ವಿಧಾನ ಪರಿಷತ್​ನಲ್ಲಿ ಒಬಿಸಿ ಅಥವಾ ದಲಿತ ಸಮುದಾಯದ ವಾದ ಮುಂದಕ್ಕೆ ಬಂದಿದ್ದು, ವಿಪಕ್ಷ ನಾಯಕ ಅಶೋಕ್ ಈ ವಾದ ಮುಂದಿಡುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಅಲ್ಲದೇ ಕಳೆದ ವಾರ ಅಶೋಕ್ ದೆಹಲಿಗೆ ತೆರಳಿದ್ದ ವೇಳೆ ಕೂಡಾ ಹೈಕಮಾಂಡ್ ಮುಂದೆ ಇದೇ ವಾದ ಮಂಡಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಅಶೋಕ್ ವಿರುದ್ಧ ಪಕ್ಷದೊಳಗೇ ಅಸಮಾಧಾನ

ಮತ್ತೊಂದೆಡೆ, ವಿಪಕ್ಷ ನಾಯಕರಾಗಿ ಅಶೋಕ್ ಸಮರ್ಥವಾಗಿ ಹೊರ ಹೊಮ್ಮಿಲ್ಲ ಎಂಬ ಟೀಕೆಯೂ ಪಕ್ಷದೊಳಗೆ ದೊಡ್ಡಮಟ್ಟದಲ್ಲೇ ಇದೆ. ಈ ಚರ್ಚೆಗಳ ನಡುವೆಯೇ ನಿನ್ನೆ ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಸ್ವಾಮೀಜಿ ಭೇಟಿ ಮಾಡಿರುವ ಆರ್. ಅಶೋಕ್, ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದಾರೆ. ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಆಪ್ತ ಶಾಸಕರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎಂಬ ಮಾಹಿತಿಯೂ ಇದೆ.

ಹೈಕಮಾಂಡ್​ಗೆ ಸದಾನಂದ ಗೌಡ ಪತ್ರ

ಈ ಎಲ್ಲದರ ಮಧ್ಯೆ ರಾಜ್ಯ ಬಿಜೆಪಿಯಲ್ಲಿನ ಹೊಂದಾಣಿಕೆ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್​​ಗೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಪತ್ರ ಬರೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಎರಡು ಪುಟಗಳ ಪತ್ರ ಬರೆದಿರುವ ಸದಾನಂದ ಗೌಡ, ರಾಜ್ಯ ಬಿಜೆಪಿಯನ್ನು ಸರಿಪಡಿಸಿ ಎಂದು ಮನವಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನೆಡೆಗೆ ಕಾರಣಗಳು, ಕಾರ್ಯಕರ್ತರ ನಿರ್ಲಕ್ಯ್ಯ, ಹಿಂಬಾಲಕರಿಗೆ ಮಣೆ ಎಲ್ಲವನ್ನೂ ಪತ್ರದಲ್ಲಿ ಸದಾನಂದ ಗೌಡ ಉಲ್ಲೇಖಿಸಿದ್ದಾರೆ.‌

ಸದಾನಂದ ಗೌಡ ಪತ್ರ ಬರೆದಿರುವ ವಿಚಾರ ಗಮನಕ್ಕೆ ಬಂದ ಕೂಡಲೇ ಸದಾನಂದ ಗೌಡ ಭೇಟಿ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಿಖಿಲ್ ಅಭ್ಯರ್ಥಿಯಾದರೂ ಬೆಂಬಲ ನೀಡುವೆ: ಹೆಚ್​ಡಿಕೆ ಬಳಿ ಇನ್ನೂ ಏನೇನಂದರು ಯೋಗೇಶ್ವರ್? ಇಲ್ಲಿದೆ ನೋಡಿ

ಒಟ್ಟಾರೆಯಾಗಿ ಲೋಕಸಭೆ ಚುನಾವಣೆಯಲ್ಲಿ 19 ಸ್ಥಾನ ಮೈತ್ರಿಯೊಂದಿಗೆ ಗೆದ್ದರೂ ಉಳಿದ ಸೀಟು ಕಳೆದುಕೊಂಡಿರುವ ಬಗ್ಗೆ ಇನ್ನೂ ಸೋಲಿಗೆ ಕಾರಣ ಹುಡುಕುವ ಕೆಲಸ ಆಗಿಲ್ಲ ಎಂಬ ಮಾತೂ ಶುರುವಾಗಿದೆ. ರಾಜ್ಯ ಬಿಜೆಪಿಯಲ್ಲಿನ ಆಯಕಟ್ಟಿನ ಸ್ಥಾನದಲ್ಲಿರುವವರ ಕುರಿತಾದ ಚರ್ಚೆಗಳು ಸಾಗುತ್ತಿರುವ ಹಾದಿ ಗಮನಿಸಿದರೆ ಶೀಘ್ರದಲ್ಲೇ ನಿಜವಾಗಿಬಿಡುವ ಸಾಧ್ಯತೆಯೂ ಇಲ್ಲದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ