2009ರ ಬೈಎಲೆಕ್ಷನ್​ನಲ್ಲಿ ಸಿದ್ದರಾಮಯ್ಯ ಯಡಿಯೂರಪ್ಪ ಜತೆ ಕೈಜೋಡಿಸಿದ್ದರು: ಹೆಚ್​ಡಿ ಕುಮಾರಸ್ವಾಮಿ ಆರೋಪ

HD Kumaraswamy: ಕಾಂಗ್ರೆಸ್​ನಲ್ಲಿ ಅಧಿಕಾರ ಕೊಡದಿದ್ದಕ್ಕೆ ಬಿಜೆಪಿ ಬೆಂಬಲಿಸಿದ್ದರು. ಸಿದ್ದರಾಮಯ್ಯ ಹಣ ಪಡೆದು ಬಿಜೆಪಿಯನ್ನ ಬೆಂಬಲಿಸಿದ್ದರು. ಆಗ ಒಬ್ಬನೇ ಒಬ್ಬ ಕಾಂಗ್ರೆಸ್ ಪಕ್ಷದ ಶಾಸಕ ಗೆದ್ದಿರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

2009ರ ಬೈಎಲೆಕ್ಷನ್​ನಲ್ಲಿ ಸಿದ್ದರಾಮಯ್ಯ ಯಡಿಯೂರಪ್ಪ ಜತೆ ಕೈಜೋಡಿಸಿದ್ದರು: ಹೆಚ್​ಡಿ ಕುಮಾರಸ್ವಾಮಿ ಆರೋಪ
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ

ಕಲಬುರಗಿ: ಒಳಸಂಚು ಸಿದ್ದರಾಮಯ್ಯನವರ ಹುಟ್ಟು ಗುಣ, ನಮ್ಮದಲ್ಲ. 2009ರಲ್ಲಿ ಬೈಎಲೆಕ್ಷನ್​​ನಲ್ಲಿ ಸಿದ್ದರಾಮಯ್ಯ ಬಿ.ಎಸ್. ಯಡಿಯೂರಪ್ಪ ಜತೆ ಕೈಜೋಡಿಸಿದ್ದರು. ಯಡಿಯೂರಪ್ಪ ಜೊತೆ ಸಿದ್ದರಾಮಯ್ಯ ಕೈ ಜೋಡಿಸಿದ್ದರು ಎಂದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್​ನಲ್ಲಿ ಅಧಿಕಾರ ಕೊಡದಿದ್ದಕ್ಕೆ ಬಿಜೆಪಿ ಬೆಂಬಲಿಸಿದ್ದರು. ಸಿದ್ದರಾಮಯ್ಯ ಹಣ ಪಡೆದು ಬಿಜೆಪಿಯನ್ನ ಬೆಂಬಲಿಸಿದ್ದರು. ಆಗ ಒಬ್ಬನೇ ಒಬ್ಬ ಕಾಂಗ್ರೆಸ್ ಪಕ್ಷದ ಶಾಸಕ ಗೆದ್ದಿರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್ ಪಕ್ಷಕ್ಕೆ ಮತ ನೀಡಿದ್ರೆ ಬಿಜೆಪಿಗೆ ಮತ ಹಾಕಿದಂತೆ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಹಿಂದೆ ಜೆಡಿಎಸ್ ಬಿಜೆಪಿ ಬಿ ಟೀಮ್ ಅಂದರು. ಆದ್ರೆ ಅವರೇ ಕಳೆದ ಚುನಾವಣೆ ನಂತರ ನಮ್ಮ ಮನೆಗೆ ಬಂದರು. ಆಗ ಬಿಜೆಪಿ ಜೊತೆ ಹೋಗದೆ ನಾವು ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದೆವು. ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತರು ಕಾಂಗ್ರೆಸ್​ಗೆ ಮತ ಹಾಕಿದ್ರೆ ಬಿಜೆಪಿಗೆ ಅನಕೂಲವಾಗುತ್ತದೆ. ಉಪ ಚುನಾವಣೆಯಲ್ಲಿ ಮತ ವಿಭಜನೆ ಮಾಡಲು ಅಭ್ಯರ್ಥಿ ಹಾಕಿಲ್ಲ. ಜೆಡಿಎಸ್​ಗೆ ಓಟ್ ಹಾಕಿದ್ರೆ ಬಿಜೆಪಿಗೆ ಓಟ ಹಾಕಿದಂತೆ ಅಂತ ಕೈ ನಾಯಕರು ಹೇಳ್ತಾರೆ. ಬಿಜೆಪಿಯವರು ಮತ್ತೊಂದು ರೀತಿ ಹೇಳ್ತಿದ್ದಾರೆ. ನಾವು ಯಾರನ್ನು ನಂಬಿ ಚುನಾವಣೆ ನಡೆಸೋದು. ನಿಮ್ಮನ್ನು ನಂಬಿ ನಾನು ಇಲ್ಲಿಗೆ ಪ್ರಚಾರಕ್ಕೆ ಬಂದಿದ್ದೇನೆ. ಜಾತಿ ವ್ಯಾಮೋಹ, ಹಣದ ವ್ಯಾಮೋಹಕ್ಕೆ ಜನರು ಮರಳಾಗಬಾರದು ಎಂದು ತಿಳಿಸಿದ್ದಾರೆ.

ಬಿಜೆಪಿಯವರು ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಅಂದ್ರು. ಕಾಂಗ್ರೆಸ್​ನವರು ಮೋದಿ ಹೆಬ್ಬಟ್ಟು ಅಂತಿದ್ದಾರೆ. ಈ ರೀತಿ ಹೇಳಿಕೆಯಯಿಂದ ದೇಶದ ಬಡತನ ದೂರವಾಗುತ್ತಾ. ನಾನು ಕಷ್ಟದಲ್ಲಿದ್ದೇನೆ, ಜೆಡಿಎಸ್ ಕಷ್ಟದಲ್ಲಿದೆ. ಕಷ್ಟದ ದಿನದ ಸಮಯದಲ್ಲಿ ನಿಮ್ಮ ಮುಂದೆ ಬಂದಿದ್ದೇನೆ, ನೀವು ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಜೆಡಿಎಸ್ ಬಿಜೆಪಿ ಜೊತೆ ಸರ್ಕಾರ ರಚಿಸಿತ್ತು ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಅವರು ತಿರುಗೇಟು ನೀಡಿದ್ದಾರೆ. ಮಮತಾ ಬ್ಯಾನರ್ಜಿ ವಾಜಪೇಯಿ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿದ್ದರು. ಇದೀಗ ಅದೇ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ದ ಹೋರಾಡುತ್ತಿದ್ದಾರೆ. ಡಿಎಂಕೆ ಬಿಜೆಪಿ ಜೊತೆ ಸೇರಿ ಅಧಿಕಾರ ಮಾಡಿದೆ. ನಿಮ್ಮ ತಪ್ಪುಗಳಿಂದ ನಾವು ಬಿಜೆಪಿ ಜೊತೆ ಹೋಗಬೇಕಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತರನ್ನು ಓಲೈಸುವುದು ಖಯಾಲಿಯಾಗಿಬಿಟ್ಟಿದೆ: ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಸರಣಿ ಟ್ವೀಟ್

ಇದನ್ನೂ ಓದಿ: ಬಹುತೇಕ ಉಪಚುನಾವಣೆಗಳಲ್ಲಿ ನಾವು ಸೋತಿದ್ದೇವೆ, ಕಷ್ಟದಲ್ಲಿದ್ದೇವೆ: ಎಚ್​ಡಿ ಕುಮಾರಸ್ವಾಮಿ

Click on your DTH Provider to Add TV9 Kannada