AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನೇ ಮುಂದಿನ ಒಕ್ಕಲಿಗರ ನಾಯಕ: ಪರೋಕ್ಷವಾಗಿ ಡಿಕೆ ಶಿವಕುಮಾರ್​ ಹೇಳಿಕೆ, ಕುಮಾರಸ್ವಾಮಿ, ದೇವೇಗೌಡಗೆ ಗುದ್ದು

ಹಳೇ ಮೈಸೂರು ಭಾಗದಲ್ಲಿನ ಒಕ್ಕಲಿಗರ ಮತಗಳನ್ನ ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾನಾ ತಂತ್ರಗಳನ್ನು ಮಾಡುತ್ತಿದ್ದು, ರವಿವಾರ (ಏ.14) ರಂದು ಮೈಸೂರಿನಲ್ಲಿ ಒಕ್ಕಲಿಗ ಮುಖಂಡರ ಸಭೆ ನಡೆಸಿದರು. ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ನಾನೇ ಮುಂದಿನ ಒಕ್ಕಲಿಗರ ನಾಯಕ: ಪರೋಕ್ಷವಾಗಿ ಡಿಕೆ ಶಿವಕುಮಾರ್​ ಹೇಳಿಕೆ, ಕುಮಾರಸ್ವಾಮಿ, ದೇವೇಗೌಡಗೆ ಗುದ್ದು
ಜನ್ಮದಿನದಂದು ನನ್ನ ಭೇಟಿಗೆ ಬರಬೇಡಿ: ಡಿಕೆ ಶಿವಕುಮಾರ್​ ಮನವಿ
TV9 Web
| Edited By: |

Updated on:Apr 15, 2024 | 12:21 PM

Share

ಮೈಸೂರು, ಏಪ್ರಿಲ್​ 15: ರಾಜ್ಯ ಕಾಂಗ್ರೆಸ್​ಗೆ ಬೆಂಗಳೂರು ಗ್ರಾಮಾಂತರ ಮತ್ತು ಹಳೇ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳು ಪ್ರತಿಷ್ಠೆಯಾಗಿ ಪರಿಣಮಿಸಿವೆ. ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲಲು ಕಾಂಗ್ರೆಸ್​ (Congress) ಪಣ ತೊಟ್ಟಿದೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತಗಳು ಜಾಸ್ತಿ ಇದ್ದು, ಕಾಂಗ್ರೆಸ್​ನಲ್ಲಿ ಒಕ್ಕಲಿಗರ ನಾಯಕ ಅಂತ ಡಿಕೆ ಶಿವಕುಮಾರ್ (DK Shivakumar)​​ ಗುರುತಿಸಿಕೊಂಡಿದ್ದಾರೆ. ಆದರೆ ಪಕ್ಷಾತೀತವಾಗಿ ಒಕ್ಕಲಿಗರ (Okkaliga) ನಾಯಕನಾಗಲು ಡಿಕೆ ಶಿವಕುಮಾರ್​ ಹೆಣಗಾಡುತ್ತಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಈಗಾಗಲೆ ನಾನಾ ತಂತ್ರಗಳನ್ನು ಮಾಡುತ್ತಿದ್ದು, ರವಿವಾರ (ಏ.14) ರಂದು ಮೈಸೂರಿನಲ್ಲಿ ಒಕ್ಕಲಿಗ ಮುಖಂಡರ ಸಭೆ ನಡೆಸಿದರು. ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ ಹೆಚ್​ಡಿ ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾದರು. ಹೆಚ್​.ಡಿ. ದೇವೇಗೌಡ ಅವರು ದೇಶದ ಪ್ರಧಾನಿಯಾದರು. ನಾನು ನಿಮ್ಮೂರಿನ ಅಳಿಯ, ನನಗೂ ದೊಡ್ಡ ಜವಾಬ್ದಾರಿ ಇದೆ. ಇಲ್ಲಿ ರಕ್ಷಣೆ ಇಲ್ಲ, ನಾಯಕತ್ವದ ಸಮಸ್ಯೆ ಇದೆ. ಸ್ವಲ್ಪ ದಿನ ಅಷ್ಟೆ. ನೀವು ತಲೆಕೆಡಿಸಿಕೊಳ್ಳಲು ಹೋಗಬೇಡಿ, ನೀವು ಎಲ್ಲರೂ ನಮ್ಮ ಬೆಂಬಲಕ್ಕೆ ನಿಲ್ಲಬೇಕು. ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಕ್ಕಲಿಗರ ಮತಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದರು. ಜೊತೆಗೆ ಮುಂದಿನ ದಿನಗಳಲ್ಲಿ ಒಕ್ಕಲಿಗ ಸಮಾಜದ ನಾಯಕ ಮತ್ತು ಮುಖ್ಯಮಂತ್ರಿಯಾಗುವ ಸುಳಿವನ್ನು ನೀಡಿದರು.

ನಾಯಕತ್ವ ವಿಚಾರದಲ್ಲಿ ನಮ್ಮ ಸಮಾಜದವರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಈಗ ಸಚಿವ ವೆಂಕಟೇಶ್​​, ಹರೀಶ್​​ಗೌಡ ಮುಂದಾಳತ್ವ ವಹಿಸಿದ್ದಾರೆ. ಹೆಚ್​ಡಿ ಕುಮಾರಸ್ವಾಮಿ ಪುಟ್ಟರಾಜುಗೆ ಟಿಕೆಟ್ ಕೊಡುತ್ತೇನೆಂದು ಚಾಕಲೇಟ್ ಕೊಟ್ಟರು. ನಾವೇನು ಮಾಡಲ್ಲ, ಬಿಜೆಪಿಗರೇ ಅವರನ್ನು ಮುಗಿಸುತ್ತಾರೆ. ಒಕ್ಕಲಿಗರು ದರಿದ್ರ ಮಾತಾಡ್ತಾರೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂದರು.

ನಾನು ಅಪ್ಪ-ಅಮ್ಮನಿಗೆ ಹುಟ್ಟಿಲ್ಲ ಅಂಥ ಹೆಚ್​ಡಿ ಕುಮಾರಸ್ವಾಮಿ ಹೇಳಿದರು. ನನ್ನ ತಾಯಿಯನ್ನೇ ಕರೆದುಕೊಂಡು ಹೋಗಿ ಅವರ ಮುಂದೆ ಕೂರಿಸಿದೆ. ಆಗ ಕ್ಷಮೆ ಕೇಳಿದರು. ಬಾಯಿ ಇದೆ ಅಂಥ ಏನು ಬೇಕಾದ್ರೂ ಮಾತಾಡಬಹುದಾ? ನಾನು ಸಮಾಜಕ್ಕೆ ಹೆದರುತ್ತೇನೆ, ಇಂಥವರಿಗೆ ಹೆದರಲ್ಲ. ಇಂಥವರಿಗೆ ಹೆದರುವ ಮಗ ಅಲ್ಲ ಎಂದ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ನೀನು ಒಂದು ತಾಯಿ‌ ಹೊಟ್ಟೆಯಲ್ಲಿ‌ ಹುಟ್ಟಿದ್ದೀಯಾ: ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ್​ ವಾಗ್ದಾಳಿ

ಹಾಸನದಲ್ಲಿ ಜನರು ರೊಚ್ಚಿಗೆದ್ದಿದ್ದಾರೆ. ಹೆಚ್​ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ ರೇವಣ್ಣ ಗೆಲಲ್ಲು ಸಾಧ್ಯವೇ ಇಲ್ಲ. ಚಾಮರಾಜನಗರದಲ್ಲು ನಾವೇ ಗೆಲ್ಲುತ್ತೇವೆ. ಮಂಡ್ಯದಲ್ಲಿ ಸಾಮಾನ್ಯ ಕುಟುಂಬದಿಂದ ಬಂದವನಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ನನ್ನ ತಮ್ಮ (ಡಿಕೆ ಸುರೇಶ್​) ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಚುನಾವಣೆಗೆ ನಿಲ್ಲಬೇಕಿತ್ತು. ಹೆಚ್​ಡಿ ಕುಮಾರಸ್ವಾಮಿ ಅವರೆ ನೀವು ರಾಮನಗರ ಶಾಸಕರಿದ್ದೀರಿ, ನಿಮ್ಮ ಪ್ರಾಬಲ್ಯ ಹೆಚ್ಚಿದೆ, ಬಂದು ನಿಲ್ಲಬೇಕಿತ್ತು, ಯಾರು ಬ್ಯಾಡ ಅಂತಿದ್ದರು.

ನಾನು ಜೈಲಿಗೆ ಹೋದಾಗ ನನ್ನ ಬಗ್ಗೆ ಏನೆಲ್ಲ ಮಾತನಾಡಿದರು, ದುಡ್ಡು ಹೊಡೆದಿದ್ದಾರೆ, ತಿಂದವರು ಅನುಭವಿಸ್ತಾರೆ ಅಂದರು. ಕುಮಾರಸ್ವಾಮಿ ನನ್ನ ಬಗ್ಗೆ ಮಾತನಾಡಿದರೂ ಸುಮ್ಮನಿದ್ದೇನೆ. ಅವರೆಲ್ಲಾ ಕಳ್ಳೆಕಾಯಿ, ಆಲೂಗೆಡ್ಡೆ ಬೆಳೆದು ಬಿಟ್ಟಿದ್ರಾ? ದೇವೇಗೌಡರ ಕುಟುಂಬದ ಆಸ್ತಿ ಎಷ್ಟಿದೆ ಲೆಕ್ಕವನ್ನ ಕೊಡಲಿ. ಬೆಂಗಳೂರು ಸುತ್ತ ಮುತ್ತನೇ ಒಂದು ಸಾವಿರ ಎಕರೆ ಇದೆ. ನಾನು ಅದರ ಕುರಿತು ಚರ್ಚೆ ಮಾಡಲ್ಲ ಎಂದರು.

ನಾನು ವಿಷ ಹಾಕಿದೆ ಅಂತ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ, ನಮ್ಮ ಸಮಾಜದ ಜನ ಬೈತಾರೇ ಅಂಥ ನಾನು ಸುಮ್ಮನಿದ್ದೆ. ದೆಹಲಿಯಲ್ಲಿ ಏನು ಆಗಬೇಕೋ ಎಲ್ಲ ಆಗಿದೆ. ಚಲುವರಾಯಸ್ವಾಮಿ, ಕೃಷ್ಣಭೈರೇಗೌಡ ನನ್ನ ಬಳಿ ಚರ್ಚಿಸಿದರು. ನೀವು ಹೇಳುವುದು ಬೇಡ ನಿಮ್ಮ ನ್ಯಾಯ ನಡೆಯಲ್ಲ. ದೆಹಲಿಯಲ್ಲಿ ಎಲ್ಲವೂ ನಡೆಯಬೇಕು ಎಂದು ಹೇಳಿದ್ದೇನೆ. ಇದರ ಬಗ್ಗೆ ಈಗ ಚರ್ಚೆ ಬೇಡ ಎಂದಿದ್ದೇನೆ. ಇದು 5 ವರ್ಷದ ಸರ್ಕಾರ ಅಲ್ಲ, 10 ವರ್ಷದ ಸರ್ಕಾರ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:59 am, Mon, 15 April 24