AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆ ಚುನಾವಣೆ 2024: ಕೋಲಾರ ಕಾಂಗ್ರೆಸ್​ ಅಭ್ಯರ್ಥಿಯಾಗಿ ಮಾಜಿ ಮೇಯರ್​ ಪುತ್ರ ಗೌತಮ್ ಕಣಕ್ಕೆ

Lok Sabha Election 2024: ಕೋಲಾರ ಲೋಕಸಭಾ ಕ್ಷೇತ್ರದ ​ಟಿಕೆಟ್ ಅನ್ನು ಕಾಂಗ್ರೆಸ್​ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮಾಜಿ ಮೇಯರ್​ ವಿಜಯ್​ ಕುಮಾರ್​ ಅವರ ಪುತ್ರ ಕೆ.ವಿ. ಗೌತಮ್ ಅವರಿಗೆ ನೀಡಿದೆ. ಕೊನೆಯದಾಗಿ ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್​​ 28 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಲೋಕಸಭೆ ಚುನಾವಣೆ 2024: ಕೋಲಾರ ಕಾಂಗ್ರೆಸ್​ ಅಭ್ಯರ್ಥಿಯಾಗಿ ಮಾಜಿ ಮೇಯರ್​ ಪುತ್ರ ಗೌತಮ್ ಕಣಕ್ಕೆ
ಕೆ ಗೌತಮ್​
TV9 Web
| Edited By: |

Updated on:Mar 30, 2024 | 12:14 PM

Share

ಕೋಲಾರ, ಮಾರ್ಚ್ 30: ಕೋಲಾರ ಲೋಕಸಭಾ ಕ್ಷೇತ್ರದ (Kolar Lok Sabha Constituency) ಟಿಕೆಟ್ ಅನ್ನು ಕಾಂಗ್ರೆಸ್​​ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮಾಜಿ ಮೇಯರ್​ ವಿಜಯ್​ ಕುಮಾರ್​ ಅವರ ಪುತ್ರ ಕೆ.ವಿ. ಗೌತಮ್​ (K Goudtam) ಅವರಿಗೆ ನೀಡಿದೆ. ಈ ಮೂಲಕ ಕಾಂಗ್ರೆಸ್​ ಹೈಕಮಾಂಡ್​ ಮಾಜಿ ಸಭಾಪತಿ ರಮೇಶ್​ ಕುಮಾರ್ ಮತ್ತು ಸಚಿವ ಕೆ.ಹೆಚ್​ ಮುನಿಯಪ್ಪ ಎರಡೂ ಬಣದವರನ್ನು ಬಿಟ್ಟು ಮೂರನೇ ವ್ಯಕ್ತಿಗೆ ಮಣೆ ಹಾಕಿದೆ. ಕೊನೆಯದಾಗಿ ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್​​ 28 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಕಗ್ಗಂಟಾಗಿದ್ದ ಕೋಲಾರ ಕ್ಷೇತ್ರ

ಕೋಲಾರ ಕಾಂಗ್ರೆಸ್​ ಘಟಕದಲ್ಲಿ ಮಾಜಿ ಸಭಾಪತಿ ರಮೇಶ್​ ಕುಮಾರ್ ಮತ್ತು ಕೆ.ಹೆಚ್​ ಮುನಿಯಪ್ಪ ಎರಡು ಬಣಗಳಿವೆ. ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಕೆ.ಹೆಚ್​ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣನಿಗೆ ನೀಡುವುದು ಪಕ್ಕಾ ಅಂತ ತಿಳಿಯುತ್ತಿದ್ದಂತೆ ರಮೇಶ್​ ಕುಮಾರ್​ ಬಣದ ನಾಯಕರು ಅಸಮಾಧಾನಗೊಂಡು ಬಂಡಾಯವೆದ್ದಿದ್ದರು.  ಒಂದು ವೇಳೆ ಕೆ.ಹೆಚ್​ ಮುನಿಯಪ್ಪ ಕಡೆಯವರಿಗೆ ಟಿಕೆಟ್​ ನೀಡಿದರೆ ಸಾಮೂಹಿಕವಾಗಿ ರಾಜಿನಾಮೆ ನೀಡುತ್ತೇವೆ ಎಂದು ರಮೇಶ್​ ಕುಮಾರ್​ ಬಣದ ಐದು ಜನ ಶಾಸಕರು ಸಿದ್ದವಾಗಿದ್ದರು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮಧ್ಯಸ್ಥಿಕೆ ವಹಿಸಿ ಅಸಮಾಧಾನಿತ ಶಾಸಕರನ್ನು ಸಮಾಧಾನ ಮಾಡಿದರು. ಇದೀಗ ಎರಡೂ ಬಣದವರನ್ನು ಹೊರತು ಪಡಿಸಿ ಮೂರನೇದವರಿಗೆ ಟಿಕೆಟ್​ ನೀಡಲಾಗಿದೆ.

ಇದನ್ನೂ ಓದಿ: ಸಿಎಂ, ಡಿಸಿಎಂ ಮುಂದೆ ಮುನಿಯಪ್ಪರ ದಲಿತ ಎಡಗೈ-ಬಲಗೈ ಸಮುದಾಯದ ಪ್ರಾತಿನಿಧ್ಯದ ವಾದ

ಪರಿಶಿಷ್ಟ ಎಡಗೈ ಸಮುದಾರಕ್ಕೆ ಟಿಕೆಟ್​ ನೀಡಲು ಕಾರಣ

ರಾಜ್ಯದ ಐದು ಪರಿಶಿಷ್ಟ ಜಾತಿಯ ಲೋಕಸಭಾ ಕ್ಷೇತ್ರಗಳಲ್ಲಿ ಕೋಲಾರ ಕ್ಷೇತ್ರ ಕೂಡ ಒಂದು. ಕಾಂಗ್ರೆಸ್ ​ ಮೊದಲಿನಿಂದಲೂ ಎರಡು ಕ್ಷೇತ್ರದ ಟಿಕೆಟ್​ ದಲಿತ ಬಲಗೈ, ಎರಡು ಕ್ಷೇತ್ರದ ಟಿಕೆಟ್​ ಎಡಗೈ ಹಾಗೂ ಒಂದು ಭೋವಿ ಅಥವಾ ಲಂಬಾಣಿ ಸಮುದಾಯಕ್ಕೆ ನೀಡುತ್ತಾ ಬಂದಿದೆ. ಆದರೆ ಕಾಂಗ್ರೆಸ್ ಈ ಬಾರಿ ​ವಿಜಯಪುರ, ಕಲಬುರಗಿ ಕ್ಷೇತ್ರದ ಟಿಕೆಟ್​ ಅನ್ನು ಬಲ ಸಮುದಾಯವರಿಗೆ ನೀಡಿದೆ. ಇನ್ನು ಚಾಮರಾಜನಗರದಲ್ಲೂ ಬಲಗೈ ಸಮುದಾಯದ ಡಾ.ಹೆಚ್​.ಸಿ ಮಹದೇವಪ್ಪ ಪುತ್ರ ಸುನಿಲ್​ ಬೋಸ್​ಗೆ ಟಿಕೆಟ್​ ನೀಡಿದೆ.

ಕಾಂಗ್ರೆಸ್​ ಚಿತ್ರದುರ್ಗ ಕ್ಷೇತ್ರ ಒಂದನ್ನೂ ಮಾತ್ರ ಎಡಗೈ ಸಮುದಾಯಕ್ಕೆ (ಬಿ.ಎನ್​. ಚಂದ್ರಪ್ಪ) ಟಿಕೆಟ್​ ನೀಡಿದೆ. ಇದೀಗ ಕೋಲಾರದಲ್ಲಿ ಎಡಗೈ ಸಮುದಾಯದ ಕೆ.ವಿ ಗೌತಮ್​ ಅವರಿಗೆ ಟಿಕೆಟ್​ ನೀಡುವ ಮೂಲಕ  3 ಬಲ + 2 ಎಡ ಅಭ್ಯರ್ಥಿಗಳಿಗೆ ಟಿಕೆಟ್​ ಸಿಕ್ಕಂತಾಗಿದೆ.

ಯಾರು ಈ ಕೆವಿ ಗೌತಮ್​

ಕೆ.ವಿ.ಗೌತಮ್ ಬೆಂಗಳೂರಿನ ಮಾಜಿ‌ ಮೇಯರ್ ಕೆ.ವಿಜಯಕುಮಾರ್ ಅವರ ಮಗ. ಕೋಲಾರ ಮೂಲದವರಾದ ಇವರು ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದಾರೆ. ಕೆ ವಿಜಯಕುಮಾರ್ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಪಕ್ಷದ ಸಂಘಟನೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ ಈ ಹಿನ್ನೆಲೆಯಲ್ಲಿ ಅವರ ಪುತ್ರನನ್ನು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:32 am, Sat, 30 March 24

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು