AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರು ಮಾತ್ರವಲ್ಲ ಹಿಂದೂಗಳು ಕೂಡ ಗೋಮಾಂಸ ತಿನ್ನುತ್ತಾರೆ: ಸಿದ್ದರಾಮಯ್ಯ

ಕೇವಲ ಮುಸ್ಲಿಮರು ಅಷ್ಟೇ ಗೋಮಾಂಸವನ್ನು ತಿನ್ನುವುದಿಲ್ಲ, ಹಿಂದೂಗಳು ಸಹ ಗೋಮಾಂಸ ತಿನ್ನುತ್ತಾರೆ ಎಂದು ತುಮಕೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಮುಸ್ಲಿಮರು ಮಾತ್ರವಲ್ಲ ಹಿಂದೂಗಳು ಕೂಡ ಗೋಮಾಂಸ ತಿನ್ನುತ್ತಾರೆ: ಸಿದ್ದರಾಮಯ್ಯ
ಸಿದ್ದರಾಮಯ್ಯ
TV9 Web
| Edited By: |

Updated on:May 22, 2022 | 6:13 PM

Share

ತುಮಕೂರು: ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಿದೆ. ಕೇವಲ ಮುಸ್ಲಿಮರು ಅಷ್ಟೇ ಗೋಮಾಂಸವನ್ನು ತಿನ್ನುವುದಿಲ್ಲ, ಹಿಂದೂಗಳು ಸಹ ಗೋಮಾಂಸ ತಿನ್ನುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ತುಮಕೂರಿನಲ್ಲಿ ನಡೆದ ಜಿಲ್ಲಾ ಅಲ್ಪಸಂಖ್ಯಾತರ ಬೃಹತ್ ಸಮಾವೇಶ (Convention)ದಲ್ಲಿ ಮಾತನಾಡಿದ ಅವರು, ಗೋಮಾಂಸ (Beef) ತಿನ್ನುವ ಬಗ್ಗೆ ಸದನದಲ್ಲಿ ನಾನು ಪ್ರಶ್ನೆ ಮಾಡಿದ್ದೇನೆ. ಹಾಗಾದ್ರೆ ನೀನು ಗೋಮಾಂಸ ತಿಂತಿಯಾ ಅಂತ ಪ್ರಶ್ನಿಸಿದ್ದರು. ಈವರೆಗೂ ತಿಂದಿಲ್ಲ, ತಿನ್ನಬೇಕು ಎನ್ನಿಸಿದರೆ ತಿನ್ನುವೆ. ನೀನು ಯಾರು ಕೇಳೋಕೆ ಅಂತ ಉತ್ತರ ಕೊಟ್ಟೆ ಎಂದು ಹೇಳಿದರು.

ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇದೆ. ಕೆಲ ಧರ್ಮಗಳಲ್ಲಿ ಅವರದ್ದೇ ಆದ ಆಚಾರ-ವಿಚಾರ ಇರುತ್ತದೆ. ನಮ್ಮ ಧರ್ಮದ ಬಗ್ಗೆ ನಿಷ್ಠೆ ಮತ್ತು ಪರ ಧರ್ಮವನ್ನು ಗೌರವಿಸಬೇಕು. ಯಾವುದನ್ನೂ ಭೇದ ಭಾವ ಮಾಡಬಾರದು. ಯಾರೂ ಸಹ ಸಂವಿಧಾನ ವಿರುದ್ಧವಾಗಿ ನಡೆದುಕೊಳ್ಳಬಾರದು. ಸಮಾಜ ಒಡೆಯುವ ಕೆಲಸ RSS ಮಾಡುತ್ತಿದೆ. ಇಂಥವರಿಗೆ ಅಧಿಕಾರ ಸಿಕ್ಕರೆ ಸಂವಿಧಾನವನ್ನೇ ತೆಗೆಯುತ್ತಾರೆ. ಬಿಜೆಪಿ ಸಂವಿಧಾನವನ್ನ ಒಡೆಯುವ ಕೆಲಸ ಮಾಡುತ್ತಿದೆ ಎಂದರು.

ಮೊದಲು ನಾವೆಲ್ಲಾ ಭಾರತೀಯರು

ಯಾರು ಯಾವುದೇ ಧರ್ಮಕ್ಕೆ ಸೇರಿದರೂ ಮೊದಲು ನಾವೆಲ್ಲಾ ಭಾರತೀಯರು. ನಮ್ಮ ಭಾರತೀಯ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಯಿದೆ. ಜಾತಿ-ಧರ್ಮದ ವ್ಯವಸ್ಥೆಯಲ್ಲಿ ಹುಟ್ಟಿದ್ದೇವೆ. ನಾವೆಲ್ಲೆರು ಮೊದಲು ಮನುಷ್ಯರಾಗಿ ಬದುಕಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್​ 2’ ವೀಕ್ಷಿಸಿದ ಕಮಲ್ ಹಾಸನ್, ಇಳಯರಾಜ​ ಹೇಳಿದ್ದೇನು?

ಈ ದೇಶ ಒಂದು ಧರ್ಮದವರ ದೇಶ ಅಲ್ಲ. ಅಂಬೇಡ್ಕರ್ ಸಂವಿಧಾನ ರಚನೆ ಮಾಡುವಾಗ ಒಂದು ದೇಶದ ಧರ್ಮ ಎಂದು ಬರೆದಿಲ್ಲ. ಎಲ್ಲರೂ ತಮಗೆ ನಿಷ್ಠೆ ಇರುವಂತಹ ಧರ್ಮ ಆಚರಣೆಗೆ ಅವಕಾಶ ಇದೆ. ಧರ್ಮದಲ್ಲಿ ನಿಷ್ಠೆ ಇದ್ದು ಪರ ಧರ್ಮವನ್ನು ಗೌರವಿಸುವ ಸಹಿಷ್ಣುತೆ ಇರಬೇಕು. ಪರ ಧರ್ಮದ ಬಗ್ಗೆ ಅಸೂಯೆ ಪಟ್ಟರೆ ನಾವು ಮನುಷ್ಯರಲ್ಲ. ಸರ್ವಜನಾಂಗದ ಶಾಂತಿಯ ತೋಟ ಅನ್ನೋದು ಬರೀ ಹೇಳೋಕೆ ಮಾತ್ರನಾ? ಸಂವಿಧಾನದ ಆಶಯದಂತೆ ನಡೆಯಬೇಕು ಎಂದರು.

ಹಿಂದೂ ಸಮುದಾಯದಲ್ಲಿ ಅಸಮಾನತೆ ಇದ್ದುದರಿಂದ ಅಂಬೇಡ್ಕರ್ ಮತಾಂತರ ಆದರು. ಜೆಡಿಎಸ್​ನವರು ಜಾತ್ಯಾತೀತರು ಅಂತಾರೆ. ಮತಾಂತರ ಮತ್ತು ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧ ಮಾಡಿಲ್ಲ. ಅವರು ಜ್ಯಾತ್ಯಾತೀತರಾ? ಟಿಪ್ಪು ಸುಲ್ತಾನ್ ಜಯಂತಿ ಸಿದ್ದರಾಮಯ್ಯ ವೋಟ್​ಗಾಗಿ ಮಾಡ್ಬಿಟ್ಟಾ ಅಂತಾರೆ. ಟಿಪ್ಪು ಸುಲ್ತಾನ್ ಮತಾಂಧ ಅಲ್ಲ. ಟಿಪ್ಪು ಒಬ್ಬ ಮಹಾನ್‌ ದೇಶಭಕ್ತ. ಇವತ್ತು ಬಿಜೆಪಿ ಸರ್ಕಾರ ಹಿಜಾಬ್, ಹಲಾಲ್, ಆಜಾನ್‌ ವಿಚಾರ ಎತ್ತುತಿದ್ದಾರೆ. ಅವರ ಹುಳುಕುಗಳನ್ನು ಮುಚ್ಚಲು ಇದನ್ನು ಎತ್ತುತಿದ್ದಾರೆ ಎಂದರು.

ಇದನ್ನೂ ಓದಿ: Mumbai Indians Report Card: ಮುಂಬೈ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವದರೊಳಗೆ ಪ್ಲೇ ಆಫ್ ಬಾಗಿಲು ಮುಚ್ಚಿ ಹೋಗಿತ್ತು

ಯಾವತ್ತುಗೋವಿನ ಸಗಣಿ ಎತ್ತದವನು ಇವತ್ತು ಗೋ ರಕ್ಷಣೆ ಬಗ್ಗೆ ಮಾತನಾಡುತ್ತಾನೆ. ಅಂತಹ ಸ್ಥಿತಿಗೆ ನಮ್ಮ ರಾಜ್ಯ ತಲುಪಿದೆ. ಆರ್​ಎಸ್​ಎಸ್​ ಸಂಸ್ಥಾಪಕ ಬಲಿರಾಮ್ ಹೆಡ್ಗೆವಾರ್ ಮಾತ್ರ ಹಿಂದೂನಾ?, ಬಸವರಾಜ್ ಬೊಮ್ಮಾಯಿ ಮಾತ್ರ ಹಿಂದೂನಾ? ನನ್ನ ಅಪ್ಪ ಹಿಂದೂ, ನಾನು ಕೂಡ ಹಿಂದೂನೇ. ನಾನು ಎಲ್ಲಾ ಧರ್ಮವನ್ನ ಪ್ರೀತಿ ಮಾಡಲ್ವಾ ಎಂದರು.

ಮತದಾರರ ಪಟ್ಟಿ ಬಗ್ಗೆ ದೂರು

ತುಮಕೂರಿನಲ್ಲಿ ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರ ಹೆಸರನ್ನು ತೆಗೆದ ಬಗ್ಗೆ ದೂರು ಬಂದಿದೆ. ಜಿಲ್ಲೆಯಲ್ಲಿ 1 ಲಕ್ಷದ 60 ಸಾವಿರ ಮತದಾರರ ಹೆಸರು ನಾಪತ್ತೆಯಾಗಿದೆ ಎಂಬ ಆರೋಪ ಇದೆ. ಇದರ ಹಿಂದೆ ಬಿಜೆಪಿ ಕೈವಾಡ‌ವಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಇದನ್ನೂ ಓದಿ: Weight Loss: ಡಯಟ್ ಮಾಡದೆಯೇ ತೂಕ ಇಳಿಸುವುದು ಹೇಗೆ?

ಇದನ್ನೂ ಓದಿ: ದುಬೈನಲ್ಲಿ ಕಾಲಕಳೆಯುತ್ತಿರುವ ನಟಿ ಪ್ರಿಯಾಂಕಾ ಮೋಹನ್ ಮನಮೋಹಕ ಫೋಟೋ ವೈರಲ್

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

Published On - 6:13 pm, Sun, 22 May 22

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ