Explainer: ಪುರಾತತ್ವಶಾಸ್ತ್ರದ ಮಹಾನ್ ಸಾಧಕ ಶಿಕಾರಿಪುರ ರಂಗನಾಥರಾವ್ ಅವರ 10 ಕೊಡುಗೆಗಳ ಪರಿಚಯ ಇಲ್ಲಿದೆ

ಕೃಷ್ಣನ ನೆನಪಿನೊಂದಿಗೆ ಬೆಸದುಕೊಂಡಿರುವ ದ್ವಾರಕೆ ಮತ್ತು ದಕ್ಷಿಣ ಭಾರತದ ಹೆಮ್ಮೆ ಎನಿಸಿದ್ದ ವಿಜಯನಗರ ಸಾಮ್ರಾಜ್ಯದ ಬಗ್ಗೆ ಎಸ್​.ಆರ್​.ರಾವ್ ಅವರ ಸಂಶೋಧನೆಗಳು ಮಹತ್ವ ಪಡೆದಿವೆ. ಸಿಂಧೂ ಲಿಪಿ ಭೇದಿಸಿದ್ದ ಈ ಮಹತ್ವದ ಸಾಧಕ ಭಾರತದ ವಿದ್ವತ್ ಲೋಕಕ್ಕೆ ಕೊಟ್ಟ 10 ಮಹತ್ವದ ಕೊಡುಗೆಗಳ ಪರಿಚಯ ಇಲ್ಲಿದೆ.

Explainer: ಪುರಾತತ್ವಶಾಸ್ತ್ರದ ಮಹಾನ್ ಸಾಧಕ ಶಿಕಾರಿಪುರ ರಂಗನಾಥರಾವ್ ಅವರ 10 ಕೊಡುಗೆಗಳ ಪರಿಚಯ ಇಲ್ಲಿದೆ
ಶಿಕಾರಿಪುರ ರಂಗನಾಥರಾವ್ ಮತ್ತು ಅವರ ಕೃತಿ ದಿ ಲಾಸ್ಟ್​ ಸಿಟಿ ಆಫ್ ದ್ವಾರಕಾ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jul 01, 2021 | 6:32 PM

ಭಾರತೀಯ ಪುರಾತತ್ವ ಸಂಶೋಧನಾ ಕ್ಷೇತ್ರದ ದೊಡ್ಡ ಹೆಸರು ಶಿಕಾರಿಪುರ ರಂಗನಾಥರಾವ್​. ಎಸ್​.ಆರ್​.ರಾವ್​ ಎಂದೇ ದೇಶವ್ಯಾಪಿ ಹೆಸರುವಾಸಿಯಾಗಿದ್ದ ಅವರ ಹಲವು ಸಂಶೋಧನೆಗಳು ಇತಿಹಾಸ, ಪುರಾತತ್ವಶಾಸ್ತ್ರ, ಸಾಂಸ್ಕೃತಿಕ ಅಧ್ಯಯನ, ಇಂಡಾಲಜಿ ಕ್ಷೇತ್ರಗಳಲ್ಲಿ ಸಂಚಲನ ಮೂಡಿಸಿದ್ದವು. ಶಿಕಾರಿಪುರದ ಹುಚ್ಚೂರಾವ್-ಕಮಲಾಬಾಯಿ ದಂಪತಿ ಪುತ್ರರಾಗಿ 1ನೇ ಜುಲೈ 1922ರಲ್ಲಿ ಜನಿಸಿದ್ದ ಅವರು, ಇಂದು ಬದುಕಿದ್ದರೆ 99ನೇ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. 3ನೇ ಜನವರಿ 2013ರಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ರಾವ್ ಅವರು ಬೆಂಗಳೂರಿನಲ್ಲಿ ನಿಧನರಾದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಳಿಕ ಅಂದಿನ ಬರೋಡಾ ರಾಜ್ಯ ಪುರಾತತ್ವ ಇಲಾಖೆಯಲ್ಲಿ ವೃತ್ತಿ ಬದುಕು ಆರಂಭಿಸಿದರು. ನಂತರದ ದಿನಗಳಲ್ಲಿ ಪುರಾತತ್ವ ಇಲಾಖೆಯ ಆಗ್ರಾ ವೃತ್ತ, ನಾಗಪುರ, ಔರಂಗಾಬಾದ್ ವೃತ್ತ, ಬೆಂಗಳೂರು ವೃತ್ತಗಳಲ್ಲಿ ಕೆಲಸ ಮಾಡಿ ಸೇವೆಯಿಂದ ನಿವೃತ್ತರಾದರು. ಭಾರತೀಯ ಪುರಾತತ್ವಶಾಸ್ತ್ರಕ್ಕೆ ಎಸ್.ಆರ್.ರಾವ್ ಅವರ 10 ಮಹತ್ವದ ಕೊಡುಗೆಗಳ ನೆನಪು ಇಲ್ಲಿದೆ..

1) ಲೋತಲ್, ರಂಗ್‌ಪುರ, ಅಮ್ರೇಲಿ, ದ್ವಾರಕಾ, ಐಹೊಳೆ, ಕಾವೇರಿಪಟ್ಲಂ ಸೇರಿದಂತೆ ಪ್ರಮುಖ 20 ಐತಿಹಾಸಿಕ ಪ್ರದೇಶಗಳ ಉತ್ಖನನದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಹಲವು ಮಹತ್ವದ ಐತಿಹಾಸಿಕ ದಾಖಲೆಗಳು ಪತ್ತೆಹಚ್ಚಿದ್ದರು.

2) ಬಾದಾಮಿ, ಐಹೊಳೆ, ಪಟ್ಟದಕಲ್ಲು ಸಂರಕ್ಷಣೆಯಲ್ಲಿಯೂ ಇವರದು ಪ್ರಮುಖ ಪಾತ್ರ. ಅಂದು ರಾವ್ ಅವರು ತೆಗೆದುಕೊಂಡ ಗಟ್ಟಿ ನಿರ್ಧಾರಗಳಿಂದಲೇ ಇಂದು ಈ ಐತಿಹಾಸಿಕ ಸ್ಮಾರಕಗಳು ಸದೃಢವಾಗಿ ನಿಂತಿವೆ.

3) ಹಂಪಿಯಲ್ಲಿ ಉತ್ಖನನ ಚಟುವಟಿಕೆಗೆ ಹೊಸ ವೇಗ ನೀಡಿದ ಶಕ್ತಿ ರಾವ್. ಹಂಪಿ ಪರಿಸರದ ಹಲವು ಪುರಾತನ ಕಟ್ಟಡಗಳ ಸಂರಕ್ಷಣೆ, ಸಂರಚನೆ, ಪ್ರಾಚೀನ ವಾಸ್ತುಶಿಲ್ಪ ಶೈಲಿಯಲ್ಲಿ ಮರುರಚನೆಯಲ್ಲಿಯೂ ಇವರ ಕೊಡುಗೆ ಮಹತ್ವದ್ದು.

4) 1980ರಲ್ಲಿ ಸೇವೆಯಿಂದ ನಿವೃತ್ತಿ. 1981ರಿಂದ 1994ರವರೆಗೆ ಗೋವಾ ರಾಜ್ಯದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯನೋಗ್ರಫಿಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದರು.

5) ಪುರಾತತ್ವಶಾಸ್ತ್ರ ನಿಪುಣರಿಗೆ ಸಾಗರತಳದ ಸಂಶೋಧನೆಯ ಮಾಹಿತಿ ಇರಲಿಲ್ಲ. ಸಾಗರತಳ ಜಾಲಾಡುವುದು ಬಲ್ಲವರಿಗೆ ಪುರಾತತ್ವಶಾಸ್ತ್ರ ತಿಳಿದಿರಲಿಲ್ಲ. ಎರಡೂ ಜ್ಞಾನಶಿಸ್ತುಗಳ ನಡುವಣ ಕೊಂಡಿಯಾಗಿ ಎಸ್​.ಆರ್​.ರಾವ್​ ವಿಶ್ವಕ್ಕೆ ಬಹುದೊಡ್ಡ ಕೊಡುಗೆ ನೀಡಿದರು.

6) ಎಸ್​.ಆರ್.ರಾವ್ ಅವರ ಮಹತ್ವದ ಕೃತಿ ‘ಲಾಸ್ಟ್​ ಸಿಟಿ ಆಫ್ ದ್ವಾರಕಾ’. ಮಹಾಭಾರತದ ಬಗ್ಗೆ ಹಲವು ಒಳನೋಟಗಳನ್ನು ಕೊಟ್ಟ ಕೃತಿ ಎಂಬ ಖ್ಯಾತಿಯ ಜೊತೆಗೆ ಕೃಷ್ಣ ಎಂಬ ವ್ಯಕ್ತಿ ಮತ್ತು ದ್ವಾರಕೆ ಎಂಬ ನಗರ ಕೇವಲ ಪೌರಾಣಿಕವಲ್ಲ. ಐತಿಹಾಸಿಕ ಸಾಕ್ಷ್ಯಗಳೂ ಇವೆ ಎಂದು ನಿರೂಪಿಸಿತು.

7) ಸಿಂಧೂ ಸಂಸ್ಕೃತಿಯ ಲಿಪಿಯನ್ನು ಭೇದಿಸಿದ ಮೊದಲಿಗರು ರಾವ್. ಸಿಂಧೂ ನಾಗರಿಕತೆ ಕುರಿತು ಹಲವು ಕೃತಿಗಳನ್ನು ಬರೆದರು. ಸಿಂಧೂ ಬಯಲಿನ ಕಲೆಯ ಕುರಿತು ಗಂಭೀರ ಅಧ್ಯಯನ ಆರಂಭವಾಗಲು ಇವರ ಒತ್ತಾಸೆಯೂ ಕಾರಣ.

8) ಹಲವರ ವಿರೋಧಗಳನ್ನು ಕಟ್ಟಿಕೊಂಡು ದೇಶದ ವಿವಿಧೆಡೆ ಹಲವು ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸಿದರು. ಕರ್ನಾಟಕದಲ್ಲಿಯೂ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಸೇರಿದಂತೆ ನಾಡಿನ ಪ್ರಮುಖ ಐತಿಹಾಸಿಕ ಸ್ಮಾರಕಗಳ ಉಳಿವಿನ ಹಿಂದೆ ರಾವ್​ ಅವರ ಕೊಡುಗೆ ದೊಡ್ಡದು. ತಮಿಳುನಾಡಿನ ಕಾವೇರಿಪಟ್ಟಣಂ ನಗರದ ಪ್ರಾಚೀನತೆಯ ಬಗ್ಗೆಯೂ ರಾವ್​ ಅವರ ಸಂಶೋಧನೆ ಮಹತ್ವದ್ದು.

9) ಲಿಪಿಶಾಸ್ತ್ರದಲ್ಲಿಯೂ ರಾವ್ ಅವರ ಪರಿಶ್ರಮವಿತ್ತು. ತಿರುಪತಿಯಲ್ಲಿ ಲಿಪಿ ಮ್ಯೂಸಿಯಂ ಆರಂಭವಾಗಲು ರಾವ್ ಅವರ ಚಿಂತನೆಯ ಕೊಡುಗೆಯಿದೆ.

10) ಆರ್ಯರು ದಾಳಿ ಸಿದ್ಧಾಂತವನ್ನು ಹಲವು ಆಧಾರಗಳೊಂದಿಗೆ ಎಸ್​.ಆರ್.ರಾವ್ ನಿರಾಕರಿಸಿದ್ದರು. ರಾವ್ ಅವರ ಪ್ರತಿಪಾದನೆಯನ್ನು ಬಹುಕಾಲ ನಮ್ಮ ವಿದ್ವಾಂಸರು ಒಪ್ಪಿರಲಿಲ್ಲ. ಸಿಂಧೂ ಲಿಪಿಯನ್ನು ಸಂಸ್ಕೃತದೊಂದಿಗೆ ಸಮೀಕರಿಸಿದ್ದ ರಾವ್ ಅವರ ಕ್ರಮವನ್ನು ನಮ್ಮ ದೇಶದ ವಿದ್ವಾಂಸರು ನಿರಾಕರಿಸಿದರು. ಆದರೆ ರಾವ್ ಅವರ ವಾದಸರಣಿಯನ್ನು ಒಪ್ಪಿ ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾನಿಲಯದ ಪ್ರೊ.ಡಬ್ಲ್ಯೂ.ಡಬ್ಲ್ಯೂ.ಗ್ರಮಂಡ್ ಅವರು ಕೆಲ ಲೇಖನಗಳನ್ನು ಬರೆದ ಮೇಲೆ ಸ್ವದೇಶದಲ್ಲಿ ರಾವ್​ ಅವರ ಗ್ರಹಿಕೆ ಮತ್ತು ಸಂಶೋಧನೆಗಳ ಬಗ್ಗೆ ಹಲವರು ಗಮನ ಹರಿಸಿದರು.

(Explainer on Shikaripura Ranganatha Rao SR Rao his achievements in Archaeology History and Indology)

ಇದನ್ನೂ ಓದಿ: 5 ಪುರಾತತ್ವ ಸ್ಥಳಗಳ ಅಭಿವೃದ್ಧಿ, ಮ್ಯೂಸಿಯಂ ಸ್ಥಾಪನೆ: ವಿತ್ತ ಸಚಿವೆ ನಿರ್ಮಲಾ

ಇದನ್ನೂ ಓದಿ: ಹಿರೇಬೆಣಕಲ್ ಮೋರೇರ್ ತಟ್ಟಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ: ಶಿಲಾಯುಗ ಕಾಲದ ಪ್ರಯೋಗ ಶಾಲೆ ಎಂದೇ ಇದು ಪ್ರಸಿದ್ಧ

Published On - 6:01 pm, Thu, 1 July 21

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್