ಚಂದ ಮಾಮನ ಮೇಲೆ ಲ್ಯಾಂಡಿಂಗ್​ ಆಗಲು ಏಳೇ ದಿನ ಬಾಕಿ..!

ಚಂದ ಮಾಮನ ಮೇಲೆ ಲ್ಯಾಂಡಿಂಗ್​ ಆಗಲು ಏಳೇ ದಿನ ಬಾಕಿ..!

ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರಿ ಪ್ರಮಾಣದಲ್ಲಿ ಹೆಪ್ಪುಗಟ್ಟಿರುವ ನೀರು ಮತ್ತು ಖನಿಜಗಳನ್ನು ಪತ್ತೆ ಹಚ್ಚಿ ವಿಸ್ತೃತ ಅಧ್ಯಯನ ಮಾಡುವುದು ಚಂದ್ರಯಾನ-2 ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಜುಲೈ 22ರಂದು ಆಂಧ್ರದ ಶ್ರೀಹರಿಕೋಟಾ ಸತೀಶ್​ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಜಿಗಿದಿದ್ದ ಚಂದ್ರಯಾನ-2 ಸೆ.​ 7ರ ಶನಿವಾರದಂದು ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಚಂದ್ರನ ಮೇಲೆ ಇಳಿಯುವ ದೃಶ್ಯದ ನೇರ ಪ್ರಸಾರಕ್ಕೆ ಇಸ್ರೋ ವ್ಯವಸ್ಥೆ ಮಾಡಿದೆ. ಈಗಾಗಲೇ ಇಸ್ರೋ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿದ್ದು, ಅದರಲ್ಲಿ ವಿಜೇತರಾದವರು ಪ್ರಧಾನಿ ಮೋದಿ ಜೊತೆ ಕುಳಿತು ಐತಿಹಾಸಿಕ ಚಂದ್ರಯಾನ-2 ಲ್ಯಾಂಡಿಂಗ್​ ದೃಶ್ಯಾಗಳಿಗಳನ್ನ ನೇರವಾಗಿ ವೀಕ್ಷಿಸಬಹುದಾಗಿದೆ.

4ನೇ ಕಕ್ಷೆಯ ಬದಲಾವಣೆ ಪ್ರಕ್ರಿಯೆ ಯಶಸ್ವಿ
ಚಂದ್ರಯಾನ-2 ಗಗನನೌಕೆಯ ಚಂದ್ರನ 4ನೇ ಕಕ್ಷೆಯ ಬದಲಾವಣೆ ಪ್ರಕ್ರಿಯೆ ಶುಕ್ರವಾರ ಯಶಸ್ವಿಯಾಗಿ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಶುಕ್ರವಾರ ಸಂಜೆ 6ಗಂಟೆ 16 ನಿಮಿಷಕ್ಕೆ ನೌಕೆಯಲ್ಲಿರುವ ಇಂಜಿನ್​ನನ್ನು 1155 ಸೆಕೆಂಡ್​ಗಳ ಕಾಲ ದಹಿಸುವ ಮೂಲಕ ಚಂದ್ರನ ತೃತೀಯ ಕಕ್ಷೆಯಿಂದ 124 x 164  ಕಿಲೋ ಮೀಟರ್ ಅಂತರದ ನಾಲ್ಕನೇ ಕಕ್ಷೆಗೆ ಯಶಸ್ವಿಯಾಗಿ ತಲುಪಿಸಲಾಗಿದೆ. ಚಂದ್ರಯಾನ-2ರ ಎಲ್ಲಾ ಯಂತ್ರಗಳು ಸಹಸ ಸ್ಥಿತಿಯಲ್ಲಿದ್ದು, 5ನೇ ಹಾಗು ಕೊನೆಯ ಕಕ್ಷೆ ಬದಲಾವಣೆ ಪ್ರಕ್ರಿಯೆ ಸೆಪ್ಟೆಂಬರ್ 1ರಂದು ಸಂಜೆ 6ಗಂಟೆಯಿಂದ 7ಗಂಟೆ ವೇಳೆ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.

 

Read Full Article

Click on your DTH Provider to Add TV9 Kannada