ಮನೆಯಲ್ಲೇ ಮಾಡಿಕೊಳ್ಳಬಹುದಾದ ಕೊಕ್ಕೋ ಹುರಿ ಬೀಜ

ತುಂಬ ಪ್ರಯೋಗ ನಡೆಸಿ ಹಿಡಿತ ಕೈಗೂಡಿಸಿದ್ದಾರೆ. ಹುರಿ ಕೊಕ್ಕೊ ಬೀಜ ತಯಾರಿಸಿ ಹತ್ತಾರು ಖಾದ್ಯ ಮಾಡಿ ನೋಡಿದ್ದಾರೆ. ‘ಹುರಿ ಬೀಜ'ದ ಸಿಪ್ಪೆ ತೆಗೆದು ಪುಡಿ ಮಾಡಿದರೆ ‘ಕೊಕ್ಕೋ ಪೌಡರ್’ ಸಿದ್ಧ.

ಮನೆಯಲ್ಲೇ ಮಾಡಿಕೊಳ್ಳಬಹುದಾದ ಕೊಕ್ಕೋ ಹುರಿ ಬೀಜ
ಕೊಕ್ಕೋ ಹುರಿ ಬೀಜ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 09, 2022 | 9:00 AM

ಕೊರೊನಾ ಕಾಲಘಟ್ಟದಲ್ಲಿ ಕೊಕ್ಕೊ ಬೀನ್ಸ್ ಮಾರಾಟಕ್ಕೆ ಒಯ್ಯಲು ತೊಂದರೆಯಾಗಿತ್ತು. ಫರ್ಮೆಂಟ್ ಮಾಡಿ ಮಾರೋಣ ಎಂದರೆ ಬೆಲೆ ಉತ್ತೇಜಕವಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪುಣಚದ ‘ಗ್ರಾಂಡ್ ಪಾ ಫಾರಂ’ನ ನವೀನಕೃಷ್ಣ ಶಾಸ್ತ್ರಿಯವರು ಚಿಂತೆಗೆ ಒಳಗಾದಾಗ ಯೋಚನೆಯೊಂದು ಹೊಳೆಯಿತು. ಕೊಕ್ಕೋ ಬೀಜವನ್ನು ಹುರಿದರೆ? ಅದಕ್ಕೆ ಗ್ರಾಹಕ ಸ್ವೀಕೃತಿ ಸಿಗಬಹುದೇ? ಯೋಜನೆ ಕಾರ್ಯರೂಪಕ್ಕೆ ಬಂತು. ‘ಹುರಿದ ಕೊಕ್ಕೊ ಬೀಜ’  ರೆಡಿಯಾಯಿತು. ಕೊಕ್ಕೊ ಬೀಜ ಫರ್ಮೆಂಟ್ ಮಾಡುವುದು, ಹುರಿಯುವುದು ಹೆಚ್ಚು ಅನುಭವ ಬೇಡುವ ಕ್ರಿಯೆಗಳು. ಇವರು ತುಂಬ ಪ್ರಯೋಗ ನಡೆಸಿ ಹಿಡಿತ ಕೈಗೂಡಿಸಿದ್ದಾರೆ. ಹುರಿ ಕೊಕ್ಕೊ ಬೀಜ ತಯಾರಿಸಿ ಹತ್ತಾರು ಖಾದ್ಯ ಮಾಡಿ ನೋಡಿದ್ದಾರೆ. ‘ಹುರಿ ಬೀಜ’ದ ಸಿಪ್ಪೆ ತೆಗೆದು ಪುಡಿ ಮಾಡಿದರೆ ‘ಕೊಕ್ಕೋ ಪೌಡರ್’ ಸಿದ್ಧ. “ಒಂದೇ ಸಮನೆ ರುಬ್ಬುತ್ತಿದ್ದರೆ ಜಾರ್ ಬಿಸಿ ಆಗಿ ಹುಡಿ ಕರಗುತ್ತದೆ. ಬಿಟ್ಟು ಬಿಟ್ಟು ರುಬ್ಬಿ. ಎರಡು ಚಮಚ ಸಕ್ಕರೆ ಸೇರಿಸಿದರೆ ಹುಡಿ ನೈಸ್ ಆಗುತ್ತದೆ.” ಇದು ಕೊಕ್ಕೋ ಪೌಡರ್. “ಮಾರುಕಟ್ಟೆಯಲ್ಲಿ ಸಿಗುವ ಪೌಡರಿನಲ್ಲಿ ಬೆಣ್ಣೆಯ ಅಂಶ ಕಡಿಮೆ. ಹೆಚ್ಚಿನ ಬೆಣ್ಣೆಯನ್ನು ಪ್ರತ್ಯೇಕಿಸಿಯೇ ಮಾರುಕಟ್ಟೆಗೆ ಕಳಿಸುತ್ತಾರೆ. ನಮ್ಮ ಹುಡಿಯಲ್ಲಿ ಬೆಣ್ಣೆಯ ಅಂಶ ಜಾಸ್ತಿ. ರುಚಿ ಮತ್ತು ಸ್ವಾದವೂ ಪ್ರತ್ಯೇಕ” ಎನ್ನುತ್ತಾರೆ.

ಕೊಕ್ಕೋ ಮಿಲ್ಕ್ಶೇಕ್

ಕೊಕ್ಕೋ ಮಿಲ್ಕ್ಶೇಕ್ ಕುಡಿಯಲು ಕ್ರೀಂ ಪಾರ್ಲರಿಗೆ ಹೋಗಬೇಕಾಗಿಲ್ಲ. “ಐದು ಹುರಿದ ಕೊಕ್ಕೋ ಬೀಜಕ್ಕೆ ಮೂರು ಚಮಚ ಸಕ್ಕರೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಅದಕ್ಕೆ ತಂಪಾದ ಒಂದು ಗ್ಲಾಸ್ ಹಾಲು, ಅಗತ್ಯವಿದ್ದರೆ ಸ್ವಲ್ಪ ವೆನಿಲ್ಲಾ ಐಸ್‌ಕ್ರೀಂ ಸೇರಿಸಿ ಪುನಃ ಮಿಕ್ಸ್ ಮಾಡಿ.” ಶಾಸ್ತ್ರಿಯವರು ಡಾರ್ಕ್ ಚಾಕೊಲೇಟನ್ನೂ ತಯಾರಿಸಿದ್ದಾರೆ. “ಮೂವತ್ತು ಹುರಿದ ಕೊಕ್ಕೋ ಬೀಜವನ್ನು ಹುಡಿ ಮಾಡಿ. ಸ್ವಲ್ಪ ಹೊತ್ತಲ್ಲಿ ಬೀಜದ ಬೆಣ್ಣೆಯ ಅಂಶ ಕರಗಿ ಹುಡಿ ಪೇಸ್ಟ್ ರೂಪ ತಾಳುತ್ತದೆ. ಆಗ 5-7 ಚಮಚ ಸಕ್ಕರೆ ಹುಡಿ ಸೇರಿಸಿ. ಪುನಃ ರುಬ್ಬಿ. ನಯವಾದ ಮಿಶ್ರಣವನ್ನು ತಟ್ಟೆ / ಅಚ್ಚಿನಲ್ಲಿ ಸುರಿಯಿರಿ. ಅರ್ಧ ತಾಸಲ್ಲೇ ಚಾಕೊಲೇಟ್ ಸಿದ್ಧ.”

ಕೊಕ್ಕೊ ಪೇಯ

“ಅರ್ಧ ಕಪ್ ಹುರಿದ ಬಾಂಬೆ ರವೆಯನ್ನು ನಾಲ್ಕು ಕಪ್ ಹಾಲಿನಲ್ಲಿ ಬೇಯಿಸಿ. ನಂತರ ಒಂದು ಕಪ್ ಸಕ್ಕರೆ, ಒಂದು ಚಮಚ ಕೊಕ್ಕೋ ಪೌಡರ್ ಮಿಶ್ರ ಮಾಡಿ ಕುದಿಸಿ. ಕೊನೆಗೆ ಒಣ ಹಣ್ಣು ಸೇರಿಸಿದರೆ ವಿಶಿಷ್ಟ ಕೊಕ್ಕೊ ಪೇಯ ಆಗುತ್ತದೆ.”ಈಚೆಗೆ ಇವರು ಬಾಕಾಹು(ಬಾಳೆ ಕಾಯಿ ಹುಡಿ)ವಿಗೆ ಕೊಕ್ಕೊ ಹುಡಿ ಸೇರಿಸಿ ಬರ್ಫಿ ಮಾಡಿದ್ದರು. ಮನೆಮಂದಿ ಖುಷಿ ಪಟ್ಟರು. “ಇನ್ನು ನಮ್ಮಲ್ಲಿ ಎಲ್ಲಾ ಸಿಹಿತಿಂಡಿಗಳಲ್ಲೂ ಕೊಕ್ಕೋ ಇದ್ದೇ ಇರುತ್ತದೆ,” ಎನ್ನುತ್ತಾರೆ ನವೀನರ ಪತ್ನಿ ಪ್ರಶಾಂತಿ.

ಕೊಕ್ಕೊ ಹೋಳಿಗೆ

ಕೊಕ್ಕೊ ಹೋಳಿಗೆಯನ್ನೂ ಮಾಡಿದ್ದಾರೆ. “ನೂರು ಗ್ರಾಂ ಬೀಜವನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಹತ್ತು ನಿಮಿಷ ನೀರಿನಲ್ಲಿ ನೆನೆಸಿದ ಗೇರು ಬೀಜ, ಸಕ್ಕರೆ ಮತ್ತು ಕ್ರೀಮ್ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಬಾಣಲೆಯಲ್ಲಿ ಅರ್ಧ ಗಂಟೆ ಕೈಬಿಡದೆ ಕಾಯಿಸಿ. ಮಿಶ್ರಣ ತಳ ಬಿಡತೊಡಗಿದಾಗ ಇಳಿಸಿ. ಇದುವೇ ಹೋಳಿಗೆಗೆ ಹೂರಣ. ಮುಂದಿನ ಕ್ರಮ ಮಾಮೂಲಿ ಹೋಳಿಗೆಯಂತೆಯೇ.” ‘ಗ್ರಾಂಡ್ ಪಾ ಫಾರಂ’ ಕೊಕ್ಕೊ ಹುರಿ ಬೀಜವನ್ನು ತಯಾರಿಸುತ್ತಿದೆ. ಮಾರುಕಟ್ಟೆ ಮಾಡುವುದು ಬಿ.ಸಿ.ರೋಡಿನ ಹಲಸಿನಂಗಡಿಯ ಮೌನೀಶ್ ಮಲ್ಯ. ನೂರು ಗ್ರಾಮಿನ ಪ್ಯಾಕೆಟಿಗೆ ರೂ. 55. ಕೊರಿಯರ್ ಮೂಲಕವೂ ಕಳುಹಿಸುವ ವ್ಯವಸ್ಥೆಯಿದೆ. ಪ್ರತಿಕ್ರಿಯೆ ಚೆನ್ನಾಗಿದೆಯಂತೆ.  (ನವೀನಕೃಷ್ಣ ಶಾಸ್ತ್ರಿ  –94486 24427)

ನಾ. ಕಾರಂತ ಪೆರಾಜೆ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು