ಕೊರೊನಾ ಕಾಲದಲ್ಲಿ ಹಣ್ಣು-ತರಕಾರಿ ತೊಳೆದು ತಿನ್ನೋದು ಬಹು ಮುಖ್ಯ! ಹೇಗೆ?

ಕೊರೊನಾ ಕಾಲದಲ್ಲಿ ಹಣ್ಣು ತರಕಾರಿ ತಿನ್ನೋದು ಎಷ್ಟು ಮುಖ್ಯನೋ ಅದನ್ನು ತೊಳೆದು ತಿನ್ನುವುದು ಕೂಡಾ ಅಷ್ಟೇ ಮುಖ್ಯ. ಆದ್ರೆ, ಈಗಿನ ಕಾಲದಲ್ಲಿ ಮಾರುಕಟ್ಟೆಯಿಂದ ತಂದ ಹಣ್ಣು- ತರಕಾರಿಯನ್ನು ಚೆನ್ನಾಗಿ ತೊಳೆದು ತಿನ್ನಬೇಕು. ವೈರಸ್ ಎಲ್ಲಿಂದ ಬರಬಹುದು ಅಂತ ನಾವು ಯೋಚಿಸೋಕೂ ಟೈಂ ಇಲ್ಲ. ಇದಲ್ಲದೆಯೂ ನಾವು ಹಣ್ಣು ತರಕಾರಿ ಬಳಸುವಾಗ ತೊಳೆಯೋದು ಬಹಳ ಮುಖ್ಯವಾಗುತ್ತೆ. ಯಾಕೆಂದರೆ ರೈತರು ತಮ್ಮ ಬೆಳೆ ಬೆಳೆಯುವಾಗ ಅವುಗಳ ರಕ್ಷಣೆಗಾಗಿ ರಾಸಾಯನಿಕ ಔಷಧಿಗಳನ್ನು ಸಿಂಪಡಿಸುತ್ತಾರೆ. ಇದರಿಂದ ಹಣ್ಣು ಮತ್ತು ತರಕಾರಿಗಳ ಮೇಲ್ಪದರದಲ್ಲಿ ವಿಷ […]

ಕೊರೊನಾ ಕಾಲದಲ್ಲಿ ಹಣ್ಣು-ತರಕಾರಿ ತೊಳೆದು ತಿನ್ನೋದು ಬಹು ಮುಖ್ಯ! ಹೇಗೆ?
ಹಣ್ಣು ಮತ್ತು ತರಕಾರಿಗಳು (ಸಾಂದರ್ಭಿಕ ಚಿತ್ರ)
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Nov 23, 2020 | 11:55 AM

ಕೊರೊನಾ ಕಾಲದಲ್ಲಿ ಹಣ್ಣು ತರಕಾರಿ ತಿನ್ನೋದು ಎಷ್ಟು ಮುಖ್ಯನೋ ಅದನ್ನು ತೊಳೆದು ತಿನ್ನುವುದು ಕೂಡಾ ಅಷ್ಟೇ ಮುಖ್ಯ. ಆದ್ರೆ, ಈಗಿನ ಕಾಲದಲ್ಲಿ ಮಾರುಕಟ್ಟೆಯಿಂದ ತಂದ ಹಣ್ಣು- ತರಕಾರಿಯನ್ನು ಚೆನ್ನಾಗಿ ತೊಳೆದು ತಿನ್ನಬೇಕು. ವೈರಸ್ ಎಲ್ಲಿಂದ ಬರಬಹುದು ಅಂತ ನಾವು ಯೋಚಿಸೋಕೂ ಟೈಂ ಇಲ್ಲ. ಇದಲ್ಲದೆಯೂ ನಾವು ಹಣ್ಣು ತರಕಾರಿ ಬಳಸುವಾಗ ತೊಳೆಯೋದು ಬಹಳ ಮುಖ್ಯವಾಗುತ್ತೆ.

ಯಾಕೆಂದರೆ ರೈತರು ತಮ್ಮ ಬೆಳೆ ಬೆಳೆಯುವಾಗ ಅವುಗಳ ರಕ್ಷಣೆಗಾಗಿ ರಾಸಾಯನಿಕ ಔಷಧಿಗಳನ್ನು ಸಿಂಪಡಿಸುತ್ತಾರೆ. ಇದರಿಂದ ಹಣ್ಣು ಮತ್ತು ತರಕಾರಿಗಳ ಮೇಲ್ಪದರದಲ್ಲಿ ವಿಷ ಅಂಟಿಕೊಳ್ಳುತ್ತೆ. ಇದು ಕ್ಯಾನ್ಸರ್​​​ನಂಥ ರೋಗಗಳಿಗೆ ಕಾರಣವಾಗಬಹುದು. ಅದಕ್ಕಾಗಿ ಹಣ್ಣು ತರಕಾರಿ ತೊಳೆಯ ಬೇಕು ಅಂತಾರೆ ತಜ್ಞರು. ಕೆಲವೊಮ್ಮೆ ಹಣ್ಣನ್ನು ಹಣ್ಣಾಗಿಸಲು ಕೆಮಿಕಲ್ ಬಳಸ್ತಾರೆ ಈ ಕಾರಣಕ್ಕೂ ಅದನ್ನು ತೊಳೆಯಬೇಕು.

ನೀರಿನಿಂದ ತೊಳೆದ್ರೆ ಸರಿ ಹೋಗಲ್ಲ. ಅದಕ್ಕೆ ಬೇರೆ ಕ್ರಮವೇ ಇದೆ. ನೀವಿದನ್ನು ವಿನೇಗರ್​​ನಿಂದ ತೊಳೆಯಬಹುದು. ಹಣ್ಣು ಮತ್ತು ತರಕಾರಿಗಳಲ್ಲಿರುವ ಕ್ರಿಮಿನಾಶಕಗಳನ್ನು ಕೊಲ್ಲುವ ಗುಣವನ್ನು ವಿನೇಗರ್ ಹೊಂದಿದೆ. ನೀರು ವಿನೇಗರ್ ಮಿಶ್ರಿತ ದ್ರಾವಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬಿಡಿ ನಂತರ ಚೆನ್ನಾಗಿ ಪುನಃ ನೀರಿನಲ್ಲಿ ತೊಳೆದುಕೊಂಡು ಬಳಸಿ. ಬೇಕಿಂಗ್ ಸೋಡಾ ಬಳಸಿಯೂ ಹಣ್ಣು ತರಕಾರಿ ಕ್ಲೀನ್ ಮಾಡಬಹುದು. ಒಂದು ಲೀಟರ್ ನೀರಿಗೆ ನಾಲ್ಕು ಚಮಚ ಬೇಕಿಂಗ್ ಸೋಡಾ ಸೇರಿಸಿ. ಅದರಲ್ಲಿ ಹಣ್ಣು ತರಕಾರಿಗಳನ್ನು 15 ನಿಮಿಷ ಅದ್ದಿಡಿ. ಆ ಬಳಿಕ ಸ್ವಚ್ಛ ನೀರಿನಿಂದ ತೊಳೆದು ಹಣ್ಣು ತರಕಾರಿ ಬಳಸಿ.

ಅರಿಶಿನ ಹಾಕಿದ ನೀರು ಕ್ರಿಮಿಗಳ ನಾಶಕ್ಕೆ ಸಹಕಾರಿಯಾಗಿದೆ. ಕುದಿಯುತ್ತಿರುವ ನೀರಿಗೆ 5 ಚಮಚದಷ್ಟು ಅರಿಶಿನ ಹುಡಿಯನ್ನು ಹಾಕಿ. ಅದನ್ನು ತಣ್ಣಗಾಗಿಸಿ. ಈ ನೀರಿಗೆ ಹಣ್ಣು ಮತ್ತು ತರಕಾರಿಯನ್ನು ಹಾಕಿ. ಸ್ವಲ್ಪ ಹೊತ್ತು ಕಳೆದ ನಂತರ ಇವುಗಳನ್ನು ತೊಳೆದುಕೊಂಡು ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ.

ಇದನ್ನು ಹೊರತುಪಡಿಸಿದ್ರೆ ಕಲ್ಲುಪ್ಪು ಕೂಡಾ ಕ್ರಿಮಿ ನಿವಾರಣೆಗೆ ಹೆಚ್ಚು ಸಹಕಾರಿಯಾಗಿದೆ. ಶುದ್ಧವಾದ ನೀರಿಗೆ ಒಂದು ಕಪ್ ಉಪ್ಪನ್ನು ಹಾಕಿ ನಂತರ ಈ ದ್ರಾವಣಕ್ಕೆ ಹಣ್ಣು ಮತ್ತು ತರಕಾರಿಗಳನ್ನು ಹಾಕಿ. ಇದನ್ನು 10 ನಿಮಿಷಗಳ ಕಾಲ ಮುಳುಗಿಸಿಡಿ. ನಂತರ ಇವುಗಳನ್ನು ಉಪ್ಪು ನೀರಿನಿಂದ ತೆಗೆದು ಸ್ವಚ್ಛ ನೀರಿಗೆ ಹಾಕಿ. ಹೀಗೆ ತರಕಾರಿ ತೊಳೆಯಿರಿ.

ಆದ್ರೆ, ಕೊರೊನಾ ಕಾಲಕ್ಕೆ ಇದಕ್ಕೆ ಇನ್ನು ಒಂಚೂರು ಹೆಚ್ಚಿನ ಎಚ್ಚರಿಕೆ ಅಗತ್ಯ. ಈಗ ನೀವು ತಂದ ಹಣ್ಣು ತರಕಾರಿಗಳನ್ನು ಒಂದೆಡೆ ಕನಿಷ್ಠ ಒಂದು ದಿನ ಇಟ್ಟ ಬಳಿಕವೇ ಬಳಸಿ. ಬಳಸುವಾಗ ಮರೆಯದೇ ಯಾವುದಾದರೂ ಒಂದು ವಿಧಾನದಿಂದ ತೊಳೆದು ಸ್ವಚ್ಚಗೊಳಿಸಿ. ಯಾಕಂದ್ರೆ ಆರೋಗ್ಯವೇ ಭಾಗ್ಯ ನೆನಪಿರಲಿ -ರಾಜೇಶ್​ ಶೆಟ್ಟಿ

Published On - 2:45 pm, Wed, 17 June 20

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ