ಕೊರೊನಾಗೆ ಔಷಧ ಇನ್ನೂ ದೂರದ ಮಾತು, ಆದ್ರೆ ವಿದ್ಯಾರ್ಥಿಯೊಬ್ಬ ಇದನ್ನು ಕಂಡುಹಿಡಿದುಬಿಟ್ಟ!
ಮಹಾಮಾರಿ ಕೊರೊನಾ ಸೋಂಕಿಗೆ ಔಷಧ ಕಂಡುಹಿಡಿಯುವುದು ಇನ್ನೂ ದೂರದ ಮಾತು. ಅದಕ್ಕೂ ಮುನ್ನ ಆ ಮಹಾಮಾರಿಯಾರಿಗೆಲ್ಲ ತಗುಲಿದೆ ಎಂಬುದನ್ನು ಪತ್ತೆ ಹಚ್ಚುವುದೇ ಇಂದಿನ ಜರೂರುತ್ತು ಆಗಿದೆ. ಆದ್ರೆ ಅದೂ ಸಾಧ್ಯವಾಗಿತ್ತಿಲ್ಲ. ಸಮುದಾಯದತ್ತ ಮಹಾಮಾರಿ ಕೊರೊನಾ ಹೆಜ್ಜೆ ಹಾಕುತ್ತಿರುವಾಗ ಮಾಸ್ ಟೆಸ್ಟ್ ತುಂಬಾ ಮುಖ್ಯವಾಗಿದೆ. ಅನೇಕ ರಾಜ್ಯ ಸರ್ಕಾರಗಳೂ ರ್ಯಾಪಿಡ್ ಟೆಸ್ಟ್ ಕೈಬಿಟ್ಟಿವೆ. ಪರಿಸ್ಥಿತಿ ಹೀಗಿರುವಾಗ ವಿದ್ಯಾರ್ಥಿಯೊಬ್ಬ ಈ ನಿಟ್ಟಿನಲ್ಲಿ ಮಹತ್ತರವಾದುದನ್ನು ಸಾಧಿಸಿಯೇ ಬಿಟ್ಟಿದ್ದಾನೆ. ಏನಿಲ್ಲ, ಸಿಂಪಲ್ಲಾಗಿ ಕಂಪ್ಯೂಟರ್ ಮೂಲಕ ಸಾಮೂಹಿಕವಾಗಿ ಜನರನ್ನು ಸರದಿಯಲ್ಲಿ ನಿಲ್ಸಿ, ನಿಖರವಾಗಿ/ತ್ವರಿತವಾಗಿ ಕೊರೊನಾ […]
ಮಹಾಮಾರಿ ಕೊರೊನಾ ಸೋಂಕಿಗೆ ಔಷಧ ಕಂಡುಹಿಡಿಯುವುದು ಇನ್ನೂ ದೂರದ ಮಾತು. ಅದಕ್ಕೂ ಮುನ್ನ ಆ ಮಹಾಮಾರಿಯಾರಿಗೆಲ್ಲ ತಗುಲಿದೆ ಎಂಬುದನ್ನು ಪತ್ತೆ ಹಚ್ಚುವುದೇ ಇಂದಿನ ಜರೂರುತ್ತು ಆಗಿದೆ. ಆದ್ರೆ ಅದೂ ಸಾಧ್ಯವಾಗಿತ್ತಿಲ್ಲ. ಸಮುದಾಯದತ್ತ ಮಹಾಮಾರಿ ಕೊರೊನಾ ಹೆಜ್ಜೆ ಹಾಕುತ್ತಿರುವಾಗ ಮಾಸ್ ಟೆಸ್ಟ್ ತುಂಬಾ ಮುಖ್ಯವಾಗಿದೆ. ಅನೇಕ ರಾಜ್ಯ ಸರ್ಕಾರಗಳೂ ರ್ಯಾಪಿಡ್ ಟೆಸ್ಟ್ ಕೈಬಿಟ್ಟಿವೆ.
ಪರಿಸ್ಥಿತಿ ಹೀಗಿರುವಾಗ ವಿದ್ಯಾರ್ಥಿಯೊಬ್ಬ ಈ ನಿಟ್ಟಿನಲ್ಲಿ ಮಹತ್ತರವಾದುದನ್ನು ಸಾಧಿಸಿಯೇ ಬಿಟ್ಟಿದ್ದಾನೆ. ಏನಿಲ್ಲ, ಸಿಂಪಲ್ಲಾಗಿ ಕಂಪ್ಯೂಟರ್ ಮೂಲಕ ಸಾಮೂಹಿಕವಾಗಿ ಜನರನ್ನು ಸರದಿಯಲ್ಲಿ ನಿಲ್ಸಿ, ನಿಖರವಾಗಿ/ತ್ವರಿತವಾಗಿ ಕೊರೊನಾ ಸೋಂಕಿನ ಮೂಲ ಲಕ್ಷಣವಾದ ಜ್ವರ ಇದೆಯಾ, ಇಲ್ವಾ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ.
ಕೊಚ್ಚಿಯ ಮ್ಯಾಥ್ಯೂ ಡಿ. ಎಂಬ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಯು ಮನುಷ್ಯನಲ್ಲಿರುವ ಉಷ್ಣಾಂಶವನ್ನು ಸ್ವಯಂಚಾಲಿತ ಸ್ಕ್ಯಾನರ್ ಮೂಲಕ ಅಳೆಯುವಂತಹ ಸಾಧನ ಕಂಡುಹಿಡಿದಿದ್ದಾನೆ. ಜೊತೆಗೆ ಆಯಾ ವ್ಯಕ್ತಿಯ ಫೋಟೋಗಳನ್ನೂ ಸಹ ಈ ಕಂಪ್ಯೂಟರ್ ದಾಖಲಿಸುತ್ತದೆ. ವಿಮಾನ, ಬಸ್, ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಈ ಸಾಧನವನ್ನು ಅಭಿವೃದ್ಧಿಪಡಿಸಲು ನನಗೆ ಮೂರು ವಾರ ಹಿಡಿಸಿತು ಎಂದು ಈ ವಿದ್ಯಾರ್ಥಿ ತಿಳಿಸಿದ್ದಾನೆ.