AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Media Course : ನಿಮ್ಮ ಧ್ವನಿಯನ್ನು ನೀವೇ ಜಗತ್ತಿಗೆ ತಲುಪಿಸಲು ಇಲ್ಲಿದೆ ಅವಕಾಶ!

Call For Application : ಈ ವರ್ಷದ ಸಮೂಹ ಮಾಧ್ಯಮ ಕೋರ್ಸ್​ನಲ್ಲಿ ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮತ್ತು ಸಿನಿಮಾ ಮಾಧ್ಯಮದ ಕುರಿತು ತರಬೇತಿಯನ್ನು ನೀಡಲಾಗುತ್ತಿದೆ. ಕೋರ್ಸ್​ನಲ್ಲಿ ಆಯ್ಕೆಯಾಗುವ ಯುವಜನರಿಗೆ ಊಟ, ವಸತಿ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಹಿಂದುಳಿದ ಪ್ರದೇಶ ಹಾಗೂ ಸಮುದಾಯಗಳ ಹಿನ್ನಲೆಯವರಿಗೆ ವಿದ್ಯಾರ್ಥಿವೇತನವನ್ನೂ ನೀಡಲಾಗುತ್ತಿದೆ.

Media Course : ನಿಮ್ಮ ಧ್ವನಿಯನ್ನು ನೀವೇ ಜಗತ್ತಿಗೆ ತಲುಪಿಸಲು ಇಲ್ಲಿದೆ ಅವಕಾಶ!
ಬದುಕು ಎ ಸೆಂಟರ್ ಫಾರ್ ಲೈವಲಿಹುಡ್ ಲರ್ನಿಂಗ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ
TV9 Web
| Updated By: ಶ್ರೀದೇವಿ ಕಳಸದ|

Updated on:Oct 03, 2021 | 2:43 PM

Share

BADUKU – A Centre For Livelihood Learning : ಬದುಕು ಸೆಂಟರ್ ಫಾರ್ ಲೈವಲಿಹುಡ್ ಲರ್ನಿಂಗ್​ ಈ ಸಂಸ್ಥೆಯಲ್ಲಿ ಕಲಿತ ಸಾಕಷ್ಟು ಯುವಜನರು ಈಗಾಗಲೇ ಕರ್ನಾಟಕದ ಎಲ್ಲಾ ಪ್ರಮುಖ ಮಾಧ್ಯಮಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಹಲವರು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವರ್ಷದ ಸಮೂಹ ಒಂದು ವರ್ಷದ ಸಮೂಹ ಮಾಧ್ಯಮ ಡಿಪ್ಲೊಮೊ ಕೋರ್ಸ್​ನಲ್ಲಿ ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮತ್ತು ಸಿನಿಮಾ ಮಾಧ್ಯಮದ ಕುರಿತು ತರಬೇತಿಯನ್ನು ನೀಡಲಾಗುತ್ತಿದೆ. ಕೋರ್ಸ್​ನಲ್ಲಿ ಆಯ್ಕೆಯಾಗುವ ಯುವಜನರಿಗೆ ಊಟ, ವಸತಿ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಹಿಂದುಳಿದ ಪ್ರದೇಶ ಹಾಗೂ ಸಮುದಾಯಗಳ ಹಿನ್ನಲೆಯವರಿಗೆ ವಿದ್ಯಾರ್ಥಿವೇತನವನ್ನೂ ನೀಡಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆಯು ಪ್ರವೇಶ ಪರೀಕ್ಷೆ ಮೂಲಕ ನಡೆಯುವುದು. ಸದ್ಯ ಈ ಕಾಲೇಜು ಜಯನಗರದಲ್ಲಿದೆ. ಸುಮಾರು ಎರಡು ತಿಂಗಳುಗಳ ನಂತರ ಕನಕಪುರ ರಸ್ತೆಯ ತಾತಗುಣಿ ಬಳಿ ನಿರ್ಮಾಣಗೊಳ್ಳುತ್ತಿರುವ ಹೊಸ ಕ್ಯಾಂಪಸ್ಸಿಗೆ ವರ್ಗಾವಣೆಯಾಗಲಿದೆ.  

ಕರ್ನಾಟಕದ ಅವಕಾಶ ವಂಚಿತ ಯುವಜನರು ಮಾಧ್ಯಮದಲ್ಲಿ ಅವರ ಧ್ವನಿಗಳನ್ನು ಅವರೇ ಜಗತ್ತಿಗೆ ತಲುಪಿಸುವ ಮೂಲಕ ತಾವು ವಾಸಿಸುತ್ತಿರುವ ಸ್ಥಳ ಹಾಗೂ ಸಮುದಾಯದ ಅಭಿವೃದ್ಧಿಗೆ ಕಾರಣವಾಗಲಿ ಎಂಬ ಉದ್ದೇಶದಿಂದ ಬದುಕು ಸೆಂಟರ್ ಫಾರ್ ಲೈವಲಿಹುಡ್ ಲರ್ನಿಂಗ್ ಸಂಸ್ಥೆಯು ಸಮೂಹ ಮಾಧ್ಯಮ ಡಿಪ್ಲೊಮೊ ಕೋರ್ಸ್ ಪ್ರಾರಂಭಿಸಿದ್ದು, ಈ ವರ್ಷದಿಂದ ಉಚಿತ ವಸತಿ ಸೌಲಭ್ಯವನ್ನೂ ಕಲ್ಪಿಸಿದೆ. ಅದಕ್ಕಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈಗಾಗಲೇ ಈ ಸಂಸ್ಥೆಯಲ್ಲಿ ಕಲಿತ ಸಾಕಷ್ಟು ಯುವಜನರು ಕರ್ನಾಟಕದ ಎಲ್ಲಾ ಪ್ರಮುಖ ಮಾಧ್ಯಮಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಹಲವರು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಹಳೆಯ ವಿದ್ಯಾರ್ಥಿ ಸೋಮಶೇಖರ ಹರಿಜನ ಮೂಲತಃ ಬೆಳಗಾವಿ ಜಿಲ್ಲೆಯವರು. ‘ನಾನು ದಲಿತ ಸಮುದಾಯದಲ್ಲಿ ಹುಟ್ಟಿದವ. ಸಮಾಜ ಕ್ಷೇತ್ರದಲ್ಲಿ ಪದವಿ ಮುಗಿಸಿದ್ದೇನೆ. ದಲಿತ ಮತ್ತು ಬುಡಕಟ್ಟು ಸಮುದಾಯಗಳ ಜೊತೆಗೆ ಕೆಲಸ ಮಾಡಿದ ಅನುಭವವಿದೆ. ನನ್ನ ಆಲೋಚನೆಗಳಿಗೆ ಭದ್ರ ಅಡಿಪಾಯ ಹಾಕಿದ್ದು ಈ ಕಾಲೇಜು. ಇಲ್ಲಿ ಡಿಸೈನಿಂಗ್, ವಿಡಿಯೋ ಎಡಿಟಿಂಗ್, ಬರವಣಿಗೆ ಕೌಶಲಗಳನ್ನು ಒಳಗೊಂಡ ಡಿಪ್ಲೊಮಾ ಪತ್ರಿಕೋದ್ಯಮ ಪಡೆದೆ. ಇಲ್ಲಿ ಕಲಿತ ಕೌಶಲ ಹಾಗೂ ಅರಿವಿನ ಮುಂದುವರೆದ ಭಾಗವಾಗಿ Viewpoint ಕನ್ನಡ ಎಂಬ ಹೆಸರಿನ ವೆಬ್​ಸೈಟ್​ ಅನ್ನು ಪ್ರಾರಂಭಿಸಿದ್ದೇನೆ. ಅಂಚಿನ ಸಮುದಾಯಗಳ ಕಣ್ಣೋಟ ಹಾಗೂ ಆಚಾರ ವಿಚಾರ, ಸಂಸ್ಕೃತಿ, ಭಾಷೆ ಮತ್ತು ಜೀವನಶೈಲಿಯನ್ನು ಕನ್ನಡದಲ್ಲಿ ಈ ವೆಬ್​ ಪ್ರಚುರಪಡಿಸುತ್ತಿದೆ.’ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

ಈ ವರ್ಷದ ಸಮೂಹ ಮಾಧ್ಯಮ ಕೋರ್ಸ್​ನಲ್ಲಿ ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮತ್ತು ಸಿನಿಮಾ ಮಾಧ್ಯಮದ ಕುರಿತು ತರಬೇತಿಯನ್ನು ನೀಡಲಾಗುತ್ತಿದೆ. ಕೋರ್ಸ್​ನಲ್ಲಿ ಆಯ್ಕೆಯಾಗುವ ಯುವಜನರಿಗೆ ಊಟ, ವಸತಿ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಹಿಂದುಳಿದ ಪ್ರದೇಶ ಹಾಗೂ ಸಮುದಾಯಗಳ ಹಿನ್ನಲೆಯವರಿಗೆ ವಿದ್ಯಾರ್ಥಿವೇತನವನ್ನೂ ನೀಡಲಾಗುತ್ತಿದೆ.

Baduku – Centre For Livelihood Learning

ತರಗತಿಯಲ್ಲಿ ನಿರತ ಯುವಸಮುದಾಯ

ಇನ್ನೋರ್ವ ಹಳೆಯ ವಿದ್ಯಾರ್ಥಿನಿ ಬೆಳ್ತಂಗಡಿಯ ಯೋಗಿನಿ ಮಚ್ಚಿನ, ‘ನನ್ನ ಬದುಕಿನ ಅತಿ ದೊಡ್ಡ ಕನಸಾಗಿದ್ದು ಪತ್ರಿಕೋದ್ಯಮ. ಆ ಕನಸನ್ನು ನನಸು ಮಾಡಿದ್ದು ಬೆಂಗಳೂರಿನ ಜಯನಗರದ ಮೂರನೇ ಬ್ಲಾಕ್​ನಲ್ಲಿರುವ ಈ ಕಾಲೇಜು. ನಾನೀಗ ಪತ್ರಕರ್ತೆಯಾಗಿ ಖಾಸಗಿ ವಾಹಿನಿಯೊಂದರಲ್ಲಿ ಹೆಮ್ಮೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಇಲ್ಲಿ ಪಡೆದಿರುವ ಶಿಕ್ಷಣದಿಂದಾಗಿ ನಾನೀಗ ಎಲ್ಲಿಯೂ, ಯಾರೊಂದಿಗೂ ಧೈರ್ಯದಿಂದ ಕೆಲಸ ಮಾಡಬಲ್ಲೆ. ಇದು ನನ್ನ ಬದುಕನ್ನೇ ಬದಲಿಸಿದೆ. ನನ್ನ ಹೆಸರಿಗೆ‌ ಗೌರವ , ನನ್ನಲ್ಲಿ ಛಲ, ನನ್ನಲ್ಲಿ ಧೈರ್ಯ, ನನ್ನಲ್ಲಿ ಸಾಧನೆಯ ಹುರುಪು ತುಂಬಿದ್ದೇ ಈ ಸಂಸ್ಥೆ. SSLC ಮುಗಿಯುವಾಗಲೇ ಪತ್ರಿಕೋದ್ಯಮದ ಕನಸು ನನ್ನಲ್ಲಿತ್ತು. ಆದರೆ ಆರ್ಥಿಕ ಸಮಸ್ಯೆಯ ಕಾರಣಕ್ಕೆ ಕೈಗೆಟುಕದ ನನ್ನ ಕನಸು ನನಸಾಗಲ್ಲ ಅನ್ನೋ ನೋವಲ್ಲಿಯೇ ಯಾವುದೇ ನಿರ್ದಿಷ್ಟ ಗುರಿಯಿಲ್ಲದೆ ಪದವಿ ಮುಗಿಸಿದೆ. ನಂತರ ನನ್ನ ಕನಸು ನನಸಾಗುವಂಥ ಉತ್ತಮ ಅವಕಾಶ ಇಲ್ಲಿ ಸಿಕ್ಕಿತು. ವ್ಯಕ್ತಿಯ ಸಮಗ್ರ ಬೆಳವಣಿಗೆಯ ಕಡೆಗೂ ಇಲ್ಲಿ ಗಮನ ಹರಿಸುತ್ತಾರೆ. ರಂಗಭೂಮಿ, ಸಾಹಿತ್ಯದ ಒಡನಾಟದ ಮೂಲಕ ಪರಿಣಾಮಕಾರಿ ಕಲಿಕೆಯನ್ನು ಇಲ್ಲಿ ರೂಪಿಸಲಾಗಿದೆ.’ ಎನ್ನುತ್ತಾರೆ.

ಈ ಕೋರ್ಸ್​ನಲ್ಲಿ ವರದಿಗಾರಿಕೆ, ಸುದ್ದಿ ಸಂಪಾದನೆ, ಭಾಷಾಂತರದ ಜತೆಗೆ ಕಿರುತೆರೆ-ಹಿರಿತೆರೆಗಳಿಗೆ ಸೃಜನಶೀಲ ಸಂಭಾಷಣೆ ಬರೆವಣಿಗೆಯ ಪ್ರಾಯೋಗಿಕ ಕಲಿಕೆ, ಕ್ಯಾಮೆರಾ ನಿರ್ವಹಣೆ, ವಿಡಿಯೊ ಎಡಿಟಿಂಗ್, ಪೇಜ್ ಡಿಸೈನಿಂಗ್ (ಪ್ರಿಂಟ್/ ವೆಬ್) ಬಗ್ಗೆ ಅನುಭವಿ ತಂತ್ರಜ್ಞರಿಂದ ತರಗತಿಗಳು ಇರಲಿವೆ.

ಮೊಬೈಲ್ ಜರ್ನಲಿಸಮ್, ವೆಬ್​ಸೈಟ್, ಸೋಷಿಯಲ್ ಮೀಡಿಯಾ ಹ್ಯಾಂಡ್ಲಿಂಗ್, ಆನ್ಲೈನ್ ಜರ್ನಲಿಸಮ್​ ಆಧುನಿಕ ತಂತ್ರಜ್ಞಾನದ ಕೌಶಲ ಕಲಿಕೆಯ ಜತೆಗೆ ಇಂಗ್ಲಿಷ್ ಭಾಷೆ, ಭಾಷಾಂತರ ಕಲೆ, ವರದಿಗಾರಿಕೆ, ಬರವಣಿಗೆ ಮುಂತಾದ ಕೌಶಲಗಳ ಪ್ರಾಯೋಗಿಕ ಕಲಿಕೆಯನ್ನು ಈ ಕೋರ್ಸ್ ಒಳಗೊಂಡಿದೆ.

ಹೆಚ್ಚಿನ ಮಾಹಿತಿಗೆ 9916376954 /9945065060/9972089471 ಅಥವಾ cccm@samvadabaduku.org https://samvadabaduku.org/category/baduku/ ಮೂಲಕ ಸಂಪರ್ಕಿಸಬಹುದು.

ಇದನ್ನೂ ಓದಿ : Journalism : ‘ನನ್ನ ಮೂರು ಮಕ್ಕಳೊಂದಿಗೆ ನಾನೂ ಓದುತ್ತ ಬರೆಯುತ್ತ ಬೆಳೆಯುತ್ತಿದ್ದೇನೆ’

Published On - 2:26 pm, Sun, 3 October 21

ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ