AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣರಾಜ್ಯೋತ್ಸವ ವಿಶೇಷ | ಸಂವಿಧಾನದ ಮೊದಲ ಪ್ರತಿ ಮುದ್ರಿಸಿದ್ದ ಮೆಷಿನ್​ಗಳು ಗುಜರಿ ಪಾಲು

1,45,000 ಪದಗಳು ಮತ್ತು 230 ಹಾಳೆಗಳಿರುವ ಸಂವಿಧಾನದ ಮೊದಲ (ಕೈಬರಹದ) ಕರಡಿನ 1000 ಪ್ರತಿಗಳು ಡೆಹ್ರಾಡೂನ್​ನ ಹಾಥಿಬಡಕಲಾ ಪ್ರದೇಶದಲ್ಲಿರುವ ಸರ್ವೇ ಆಫ್ ಇಂಡಿಯಾದ ನಾರ್ತನ್ ಗ್ರೂಪ್ ಕಚೇರಿಯಲ್ಲಿ ಮುದ್ರಣಗೊಂಡಿದ್ದವು.

ಗಣರಾಜ್ಯೋತ್ಸವ ವಿಶೇಷ | ಸಂವಿಧಾನದ ಮೊದಲ ಪ್ರತಿ ಮುದ್ರಿಸಿದ್ದ ಮೆಷಿನ್​ಗಳು ಗುಜರಿ ಪಾಲು
ಸಂವಿಧಾನದ ಮೊದಲ ಪ್ರತಿ ಮುದ್ರಿಸಿದ ಮೆಷಿನ್
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jan 24, 2021 | 8:53 PM

Share

ಭಾರತದ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುವವರಿಗೆ ಅದು ಮೊದಲ ಬಾರಿಗೆ ಮುದ್ರಣಗೊಂಡ ವಿಚಾರವೂ ಆಸಕ್ತಿದಾಯಕ ಎನಿಸುತ್ತದೆ. ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ರಚಿಸಿದ ಭಾರತದ ಸಂವಿಧಾನವು ಮೊದಲ ಬಾರಿ ಮುದ್ರಣಗೊಂಡಿದ್ದು 1949ರಲ್ಲಿ.

1,45,000 ಪದಗಳು ಮತ್ತು 230 ಹಾಳೆಗಳಿರುವ ಸಂವಿಧಾನದ ಮೊದಲ (ಕೈಬರಹದ) ಕರಡಿನ 1000 ಪ್ರತಿಗಳು ಡೆಹ್ರಾಡೂನ್​ನ ಹಾಥಿಬಡಕಲಾ ಪ್ರದೇಶದಲ್ಲಿರುವ ಸರ್ವೇ ಆಫ್ ಇಂಡಿಯಾದ ನಾರ್ತನ್ ಗ್ರೂಪ್ ಕಚೇರಿಯಲ್ಲಿ ಮುದ್ರಣಗೊಂಡಿದ್ದವು. ಬ್ರಿಟನ್​ನ ಆರ್​ಡಬ್ಲ್ಯು ಕ್ರಾಬ್ ಟ್ರೀ ಆ್ಯಂಡ್ ಸನ್ಸ್ ತಯಾರಿಸಿದ್ದ ಎರಡು ಪ್ರಿಂಟಿಂಗ್ ಮೆಷಿನ್​ಗಳನ್ನು ಸಂವಿಧಾನದ ಮೊದಲ ಪ್ರತಿ ಮುದ್ರಿಸಲು ಬಳಸಲಾಯಿತು. ಇದಕ್ಕೆ ಬೇಕಿದ್ದ ಕಾಗದವನ್ನು ಆಂಡ್ರ್ಯೂ ಯೂಲ್ (Andrew Yule) ಅವರ ಇಂಡಿಯನ್ ಪೇಪರ್ ಆ್ಯಂಡ್ ಪಲ್ಪ್ (ಐಪಿಪಿ) ಸಂಸ್ಥೆ ಒದಗಿಸಿತ್ತು. ಆನಂತರ 1950ರಲ್ಲಿ ಹೂಗ್ಲಿ ಪ್ರಿಂಟಿಂಗ್ ಕಂಪನಿಯಲ್ಲಿ ಹೆಚ್ಚಿನ ಪ್ರತಿಗಳನ್ನು ಮುದ್ರಿಸಲಾಯಿತು.

ಹೇಗಿತ್ತು ಮೊದಲ ಪ್ರತಿ? ಕೈ ಬರಹದಲ್ಲಿ ಬರೆದ ಸಂವಿಧಾನದ ಎರಡು ಪ್ರತಿಗಳನ್ನು ಲಿಥೋಗ್ರಾಫ್ ಪ್ರಿಂಟಿಂಗ್ (ಕಲ್ಲಚ್ಚು ಮುದ್ರಣ) ಬಳಸಿ ಮುದ್ರಿಸಲಾಗಿತ್ತು. ಕ್ಯಾಲಿಗ್ರಾಫರ್ ಪ್ರೇಮ್ ಬೆಹಾರಿ ನರೇನ್ ರೈಜಾದಾ (ಸಕ್ಸೇನಾ) ಅವರು ಸಂವಿಧಾನವನ್ನು ಇಂಗ್ಲಿಷ್​ನಲ್ಲಿ ಬರೆದಿದ್ದು, ವಸಂತ್ ಕೃಷ್ಣ ವೈದ್ಯ ಅವರು ಹಿಂದಿಯಲ್ಲಿ ಬರೆದಿದ್ದರು. ಈ ಹಸ್ತಪ್ರತಿಗಳಿಗೆ ಶಾಂತಿನಿಕೇತನದ ಕಲಾವಿದರಾದ ನಂದಲಾಲ್ ಬೋಸ್, ಬೋಹರ್ ರಾಮಮನೋಹರ್ ಸಿನ್ಹಾ ಅವರು ಚಿತ್ರಾಲಂಕಾರ (ಇಲಸ್ಟ್ರೇಷನ್) ಮಾಡಿದ್ದರು. ಮೊದಲ ಮುದ್ರಿತ ಪ್ರತಿ ನಾರ್ಥರ್ನ್ ಪ್ರಿಂಟಿಂಗ್ ಡಿವಿಷನ್​ನ ಕಪಾಟಿನಲ್ಲಿ ಸುರಕ್ಷಿತವಾಗಿದೆ.

ಆ ಪ್ರಿಂಟಿಂಗ್ ಮೆಷೀನ್ ಈಗಿಲ್ಲ ಸಂವಿಧಾನದ ಮೊದಲ ಪ್ರತಿ ಮುದ್ರಿಸಲು ಬಳಸಿದ್ದ ಸಾವರಿನ್ ಮತ್ತು ಮೊನಾರ್ಕ್ ಮಾದರಿಯ ಮೆಷಿನ್​ಗಳನ್ನು ಗುಜರಿ ಅಂಗಡಿಗೆ ಮಾರಲಾಗಿದೆ. ಸರ್ವೇ ಆಫ್ ಇಂಡಿಯಾ ಅಧಿಕಾರಿಗಳ ಪ್ರಕಾರ ಹಳೇ ವಸ್ತುಗಳನ್ನು ಖರೀದಿ ಮಾಡುವವರಿಗೆ ತುಂಬಾ ವರ್ಷಗಳ ಹಿಂದೆಯೇ ಇದನ್ನು ಹರಾಜು ಮಾಡಲಾಗಿತ್ತು. 2019ರಲ್ಲಿ ಇದನ್ನು 1.5 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು.

ಎರಡು ಲಿಥೊಗ್ರಾಫಿಕ್ ಪ್ರಿಂಟಿಂಗ್ ಮೆಷಿನ್​ಗಳ ನಿರ್ವಹಣೆ ವೆಚ್ಚವೂ ಜಾಸ್ತಿ ಮತ್ತು ಅಲ್ಲಿ ಬಳಸಿರುವ ತಂತ್ರಜ್ಞಾನವೂ ಹಳೆಯದು. ಹಾಗಾಗಿಯೇ ಅದನ್ನು ಮಾರಾಟ ಮಾಡಲಾಯಿತು. ಸರ್ವೇ ಆಫ್ ಇಂಡಿಯಾ 253 ವರ್ಷಗಳನ್ನು ಪೂರೈಸಿದೆ. ನಮಗೆ ಐತಿಹಾಸಿಕ ಪರಂಪರೆ ಇದೆ. ನಾವು ಎಲ್ಲವನ್ನೂ ಇದೇ ರೀತಿ ಸಂರಕ್ಷಿಸುತ್ತಾ ಹೋದರೆ ಆಮೇಲೆ ಈ ಇಲಾಖೆಯೇ ಪೂರ್ತಿ ಪುರಾತನ ವಸ್ತುಗಳಿಂದ ತುಂಬಿರುತ್ತದೆ ಅಂತಾರೆ ಸರ್ವೇಯರ್ ಜನರಲ್ ಆಫ್ ಇಂಡಿಯಾದ ನಿವೃತ್ತ ಲೆಫ್ಟಿನೆಂಟ್ ಜನರಲ್ ಗಿರೀಶ್ ಕುಮಾರ್.

ಆ ಕಾಲದಲ್ಲಿ ಸರ್ವೇ ಆಫ್ ಇಂಡಿಯಾದ ಡೆಹ್ರಾಡೂನ್ ವಿಭಾಗದಲ್ಲಿ ನೂತನ ಪ್ರಿಂಟಿಂಗ್ ಮೆಷೀನ್​ಗಳಿದ್ದ ಕಾರಣವೇ ಸಂವಿಧಾನದ ಪ್ರತಿಗಳನ್ನು ಮುದ್ರಿಸಲಾಗಿತ್ತು. ಈಸ್ಟರ್ನ್ ಪ್ರಿಂಟಿಂಗ್ ಗ್ರೂಪ್ ಅಥವಾ ಕೊಲ್ಕತ್ತಾ ಶಾಖೆ ಸರ್ವೇ ಆಫ್ ಇಂಡಿಯಾದ ಹಳೇ ಶಾಖೆ. 1840ರಲ್ಲಿ ಇದು ಸ್ಥಾಪನೆಯಾಗಿತ್ತು ಎಂದು ಅನಿಸುತ್ತದೆ. ಭಾರತದ ಮೊದಲ ಪೋಸ್ಟಲ್ ಸ್ಟ್ಯಾಂಪ್ ಇಲ್ಲಿಯೇ ಮುದ್ರಣವಾಗಿತ್ತು. ಸಂವಿಧಾನವನ್ನು ಮುದ್ರಿಸುವ ವಿಷಯ ಬಂದಾಗ ನಾರ್ಥರ್ನ್ ಪ್ರಿಂಟಿಂಗ್ ಗ್ರೂಪ್​ನಲ್ಲಿ ನೂತನ ಮಷಿನ್​ಗಳು ಇರುವ ಕಾರಣ ಅಲ್ಲಿಯೇ ಮುದ್ರಿಸಲು ತೀರ್ಮಾನಿಸಲಾಗಿತ್ತು ಎಂದು ಸರ್ವೇ ಆಫ್ ಇಂಡಿಯಾದ ಸುಪರಿಟೆಂಡಿಂಗ್ ಸರ್ವೇಯರ್ (ಟೆಕ್ನಿಕಲ್ ಸೆಕ್ರೆಟರಿ) ಪಂಕಜ್ ಮಿಶ್ರಾ ಹೇಳಿದ್ದಾರೆ.

ಲಿಥೊಗ್ರಾಫಿಕ್ ಪ್ರಿಂಟಿಂಗ್ ಮೆಷಿನ್​ನಲ್ಲಿ ಒಂದು ಸಲಕ್ಕೆ 8 ಪುಟಗಳನ್ನು ಮುದ್ರಿಸಲಾಗಿತ್ತು. ಆಮೇಲೆ ಅವುಗಳನ್ನು ಪ್ರತ್ಯೇಕ ಪುಟಗಳಾಗಿ ಕತ್ತರಿಸಿ ನಂತರ ಎಲ್ಲ ಪುಟಗಳನ್ನು ಒಗ್ಗೂಡಿಸಿ ಹೊಲಿಯಲಾಗಿತ್ತು. ವಿವಿಧ ರೀತಿಯ ಮ್ಯಾಪ್​ಗಳನ್ನು ಮಾಡಲು ಬಳಸುತ್ತಿರುವ ಜಿಂಕ್ ಮತ್ತು ಅಲ್ಯುಮಿನಿಯಂನಿಂದ ಮಾಡಲಾದ ಲಿಥೊಗ್ರಾಫಿಕ್ ಪ್ಲೇಟ್​ಗಳು ಈಗಲೂ ಈ ಮುದ್ರಣಾಲಯದಲ್ಲಿವೆ. ಆದರೆ ಸಂವಿಧಾನವನ್ನು ಮುದ್ರಿಸಲು ಬಳಸಿದ್ದ ಪ್ಲೇಟ್​ಗಳು ಮಾತ್ರ ಕಾಣಿಸುವುದಿಲ್ಲ.

ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ 2003-04 ಮತ್ತು 2018ರಲ್ಲಿ ದಿ ಸರ್ವೇ ಆಫ್ ಇಂಡಿಯಾ ಸಂವಿಧಾನದ ಪ್ರತಿಗಳನ್ನು ಮತ್ತೆ ಮುದ್ರಿಸಿತ್ತು.

ಗಣರಾಜ್ಯೋತ್ಸವದಂದು ರಾಜ್ಯದಲ್ಲಿ ಮೊಳಗಲಿದೆ ರೈತ ಕಹಳೆ.. ರೈತ ಪರೇಡ್​ನಲ್ಲಿ 10 ಸಾವಿರ ವಾಹನ ಭಾಗಿ

Published On - 8:47 pm, Sun, 24 January 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!