Jelly Fish: ಮೂರ್ತಿ ಚಿಕ್ಕದಾದರೂ ಜೆಲ್ಲಿ ಫಿಶ್ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ ಅಮರತ್ವದ ರಹಸ್ಯ
ಲೋಳೆ ಮೀನು, ಅಂಬಲಿ ಮೀನು, ಕುಂದಾಪುರ ಕಡೆ ತಜ್ಜು ಮೀನು ಎಂದು ಕರೆಯಲ್ಪಡುವ ಜೆಲ್ಲಿ ಫಿಶ್ ಇತರೆ ಮೀನುಗಳಿಗಿಂತ ತುಂಬಾ ಡಿಫರೆಂಟ್. ಇವು ಜಗತ್ತಿನ ಪ್ರತಿಯೊಂದು ಸಮುದ್ರದಲ್ಲಿಯೂ ಸಾಮಾನ್ಯವಾಗಿಯೇ ಕಾಣಸಿಗುತ್ತವೆ. ಆದರೆ ನಿಮಗೆ ಗೊತ್ತಾ? ಇದು ವಿಶ್ವದ ಏಕಮಾತ್ರ ಚಿರಂಜೀವಿ ಮೀನು. ಮೆದುಳು, ಹೃದಯಾ, ರಕ್ತ ಇಲ್ಲದೇ ಜೀವಿಸುತ್ತಿರುವ ಇವು, ಟ್ರಾನ್ಸ್ ಡಿಫರೆನ್ಸಿಯೇಶನ್ ಪ್ರಕ್ರಿಯೆಯ ಮೂಲಕ ತಮ್ಮ ಹಾಳಾದ ದೇಹದ ಕೋಶಗಳನ್ನು ರಿಪೇರಿ ಮಾಡಿಕೊಂಡು ಹೊಸತಾಗುತ್ತವೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯುತ್ತಲೇ ಇರುತ್ತದೆ. ಹೀಗಾಗಿ ಇದಕ್ಕೆ ಸಾವು ಎಂಬುದೇ ಎದುರಾಗುವುದಿಲ್ಲ.

ಸಮುದ್ರವು ಅಗಾಧ ವಿಸ್ಮಯಗಳ ಒಡಲು. ಇಲ್ಲಿ ಹಲವು ವೈವಿಧ್ಯಮಯ ಜಲಚರಗಳ ರಾಶಿ ಇದೆ. ಇಂತಹ ಸ್ವಚ್ಛಂದ ಸಮುದ್ರಗಳ ಮೇಲ್ಮೈಯಲ್ಲಿ ಯಾರ ಭಯವೂ ಇಲ್ಲದೆ ಹಾಯಾಗಿ ತೇಲುವ ಛತ್ರಿ ಆಕಾರದ ಪಾರದರ್ಶಕ ಜೀವಿಯನ್ನು ನೀವು ನೋಡಿಯೇ ಇರುತ್ತೀರಿ. ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಒಂದು ರೀತಿ ಖುಷಿ ನೀಡುವ ಈ ಜೆಲ್ಲಿ ಮೀನುಗಳು ತನ್ನ ಒಡಲಲ್ಲಿ ಊಹೆಗೂ ಮೀರಿದ ಆಶ್ಚರ್ಯಕರ ವಿಚಾರಗಳನ್ನು ಅಡಗಿಸಿಕೊಂಡಿವೆ. ಬೋಟಿಂಗ್ ಮಾಡುವಾಗ, ಈಜಾಡುವಾಗ, ಸಮುದ್ರದ ಕಿನಾರೆಗಳಲ್ಲಿ ಅಲ್ಲಲ್ಲಿ ಕಂಡು ಬರುವ ಈ ಜೆಲ್ಲಿ ಮೀನುಗಳು ನೋಡಲು ಬೆಳ್ಳನೆಯ ಜೆಲ್ಲಿ ರೂಪದಲ್ಲಿರುತ್ತವೆ. ಹಾಗಾಗಿ ನಾವು ಇದು ಸಾಧು ಪ್ರಾಣಿ, ಮನುಷ್ಯರಿಗೆ ನೋವು ಮಾಡುವುದಿಲ್ಲ ಎಂದು ಕೊಂಡಿರುತ್ತೇವೆ. ಆದರೆ ಇವು ನೋಡಲು ಇಷ್ಟು ಸುಂದರವೋ ಅಷ್ಟೇ ಆತಂಕಕಾರಿಯೂ ಹೌದು. ಚಪ್ಪಟೆ ಹುಳುಗಳು, ಪಾಲಿಪ್ಸ್, ನಕ್ಷತ್ರಮೀನು, ಸಮುದ್ರ ಎನಿಮೋನ್, ಪೊರಿಫೆರಾ ಎಂಬ ಸಮುದ್ರ ಜೀವಿಗಳಲ್ಲಿ ಹೃದಯ ಇರುವುದಿಲ್ಲ ಎಂದು ನಾವು ಕೇಳಿದ್ದೇವೆ. ಆದರೆ ಜೆಲ್ಲಿ ಮೀನುಗಳಲ್ಲಿ ಮೆದುಳು, ಹೃದಯ, ರಕ್ತ ಯಾವುದೂ ಇರುವುದಿಲ್ಲ. ಇವು 95 ಪ್ರತಿಶತ ನೀರಿನಿಂದಾಗಿರುತ್ತವೆ. ಇವು ತಮ್ಮ ದೇಹದಾದ್ಯಂತ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಪ್ರಸಾರ ಮಾಡಲು ಸಹಾಯ ಮಾಡುವ ಸರಳವಾದ ವ್ಯವಸ್ಥೆಯನ್ನು ಹೊಂದಿರುತ್ತವೆ. ಇಡೀ ಪ್ರಪಂಚದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜಾತಿಯ ಜೆಲ್ಲಿ ಮೀನುಗಳನ್ನು ನಾವು ನೋಡಬಹುದು. ವಿವಿಧ ಆಕಾರ, ಗಾತ್ರಗಳಲ್ಲಿ ಕಂಡು ಬರುವ ಇವುಗಳಲ್ಲಿ ಕೆಲವು ವಿಷಕಾರಿ ಜೆಲ್ಲಿ ಮೀನುಗಳು ಸಹ ಇವೆ. ಹಲವು ದೇಶಗಳಲ್ಲಿ ಜೆಲ್ಲಿ ಮೀನುಗಳಿದ್ದಾವೆ ಸಮುದ್ರಕ್ಕೆ ಇಳಿಯಬೇಡಿ ಎಂಬ ಬೋರ್ಡ್ಗಳನ್ನು ಸಹ ಹಾಕಿರುತ್ತಾರೆ. ಅಷ್ಟರ ಮಟ್ಟಿಗೆ ಇವು...
Published On - 11:54 am, Wed, 29 May 24