Travel Plan : ಮಳೆಗಾಲದ ಪ್ರವಾಸಕ್ಕೆ ಈ ಸ್ಥಳಗಳು ನಿಮಗಾಗಿ ಕಾಯುತ್ತಿವೆ

Resorts : ಹಿತವಾದ ಸಂಗೀತ, ರುಚಿಯಾದ ತಿಂಡಿತಿನಿಸು, ನೀವಿರುವ ರೂಮ್​ಗಳನ್ನು ಸುತ್ತುವರಿದ ಹಲಸು, ಮಾವು, ತೆಂಗಿನ ಮರಗಳು, ವಿಳ್ಯದೆಲೆಯ ಬಳ್ಳಿಗಳು. ಹೊರಗೆ ಮಳೆ... ಎಂಥ ಆಹ್ಲಾದಕರ ವಾತಾವರಣ!

Travel Plan : ಮಳೆಗಾಲದ ಪ್ರವಾಸಕ್ಕೆ ಈ ಸ್ಥಳಗಳು ನಿಮಗಾಗಿ ಕಾಯುತ್ತಿವೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 14, 2022 | 7:18 PM

Travel Plan for Rainy Season : ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡು ಓಡುವ ಕುದುರೆಯಂತೆ ನಾವು ನಿತ್ಯವೂ ಓಡುತ್ತಲೇ ಇದ್ಧೇವೆ. ಸಿಗುವ ಒಂದು ಭಾನುವಾರವೂ ಸಾಲದೆ, ಮತ್ತೆ ಸೋಮವಾರ ಬಂತೇ ಎಂಬ ಬೇಸರದಲ್ಲೇ ಆಫೀಸುಗಳಿಗೆ ತೆರಳುತ್ತಿದ್ದೇವೆ. ಮಕ್ಕಳಿಗೆ ಶಾಲೆ ಶುರುವಾಗಿ ಯಂತ್ರದಂತೆ ಅವೂ ಓಡುತ್ತಿವೆ. ಇದೆಲ್ಲದಕ್ಕೆ ಮುಕುಟವಿಟ್ಟಂತೆ ಸೂರ್ಯ ನಿಗಿನಿಗಿಯಾಗುತ್ತಲೇ ಇದ್ಧಾನೆ. ಇನ್ನು ಸಾಧ್ಯವೇ ಇಲ್ಲ ಎಂದಾಗ ಆಗಾಗ ಚೂರು ಮಳೆಸೆಳಕು ಬೀಳಿಸಿ ಸಮಾಧನ ಹೇಳುತ್ತಿದೆ ಆಕಾಶ. ಕಾಲ ಹೀಗೇ ನಿಂತೀತೆ? ಬಂದೇ ಬರುತ್ತದೆ ಮಳೆಗಾಲ ಚಳಿಗಾಲ ಮತ್ತೆ ಬೇಸಿಗೆಕಾಲ. ಈಗಿನಿಂದಲೇ ನೀವು ಮಳೆಗಾಲದ ಪ್ರವಾಸಕ್ಕೆ ತಯಾರಿ ಮಾಡಿಕೊಳ್ಳಿ. ಅಂಡಮಾನ್​ ನಿಕೋಬಾರ್, ಗೋವಾ, ಊಟಿ, ಮಹಾಬಲೇಶ್ವರ, ಲೋನಾವಳ, ಮನಾಲಿ ರೆಸಾರ್ಟ್​​​ಗಳು ನಿಮ್ಮ ಬರುವಿಕೆಗಾಗಿ ಸಿದ್ಧಗೊಂಡಿವೆ. ಹಿತವಾದ ಸಂಗೀತ, ರುಚಿಯಾದ ತಿಂಡಿತಿನಿಸು, ನೀವಿರುವ ರೂಮ್​ಗಳನ್ನು ಸುತ್ತುವರಿದ ಹಲಸು, ಮಾವು, ತೆಂಗಿನ ಮರಗಳು, ವಿಳ್ಯದೆಲೆಯ ಬಳ್ಳಿಗಳು. ಹೊರಗೆ ಮಳೆ… ಎಂಥ ಆಹ್ಲಾದಕರ ವಾತಾವರಣ! ಈಗಲೇ ಯೋಜಿಸಿ. ಮುಂಜೋಹ್ ಐಲ್ಯಾಂಡ್ ಹೌಸ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳೂ ನಿಮಗಾಗಿ ಕಾಯುತ್ತಿವೆ.

ಸ್ಟರ್ಲಿಂಗ್, ಊಟಿ ಅದೆಷ್ಟು ಸಲ ಹೋದರೂ ಊಟಿಯ ರಮ್ಯತಾಣದ ಸೊಬಗನ್ನು ಅನುಭವಿಸುವುದು ಮುಗಿಯುವುದೇ ಇಲ್ಲ.  ಊಟಿಯ ಪರ್ವತಗಳುದ್ದಕ್ಕೂ ಹಸಿರು ಚಾದರದಂತೆ ಹಾಸಿರುವ ಸಸ್ಯರಾಶಿ, ಆಳ ಕಣಿವೆಯಲ್ಲಿ ಆಕಾಶ ನೋಡುತ್ತ ನಿಂತ ಪೈನ್​ ಕಾಡುಗಳು, ನವಿರಾದ ಹಸಿರು ಶಾಲನ್ನು ಹೊದಿಸಿದಂತೆ ಕಾಣುವ  ಟೀ ಎಸ್ಟೇಟ್​ಗಳು ಮತ್ತೆ ಮತ್ತೆ ನಿಮ್ಮನ್ನು ಕರೆಯುತ್ತಲೇ ಇರುತ್ತವೆ. ಬೆಳಗಿನ ಮಂಜು ನಿಮ್ಮನ್ನು ಕನಸಿನಲೋಕಕ್ಕೆ ಕರೆದೊಯ್ಯಲು ನಿಮಗಾಗಿಯೇ  ಕಾಯುತ್ತಿರುವಂತೆ ತೋರುತ್ತಿರುತ್ತವೆ.

ಇದನ್ನೂ ಓದಿ : Color Psychology : ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಅಲ್ಲಲ್ಲಿ ಹರಿಯುವ ತೊರೆಗಳು, ಅಪರೂಪಕ್ಕೆ ಕಾಣುವ ಕಾಡುಪ್ರಾಣಿಗಳು, ಸುಗಂಧಿತ ಸಸ್ಯಗಳು ಇನ್ನೂ ಏನೆಲ್ಲ ಇದೆ ಇಲ್ಲಿ. ಇನ್ನು ಈ ರೆಸಾರ್ಟ್​ನಲ್ಲಿ ಪೇಂಟ್‌ಬಾಲ್, ಲೈಬ್ರರಿ ಮತ್ತು ಮನಸೋಲ್ಲಾಸ ನೀಡುವ ಅನೇಕ ಚಟುವಟಿಕೆಗಳ ನಡುವೆಯೂ ಆರಾಮದಾಯಕವಾಗಿ ನೀವು ಕಳೆದುಹೋಗಬಹುದು.

ಸ್ಟೇವಿಸ್ಟಾ, ಲೋನಾವಾಲಾ ಇಲ್ಲಿ ನೀವು ಕುಟುಂಬದೊಂದಿಗೆ ಸ್ನೇಹಿತರೊಂದಿಗೆ ಅಥವಾ ಸಹೋದ್ಯೋಗಿಗಳೊಂದಿಗೆ ವಿಹಾರಕ್ಕಾಗಿ ಗುಂಪಿನಲ್ಲಿಯೂ ಬರಬಹುದು. ವಿವಿಧ ಕಾರ್ಯಕ್ರಮ, ಪಾರ್ಟಿಗಳನ್ನು ಹಮ್ಮಿಕೊಳ್ಳಬಹುದು. ಅದಕ್ಕಾಗಿ ಪೂರಕವಾಗುವಂತೆ ಸುಸಜ್ಜಿತವಾದ ಕೊಠಡಿ, ಹಾಲ್​, ಊಟೋಪಚಾರ, ವಸತಿ ವ್ಯವಸ್ಥೆ, ಆಹ್ಲಾದಕರ ಹವಾಮಾನ ಇಲ್ಲಿರುತ್ತದೆ. ಸುತ್ತಮುತ್ತಲೂ ಇರುವ ಪ್ರವಾಸಿ ತಾಣಗಳಿಗೂ ಭೇಟಿಕೊಡಬಹುದು. ಖಂಡೇಲಾ, ಸಿಂಹಗಡ, ಮಹಾಬಲೇಶ್ವರಗಳಿಗೂ ಭೇಟಿ ನೀಡಬಹುದು.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್