ಆಕರ್ಷಿಸೋ ಕಂಗಳ ಸೀಕ್ರೆಟ್ ‘ಸ್ಮೋಕಿ ಐ ಮೇಕಪ್’

ನೋಡ್ತಾಯಿದ್ರೆ ನೋಡ್ತಾನೆ ಇರಬೇಕು ಅನ್ನೋ ಸುಂದರ ಕಣ್ಣುಗಳು, ಹಕ್ಕಿಯಂತೆ ಹಾರಾಡಲು ರೆಡಿಯಾಗಿದೆ. ಇನ್ನೇನು ಹಾರಿ ಹೋಗುತ್ತೇನೋ ಅನ್ನೋ ಹಾಗೆ ಕಾಣೊ ಮುದ್ದಾದ ಕಣ್ಣುಗಳು. ರೆಕ್ಕೆಯಂತೆ ಕಾಣೋ ತಿದ್ದಿ ತೀಡಿರೋ ರೆಪ್ಪೆಗಳು. ಆ ಕಂಗಳಲ್ಲಿ ಅಂತಹ ಜಾದೂ ಇದೆ. ಕಂಗಳ ಸೌಂದರ್ಯ ಹೆಚ್ಚಿಸೋ ಡಿಫರೆಂಟ್​ ಐ ಮೇಕಪ್ ಜಾದು, ನೋಡುಗರನ್ನ ತನ್ನತ್ತ ಆಕರ್ಷಿಸೋ ಕಂಗಳ ಸೀಕ್ರೆಟ್ ಈ ವಿಭಿನ್ನ ಸ್ಮೋಕಿ ಐ ಕೇವಲ ಸಿಂಪಲ್​ ಆಗಿ ಕಣ್ಣಿಗೆ ಐ ಶ್ಯಾಡೋ ಹಾಕ್ತಾ ಇದ್ದ ಮಹಿಳೆಯರಿಗೆ ಅಂತಾನೆ ಹೊಸತನ ನೀಡೋ […]

ಆಕರ್ಷಿಸೋ ಕಂಗಳ ಸೀಕ್ರೆಟ್ 'ಸ್ಮೋಕಿ ಐ ಮೇಕಪ್'
sadhu srinath

|

Nov 07, 2019 | 1:34 PM

ನೋಡ್ತಾಯಿದ್ರೆ ನೋಡ್ತಾನೆ ಇರಬೇಕು ಅನ್ನೋ ಸುಂದರ ಕಣ್ಣುಗಳು, ಹಕ್ಕಿಯಂತೆ ಹಾರಾಡಲು ರೆಡಿಯಾಗಿದೆ. ಇನ್ನೇನು ಹಾರಿ ಹೋಗುತ್ತೇನೋ ಅನ್ನೋ ಹಾಗೆ ಕಾಣೊ ಮುದ್ದಾದ ಕಣ್ಣುಗಳು. ರೆಕ್ಕೆಯಂತೆ ಕಾಣೋ ತಿದ್ದಿ ತೀಡಿರೋ ರೆಪ್ಪೆಗಳು. ಆ ಕಂಗಳಲ್ಲಿ ಅಂತಹ ಜಾದೂ ಇದೆ. ಕಂಗಳ ಸೌಂದರ್ಯ ಹೆಚ್ಚಿಸೋ ಡಿಫರೆಂಟ್​ ಐ ಮೇಕಪ್ ಜಾದು, ನೋಡುಗರನ್ನ ತನ್ನತ್ತ ಆಕರ್ಷಿಸೋ ಕಂಗಳ ಸೀಕ್ರೆಟ್ ಈ ವಿಭಿನ್ನ ಸ್ಮೋಕಿ ಐ ಕೇವಲ ಸಿಂಪಲ್​ ಆಗಿ ಕಣ್ಣಿಗೆ ಐ ಶ್ಯಾಡೋ ಹಾಕ್ತಾ ಇದ್ದ ಮಹಿಳೆಯರಿಗೆ ಅಂತಾನೆ ಹೊಸತನ ನೀಡೋ ಐ ಮೇಕಪ್​ ಕಾನ್ಸೆಪ್ಟ್​ಗಳು ಬಂದಿದೆ. ನೋಡೋಕೆ ಸಖತ್​ ಕಲರ್​ಫುಲ್​ ಆ್ಯಂಡ್​ ಟ್ರೆಂಡಿ ಎನಿಸೋ ಹಾಗಿರೋ ಈ ಸ್ಮೋಕಿ ಐ ಮೇಕಪ್​ ಶೇಡ್​​ಗಳು ಒಂದಕ್ಕಿಂತ ಒಂದು ಡಿಫರೆಂಟ್​ ಮತ್ತು ಒಂದಕ್ಕಿಂತ ಒಂದು ಬ್ಯೂಟಿಫುಲ್​.

ನಿಮ್ಮ ಮುಖದ ಅಂದ ಹೆಚ್ಚೋದೆ ಕಂಗಳಿಂದ. ಕಂಗಳಿಗೆ ಬ್ಲಾಕ್​ ಕಲರ್​ ಸ್ಮೋಕಿ ಐ ಮೇಕಪ್ ಮಾಡೋ ಮೂಲಕ ಮತ್ತಷ್ಟು ಆಕರ್ಷಕ ಲುಕ್​ ನೀಡಬಹುದು. ಬ್ರಾನ್ಜ್​ ಸ್ಮೋಕಿ ಐ ಮೇಕಪ್ ಮಾಡಿಕೊಂಡಲ್ಲಿ ಇವ್ನಿಂಗ್ ಪಾರ್ಟಿಗಳಿಗೆ , ವೆಸ್ಟರ್ನ್ ಔಟ್​ಫಿಟ್​ಗಳಿಗೆ ಸಖತ್ತಾಗಿ ಸೂಟ್ ಆಗುತ್ತೆ.

ಚಾಕೋಲೇಟ್​ ಸ್ಮೋಕಿ ಐ ಮೇಕಪ್ ನಿಮಗೊಂದು ವಿಶಿಷ್ಟ ಲುಕ್ ನೀಡೋದ್ರಲ್ಲಿ ನೋ ಡೌಟ್​. ಕಾಲೇಜು ಯುವತಿಯರಿಗೆ ಈ ಚಾಕೋಲೇಟ್​ ಸ್ಕೋಕಿ ಲುಕ್ ಹೇಳಿ ಮಾಡಿಸಿದ ಮೇಕಪ್ ಅಂತಾನೆ ಹೇಳಬಹುದು. ಗ್ರೀನ್ ಕಲರ್​ ಸ್ಮೋಕಿ ಐ ಮೇಕಪ್ ನಿಮ್ಮ ಸೀರೆಗೆ ಪರ್ಫೆಕ್ಟ್​ ಮ್ಯಾಚ್ ಅಂದ್ರೆ ತಪ್ಪಾಗಲಾರದು. ಅದರಲ್ಲೂ ಗ್ರೀನ್ ಸ್ಮೋಕಿ ಐ ಮೇಕಪ್ ಯತ್ನಿಕ್ ಲುಕ್ ನೀಡುತ್ತೆ. ​ಪರ್ಪಲ್​​ ಸ್ಮೋಕಿ ಐ ಮೇಕಪ್ ಕೂಡ ಒಂದು ವಿಭಿನ್ನ ಪ್ರಯತ್ನ. ಮೊದಲೆಲ್ಲಾ ಸ್ಮೋಕಿ ಐ ಮೇಕಪ್ ಅಂದ್ರೆ ಬ್ಲಾಕ್​ ಶೇಡ್​ ಮಾತ್ರ ಆಗಿತ್ತು. ಆದ್ರೆ ಈಗ ಸ್ಮೋಕಿ ಐ ಮೇಕಪ್​ಲ್ಲಿ ಸಾಕಷ್ಟು ಕಲರ್​ಗಳು ಬಂದಿದೆ. ​ ಕಾಪರ್​ ಸ್ಮೋಕಿ ಐ ಮೇಕಪ್ ಕೂಡ ಹಳೆಯ ಟ್ರೆಂಡ್​ ಆದ್ರು ಇಂದಿಗೂ ಸಖತ್ ಫೇಮಸ್​. ಪಾರ್ಟಿ ಫಂಕ್ಷನ್​ಗಳಿಗೆ ಹೇಳಿಮಾಡಿಸಿದ ಲುಕ್ ಅಂತಾನೆ ಹೇಳಬಹುದು. ಇನ್ನು ಗೋಲ್ಡ್​ ಸ್ಮೋಕಿ ಲುಕ್​ಗೆ ಬೋಲ್ಡ್​ ಆಗದ ಹೆಣ್ಣಿಲ್ಲಾ ಅಂತಾನೆ ಹೇಳಬಹುದು. ಬಾಲಿವುಡ್ ಸೆಲಬ್ರಿಟಿಗಳಿಂದ ಬಂದಿರೋ ಈ ಟ್ರೆಂಡ್​ಗೆ ಸರಿಸಾಟಿ ಮತ್ತೊಂದಿಲ್ಲಾ.

ಒಟ್ಟಿನಲ್ಲಿ ಹಳೆಯ ಕಾಲದ ಸ್ಮೋಕಿ ಐ ಮೇಕಪ್​ ಡಿಸೈನ್​ಗೆ ಕೊಂಚ ಬ್ರೇಕ್ ಹಾಕ್ತಾ, ಅಪರೂಪಕ್ಕೆ ಒಮ್ಮೆ ಇಂತ ಢಿಫರೆಂಟ್​ ಕಲರ್​​ ಟ್ರೈ ಮಾಡಬಹುದು ಅಲ್ವಾ. ಬಾಲಿವುಡ್​ ಸೆಲಬ್ರಿಟಿಗಳಿಂದ ಶುರುವಾದ ಈ ಸ್ಟೈಲ್​ ಇದೀಗ ಕಾಲೇಜು ಹುಡುಗಿಯರ ಮನ ಕದ್ದಿದ್ದೆ. ಅಷ್ಟಕ್ಕೂ ಫ್ಯಾಷನ್ ಅಂದ್ರೆ ಚೇಂಜ್ಸ್​ ಅಲ್ವಾ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada