ನಿಮ್ಮ ಮಕ್ಕಳು ಹಠಮಾರಿಗಳಾ, ಹಾಗಿದ್ದರೆ ನಾವು ಹೇಳಿದ್ದನ್ನು ಪಾಲಿಸಿ ನೋಡಿ

ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ, ಮನೆಯ ಪರಿಸರ ಹಾಗೂ ಮನೆಯಲ್ಲಿ ಇರುವ ವ್ಯಕ್ತಿಗಳ ವರ್ತನೆ ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಆದ್ದರಿಂದ ಅವರ ಸೂಕ್ಷ್ಮ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ತುಂಬುವ ಕೆಲಸವನ್ನು ಪೋಷಕರು ಮಾಡಬೇಕಾಗುತ್ತದೆ. ಮಕ್ಕಳು ಎಂದ ಮೇಲೆ ತುಂಟಾಟ ಇದ್ದೇ ಇರುತ್ತದೆ. ಅವರ ತುಂಟಾಟ ಬಿಡಿಸಿ ಅವರನ್ನು ಯೋಗ್ಯ ಮಕ್ಕಳನ್ನಾಗಿಸುವಲ್ಲಿ ಹಿರಿಯರ ಅಂದ್ರೆ ಪೋಷಕರ ಪಾತ್ರ ಹಿರಿದು.. ಮಕ್ಕಳು ತಮಗೆ ಬಯಸಿದ್ದು ಸಿಗದೇ ಹೋದಾಗ, ಬೇಜಾರಾದಾಗ ಮೊಂಡುತನ ತೋರುತ್ತಾರೆ. ಈ ರೀತಿ ಮೊಂಡುತನ […]

ನಿಮ್ಮ ಮಕ್ಕಳು ಹಠಮಾರಿಗಳಾ, ಹಾಗಿದ್ದರೆ ನಾವು ಹೇಳಿದ್ದನ್ನು ಪಾಲಿಸಿ ನೋಡಿ
sadhu srinath

|

Nov 06, 2019 | 11:58 AM

ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ, ಮನೆಯ ಪರಿಸರ ಹಾಗೂ ಮನೆಯಲ್ಲಿ ಇರುವ ವ್ಯಕ್ತಿಗಳ ವರ್ತನೆ ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಆದ್ದರಿಂದ ಅವರ ಸೂಕ್ಷ್ಮ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ತುಂಬುವ ಕೆಲಸವನ್ನು ಪೋಷಕರು ಮಾಡಬೇಕಾಗುತ್ತದೆ. ಮಕ್ಕಳು ಎಂದ ಮೇಲೆ ತುಂಟಾಟ ಇದ್ದೇ ಇರುತ್ತದೆ. ಅವರ ತುಂಟಾಟ ಬಿಡಿಸಿ ಅವರನ್ನು ಯೋಗ್ಯ ಮಕ್ಕಳನ್ನಾಗಿಸುವಲ್ಲಿ ಹಿರಿಯರ ಅಂದ್ರೆ ಪೋಷಕರ ಪಾತ್ರ ಹಿರಿದು..

ಮಕ್ಕಳು ತಮಗೆ ಬಯಸಿದ್ದು ಸಿಗದೇ ಹೋದಾಗ, ಬೇಜಾರಾದಾಗ ಮೊಂಡುತನ ತೋರುತ್ತಾರೆ. ಈ ರೀತಿ ಮೊಂಡುತನ ತೋರಿದಾಗ ಗದರಿಸುವ ಬದಲು ಈ ಟೆಕ್ನಿಕ್ ಪ್ರಯೋಗಿಸಿ ನೋಡಿ. * ಮಗುವಿನ ಬಳಿ ನೀನು ತಪ್ಪು ಮಾಡುತ್ತಿದ್ದೀಯಾ ಅಂತೆಲ್ಲಾ ಗದರಬೇಡಿ, ಯಾವುದೇ ಪ್ರತಿಕ್ರಿಯೆ ತೋರಬೇಡಿ, ಶಾಂತವಾಗಿರಿ. * ನಿಮ್ಮ ಮಗು ಅಳುತ್ತಿದ್ದರೆ ‘ನೀನು ಅಳು ನಿಲ್ಲಿಸಿದರೆ ಮಾತ್ರ ನಾನು ನೀನು ಹೇಳುವುದನ್ನು ಕೇಳುತ್ತೇನೆ’ ಅಂತ ಹೇಳಿ ನೋಡಿ. * ನಿಮ್ಮ ಮಗುವಿಗೆ ಗಮನವನ್ನು ಬೇರೆ ಕಡೆಗೆ ತಿರುಗಿಸಿ. * ಮಗು ಮೊಂಡುತನ ಮಾಡಿದಾಗ ಅದು ಹೇಳಿದಂತೆ ಕೇಳಲು ಹೋಗಬೇಡಿ, ಈ ರೀತಿ ಮಾಡುತ್ತಾ ಮಕ್ಕಳು ಅದನ್ನೇ ತಮ್ಮ ಸ್ವಭಾವನ್ನಾಗಿಸುತ್ತೇವೆ, ಮಗುವಿನ ಈ ಸ್ವಭಾವದಿಂದ ಅದು ಬೆಳೆಯುತ್ತಿದ್ದಂತೆ ಮಗುವಿಗೂ, ನಿಮಗೂ ತೊಂದರೆ ಉಂಟಾಗುವುದು.

ಮಕ್ಕಳ ಸ್ವತಂತ್ರ ಮನೋಭಾವ ಬೆಳೆಯುತ್ತಿದ್ದಂತೆ ಕೆಲವೊಮ್ಮೆ ಹೇಳಿದ ಮಾತು ಕೇಳುವುದಿಲ್ಲ. ಮಕ್ಕಳು ಹೀಗೆ ಮಾಡುವಾಗ ಅವರ ಮೇಲೆ ಕೋಪಗೊಂಡು ಹಾರಾಡುವುದಕ್ಕಿಂತ ನೀವು ಮಾಡಬೇಕಾಗಿರುವುದು ಇಷ್ಟೇ. * ನಿಮ್ಮ ಮಗುವಿನ ಅಭಿಪ್ರಾಯಕ್ಕೂ ಬೆಲೆ ಕೊಡಿ. * ನಿಮ್ಮ ಮಾತು ಮಗು ಏಕೆ ಕೇಳುತ್ತಿಲ್ಲ ಅಂತ ಸಮಧಾನವಾಗಿ ಕೇಳಿ, ಮಗುವಿನ ಅಭಿಪ್ರಾಯ ವ್ಯಕ್ತಪಡಿಸಲು ಪ್ರೋತ್ಸಾಹಿಸಿ. * ನೀವು ಹೇಳಿದ ಮಾತು ಕೇಳುತ್ತಿಲ್ಲ ಅಂತ ಕೋಪಗೊಳ್ಳುವುದರಿಂದ ಅವರು ಮತ್ತಷ್ಟು ಹಠಮಾರಿಗಳಾಗುತ್ತಾರೆ.

ಕೊಪ ಬಂದರೆ ಚೀರಾಡುವುದು: ಕೆಲ ಮಕ್ಕಳಿಗೆ ಕೊಪ ಬಂದರೆ ಚೀರಾಡುವುದು, ನೆಲದಲ್ಲಿ ಬಿದ್ದು ಹೊರಳಾಡುವುದು ಮಾಡುತ್ತಾರೆ. ಇಂಥ ಮಕ್ಕಳನ್ನು ನಿಭಾಯಿಸುವುದು ಸುಲಭದ ಮಾತಲ್ಲ. ನೀವು ಹೇಳಿದ್ದನ್ನು ಕೇಳಲ್ಲ, ಕೈಗೆ ಸಿಕ್ಕಿದ್ದನ್ನು ಬೀಳಿಸಿ ಹೊಡೆದು ಹಾಕುತ್ತವೆ, ಮಕ್ಕಳು ಬೇರೆಯವರ ಮುಂದೆ ಈ ರೀತಿ ವರ್ತಿಸಿದಾಗ ನಿಮಗೆ ಮುಜುಗರ ಉಂಟಾಗುವುದು. ಆದರೂ ಸ್ವಲ್ಪ ತಾಳ್ಮೆ ತಂದುಕೊಂಡು ಅವರೊಂದಿಗೆ ಈ ರೀತಿ ವರ್ತಿಸಿ ಆಗ ಅವರ ಸ್ವಭಾವದಲ್ಲಿ ಬದಲಾವಣೆಯಾಗುವುದು: * ನಿಮ್ಮ ಮಗುವಿನ ಹತ್ತಿರ ಯಾವ ಕಾರಣಕ್ಕೆ ಸಿಟ್ಟು ಬಂತು ಅಂತ ಕೇಳಿ ತಿಳಿದುಕೊಳ್ಳಿ. * ಶಾಲೆಗೆ ಹೋಗುವ ಮಕ್ಕಳು ಕೆಲವೊಮ್ಮೆ ಹೋಂ ವರ್ಕ್‌, ಪ್ರಾಜೆಕ್ಟ್ ಅಂತ ಮಾನಸಿಕ ಒತ್ತಡದಲ್ಲಿರುತ್ತಾರೆ. ಅವರ ಮಾನಸಿಕ ಒತ್ತಡಕ್ಕೆ ಕಾರಣವೇನು ಎಂದು ತಿಳಿದುಕೊಳ್ಳಿ. ಸಾಧ್ಯವಾದರೆ ನಿಮ್ಮ ಮಗುವಿನ ತರಗತಿ ಟೀಚರ್‌ ಜತೆಗೆ ಮಾತನಾಡಿ. * ಒಂದು ವೇಳೆ ದಿನದಿಂದ ದಿನಕ್ಕೆ ಮಗುವಿನ ಕೋಪ ಸ್ವಭಾವ ಹೆಚ್ಚಾಗುತ್ತಿದ್ದರೆ ಕೋಪವನ್ನು ನಿಯಂತ್ರಿಸಲು ಮಕ್ಕಳ ಕೌನ್ಸಿಲರ್ ಬಳಿ ಕರೆದುಕೊಂಡು ಹೋಗುವುದು ಒಳ್ಳೆಯದು.

ಮಕ್ಕಳು ಕೆಲವೊಮ್ಮೆ ಸುಳ್ಳು ಹೇಳುತ್ತಾರೆ, ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳಬಾರದು. ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ನಿಮಗೆ ಗೊತ್ತಾದರೆ ಅವರ ಸುಳ್ಳಿಗೆ ಪ್ರೋತ್ಸಾಹ ನೀಡಬೇಡಿ. ಮಕ್ಕಳು ಸುಳ್ಳು ಹೇಳುತ್ತಿರುವುದು ನಿಮ್ಮ ಗಮನಕ್ಕೆ ಬಂದಾಗ ಈ ರೀತಿ ಮಾಡಿ: * ಸುಳ್ಳು ಹೇಳುತ್ತಿದ್ದೀಯಾ ಅಂತಾ ಗದರಿಸಬೇಡಿ, ಬದಲಿಗೆ ಈ ಸುಳ್ಳು ಏಕೆ ಹೇಳಿದೆ ಅಂತಾ ಸಮಧಾನವಾಗಿ ಕೇಳಿ. * ಮಗುವಿಗೆ ಸರಿ-ತಪ್ಪುವಿನ ಬಗ್ಗೆ ತಿಳಿ ಹೇಳಿ. * ನೀವು ಬೈಯುವುದಿಲ್ಲ, ಹೊಡೆಯುವುದಿಲ್ಲ ಅಂತಾ ಮಕ್ಕಳಿಗೆ ಭರವಸೆ ಸಿಕ್ಕರೆ ಅವರು ಸುಳ್ಳು ಹೇಳುವುದಿಲ್ಲ.

ಮನೆಯಲ್ಲಿ ಎರಡು ಮಕ್ಕಳಿದ್ದರೆ ಕಿತ್ತಾಟ ಸಾಮಾನ್ಯ. ಒಬ್ಬರು ತೆಗೆದ ವಸ್ತುವೇ ಮತ್ತೊಬ್ಬರಿಗೆ ಬೇಕು. ಇಬ್ಬರಿಗೆ ಒಂದೇ ರೀತಿಯ ಆಟ ಸಾಮಾನು ಕೊಡಿಸಿದರೂ ಕಿತ್ತಾಟ ಇದ್ದೇ ಇರುತ್ತದೆ. ಇವರ ಕಿತ್ತಾಟ ನೋಡಿ ರೋಸಿ ಹೋಗುವುದುಂಟು. ಮಕ್ಕಳು ಹೀಗೆ ಕಿತ್ತಾಡುವಾಗ ಪೊಷಕರು ಒಬ್ಬರ ಪರ ನಿಂತರೆ ಮತ್ತೊಬ್ಬರಿಗೆ ಬೇಜಾರು. ಮಕ್ಕಳು ಕಿತ್ತಾಡುವಾಗ ಈ ರೂಲ್ಸ್ ಪಾಲಿಸಿ. * ಯಾರದೇ ಪರ ವಹಿಸಿ ಮಾತನಾಡಬೇಡಿ. ಸಮಾಧಾನವಾಗಿ ಕುಳಿತು ಇಬ್ಬರ ದೂರುಗಳನ್ನು ಆಲಿಸಿ, ನಂತರ ಇಬ್ಬರನ್ನು ಸಮಧಾನ ಮಾಡಿ ಕಿತ್ತಾಡದೆ ಆಡುವಂತೆ ಹೇಳಿ. * ಇಬ್ಬರು ಕಿತ್ತಾಡಿದರೆ ನೀವು ಕೇಳಿದ ವಸ್ತು ಕೊಡಿಸುವುದಿಲ್ಲಾ ಅಂತ, ಇಲ್ಲಾ ಅವರು ಯಾವ ವಸ್ತುವಿಗೆ ಕಿತ್ತಾಡುತ್ತಿದ್ದಾರೋ ಅದನ್ನು ತೆಗೆದುಕೊಂಡು ಕಿತ್ತಾಡಿದರೆ ಆಡಲು ಇಬ್ಬರಿಗೂ ಕೊಡುವುದಿಲ್ಲ ಅಂತ ಹೇಳಿ. ಇದರಿಂದ ಮಕ್ಕಳು ಸುಮ್ಮನಾಗುತ್ತಾರೆ.

ಮಕ್ಕಳನ್ನು ಮೊಬೈಲ್ ನಿಂದ ದೂರವಿಡಿ ಈಗೀನ ಮಕ್ಕಳಿಗೆ ಗ್ಯಾಡ್ಜೆಟ್ ಹುಚ್ಚು ತುಂಬಾ ಇರುತ್ತದೆ. ಮೊಬೈಲ್ ಕೈಯಲ್ಲಿ ಸಿಕ್ಕರೆ ಸಾಕು ಬೇರೆ ಯಾವುದೇ ಆಟ ಸಾಮಾನು ಬೇಡ. ಕೆಲವೊಂದು ಪೋಷಕರು ಕೂಡ ಮಕ್ಕಳು ಹಠ ಮಾಡದೆ ಒಂದು ಕಡೆ ಕೂರಲಿ ಅಂತ ಮೊಬೈಲ್ ಕೊಡುವುದುಂಟು. ಈ ರೀತಿ ಮಾಡಿದರೆ ಮಕ್ಕಳ ಕ್ರಿಯಾಶೀಲತೆಯನ್ನು ಹಾಳು ಮಾಡಿದಂತೆ. ಮಕ್ಕಳು ಗ್ಯಾಡ್ಜೆಟ್‌ ಚಟ ಬಿಡಿಸಲು ಮೊದಲು ನೀವು ಇದನ್ನ ಮಾಡಿ. * ನೀವು ಮೊಬೈಲ್ ಬಳಸುವುದನ್ನು ಮಕ್ಕಳ ಮುಂದೆ ಕಡಿಮೆ ಮಾಡಿ. ನೀವು ಮೊಬೈಲ್‌ ತುಂಬಾ ಬಳಸುತ್ತಿದ್ದು, ಮಕ್ಕಳಿಗೆ ಬುದ್ಧಿವಾದ ಹೇಳಲು ಹೋದರೆ ಅವರು ಕೇಳುವುದಿಲ್ಲ. * ನಿಮ್ಮ ಮಕ್ಕಳು ಮನೆಯಿಂದ ಹೊರಗಡೆ ಹೋಗಿ ಆಟ ಆಡುವುದನ್ನು ಪ್ರೋತ್ಸಾಹಿಸಿ. ಅವರ ಜತೆ ನೀವೂ ಆಡಿ. ಈ ರೀತಿಯ ಆಟಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಒಳ್ಳೆಯದು. * ಸ್ವಲ್ಪದೊಡ್ಡ ಮಕ್ಕಳಾದರೆ ಗ್ಯಾಡ್ಜೆಟ್ ಇಷ್ಟು ಸಮಯ ಮಾತ್ರ ಬಳಸಬೇಕೆಂಬ ರೂಲ್ ತನ್ನಿ.

ಕೆಲ ಮಕ್ಕಳು ಕಲಿಯಲು ಆಸಕ್ತಿಯೇ ತೋರುವುದಿಲ್ಲ, ಹೋಂವರ್ಕ್ ಮಾಡಲ್ಲ, ಟೀಚರ್ ಪಾಠ ಮಾಡುವಾಗ ಲಕ್ಷ್ಯ ಕೊಡುವುದಿಲ್ಲ, ಮನೆಗೆ ಬಂದರೆ ಪುಸ್ತಕ ಮುಟ್ಟಲ್ಲ. ಮಕ್ಕಳು ಕಲಿಕೆಯಲ್ಲಿ ಹಿಂದೇಟು ಹಾಕಿದಾಗ ಶಾಲೆಯಿಂದ ಪೋಷಕರನ್ನು ಕರೆಸಿ ಹೇಳುತ್ತಾರೆ, ಇದರಿಂದ ನಿಮಗೆ ಮತ್ತಷ್ಟು ಕಿರಿಕಿರಿ ಆಗುವುದು. ಹಾಗಂತ ಕೋಪಗೊಳ್ಳಬೇಡಿ, ಬದಲಿಗೆ ಊಈ ರೀತಿ ವರ್ತಿಸಿ: * ಮಕ್ಕಳ ಮೇಲೆ ಓದು-ಓದು ಅಂತ ಒತ್ತಡ ಹಾಕಬೇಡಿ. * ಓದಿನ ಮಹತ್ವದ ಬಗ್ಗೆ ತಿಳಿ ಹೇಳಿ, ಅವರಲ್ಲಿ ದೊಡ್ಡ-ದೊಡ್ಡ ಕನಸುಗಳನ್ನು ತುಂಬಿ, ಓದಿದರೆ ಮಾತ್ರ ಅ ಕನಸು ನನಸಾಗಲು ಸಾಧ್ಯ ಅಂತ ಹೇಳಿ. * ನಿಮ್ಮ ಮಗುವಿನಲ್ಲಿರುವ ಇತರ ಕೌಶಲ್ಯ ಗಮನಿಸಿ, ಕೆಲ ಮಕ್ಕಳು ಓದಲು ಸ್ವಲ್ಪ ಹಿಂದೆ ಬಿದ್ದರೂ, ಸ್ಪೋರ್ಟ್ಸ್, ನಾಟಕ ಅಂತ ಚುರುಕು ಇರುತ್ತಾರೆ, ಅವರಲ್ಲಿರುವ ಸುಪ್ತ ಕಲೆ ಗುರುತಿಸಿ ಅದನ್ನು ಬೆಳೆಸಲು ಪ್ರಯತ್ನ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada