ಹೆಂಗಸರಿಗೂ ಹೆಚ್ಚಾಗುತ್ತಿದೆ ಬೊಕ್ಕ ತಲೆ ಪ್ರಾಬ್ಲಂ, ಇದಕ್ಕೆ ಇಲ್ಲಿದೆ ಪರಿಹಾರ!

ನಿಮ್ಮ ಕೂದಲು ದಿನದಿಂದ ದಿನಕ್ಕೆ ಉದುರುತ್ತಿದೆಯಾ? ಬೊಕ್ಕತಲೆಯಿಂದಾಗಿ ಹೆಣ್ಣು ಸಿಗದೆ ಪರದಾಡೋ ಪರಿಸ್ಥಿತಿಯಲ್ಲಿದ್ದೀರಾ? ನಿಮ್ಮ ಜೀವನ ಒಂದು ಮೊಟ್ಟೆಯ ಕಥೆ ಸಿನೆಮಾ ತರಹ ಆಗ್ಹೋಗಿದೆಯಾ? ಬೊಕ್ಕತಲೆಗೆ ಕಾರಣವಾಗುವ ಪ್ರಮುಖ 5 ತಪ್ಪುಗಳ ಬಗ್ಗೆ ನಾವು ನಿಮಗೆ ಹೇಳ್ತೀವಿ. * ಇತ್ತೀಚಿಗೆ ಬ್ಯುಸಿಯಾಗಿರುವ ಜೀವನದಲ್ಲಿ ಹೆಚ್ಚಿನವರು ಒದ್ದೆ ಕೂದಲನ್ನೇ ಬಾಚಿಕೊಳ್ಳುತ್ತಾರೆ. ಇದು ಅವರಿಗೆ ಕೂದಲುದುರುವಿಕೆ ಮತ್ತು ಕೂದಲು ಒಡೆಯುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಕೂದಲು ಸಂಪೂರ್ಣ ಒಣಗಿದ ನಂತರವೇ ಬಾಚಬೇಕು. * ಅನೇಕ ಮಂದಿಗೆ ಯಾವಾಗಲೂ ಟೊಪ್ಪಿ ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. […]

ಹೆಂಗಸರಿಗೂ ಹೆಚ್ಚಾಗುತ್ತಿದೆ ಬೊಕ್ಕ ತಲೆ ಪ್ರಾಬ್ಲಂ, ಇದಕ್ಕೆ ಇಲ್ಲಿದೆ ಪರಿಹಾರ!
Follow us
ಸಾಧು ಶ್ರೀನಾಥ್​
|

Updated on:Oct 07, 2019 | 10:16 PM

ನಿಮ್ಮ ಕೂದಲು ದಿನದಿಂದ ದಿನಕ್ಕೆ ಉದುರುತ್ತಿದೆಯಾ? ಬೊಕ್ಕತಲೆಯಿಂದಾಗಿ ಹೆಣ್ಣು ಸಿಗದೆ ಪರದಾಡೋ ಪರಿಸ್ಥಿತಿಯಲ್ಲಿದ್ದೀರಾ? ನಿಮ್ಮ ಜೀವನ ಒಂದು ಮೊಟ್ಟೆಯ ಕಥೆ ಸಿನೆಮಾ ತರಹ ಆಗ್ಹೋಗಿದೆಯಾ? ಬೊಕ್ಕತಲೆಗೆ ಕಾರಣವಾಗುವ ಪ್ರಮುಖ 5 ತಪ್ಪುಗಳ ಬಗ್ಗೆ ನಾವು ನಿಮಗೆ ಹೇಳ್ತೀವಿ.

* ಇತ್ತೀಚಿಗೆ ಬ್ಯುಸಿಯಾಗಿರುವ ಜೀವನದಲ್ಲಿ ಹೆಚ್ಚಿನವರು ಒದ್ದೆ ಕೂದಲನ್ನೇ ಬಾಚಿಕೊಳ್ಳುತ್ತಾರೆ. ಇದು ಅವರಿಗೆ ಕೂದಲುದುರುವಿಕೆ ಮತ್ತು ಕೂದಲು ಒಡೆಯುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಕೂದಲು ಸಂಪೂರ್ಣ ಒಣಗಿದ ನಂತರವೇ ಬಾಚಬೇಕು.

* ಅನೇಕ ಮಂದಿಗೆ ಯಾವಾಗಲೂ ಟೊಪ್ಪಿ ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. ಇದರಿಂದಾಗಿ ಕೂದಲಿಗೆ ಸರಿಯಾದ ಆಮ್ಲಜನಕ ಸರಬರಾಜಾಗದೇ ಕೂದಲು ಕಳೆದುಕೊಳ್ಳುತ್ತಾರೆ ಮತ್ತು ಕೂದಲಿನ ಬೇರುಗಳು ದುರ್ಬಲಗೊಂಡು ಕೂದಲುದುರುವಿಕೆ ಪ್ರಾರಂಭವಾಗುತ್ತದೆ.

* ಈಗಿನ ಯುವಜನತೆ ಹೇರ್ ಸ್ಟೈಲ್ ಮಾಡುವುದಕ್ಕಾಗಿ ಕೆಮಿಕಲ್ ನಿಂದ ತುಂಬಿರುವ ಅನೇಕ ಹೇರ್ ಸ್ಟೈಲ್ ಪ್ರಾಡಕ್ಟ್ ಗಳನ್ನು ಬಳಕೆ ಮಾಡುತ್ತಾರೆ. ಇದು ಕೂದಲಿಗೆ ದೊಡ್ಡ ಪ್ರಮಾಣದ ಹಾನಿಯನ್ನು ಮಾಡುತ್ತದೆ. ಈಗಿನ ಹುಡುಗರು ಹೇರ್ ಜೆಲ್ ಬಳಕೆ ಮಾಡುತ್ತಾರೆ. ಇದು ಕೂದಲನ್ನು ದುರ್ಬಲವಾಗಿಸುತ್ತದೆ ಮತ್ತು ಸಂಪೂರ್ಣ ಬೊಕ್ಕತಲೆಯಾಗುವುದಕ್ಕೆ ಪ್ರಮುಖ ಕಾರಣವಾಗುತ್ತದೆ.

* ಅನೇಕ ಮಂದಿ ಕೂದಲಿಗೆ ಶಾಂಪೂ ಮಾಡಿದ ನಂತರ ಕಂಡೀಷನರ್ ಬಳಸುವುದೇ ಇಲ್ಲ. ಇದು ಕೂದಲಿನ ಬೇರುಗಳನ್ನು ಶಕ್ತಿಹೀನವಾಗಿಸುತ್ತದೆ ಯಾಕೆಂದರೆ ಶಾಂಪೂವಿನಲ್ಲಿ ಅನೇಕ ರೀತಿಯ ಕೆಮಿಕಲ್ ಗಳಿರುತ್ತದೆ. ಹಾಗಾಗಿ ಶಾಂಪೂ ಮಾಡಿದ ನಂತರ ಕಂಡೀಷನರ್ ಬಳಕೆ ಮಾಡುವುದನ್ನು ಮರೆಯಬೇಡಿ.

* ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಪ್ರತಿ ದಿನ ಶಾಂಪೂ ಬಳಸಿ ತಮ್ಮ ಕೂದಲನ್ನು ತೊಳೆಯುತ್ತಾರೆ. ಇದು ಕೂಡ ಕೂದಲು ಕಳೆದುಕೊಳ್ಳಲು ಮತ್ತು ಕೂದಲಿನ ಬೇರು ದುರ್ಬಲವಾಗಿ, ತೆಳುವಾಗಿ ತುಂಡಾಗುವುದಕ್ಕೆ ಕಾರಣವಾಗುತ್ತದೆ. ನಿಮ್ಮ ಈ ತಪ್ಪು ಮುಂದೊಂದು ದಿನ ಬೊಕ್ಕತಲೆ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದು ನೆನಪಿರಲಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಮಾತ್ರವೇ ಶಾಂಪೂ ಹಾಕಿ ಕೂದಲು ತೊಳೆಯುವ ಅಭ್ಯಾಸವನ್ನು ಇಟ್ಟುಕೊಳ್ಳಿ.

ಕೇವಲ ಪುರುಷರು ಮಾತ್ರವಲ್ಲ. ಈ ಹಿಂದಿನ ಮಹಿಳೆಯರಿಗಿಂತಲೂ ಅಧಿಕವಾಗಿ ಇಂದಿನ ಮಹಿಳೆಯರು ತಮ್ಮ ಕೂದಲನ್ನು ಕಳೆದುಕೊಳ್ಳುತ್ತಿದ್ದಾರೆ. ಯಾಕೆಂದರೆ ಒತ್ತಡದಿಂದ ಕೂಡಿರುವ ಅವರ ಜೀವನಶೈಲಿಯು ಕೂದಲು ಉದುರುವಿಕೆಯ ಪ್ರಮುಖ ಕಾರಣವಾಗಿದೆ. ಒತ್ತಡವು ಅವರ ದೇಹದಲ್ಲಿ ಹೆಚ್ಚು ಆಂಡ್ರೋಜೆನ್ ಗಳನ್ನು ಉತ್ಪಾದಿಸುವುದಕ್ಕೆ ಪ್ರೇರಣೆ ನೀಡುತ್ತದೆ ಮತ್ತು ಅದರಿಂದಾಗಿ ಕೂದಲು ಉದುರುವಿಕೆ ಉಂಟು ಮಾಡುವ ರಾಸಾಯನಿಕ ಡಿಟಿಹೆಚ್ ನ ಸ್ರವಿಸುವಿಕೆಯನ್ನು ಹೆಚ್ಚು ಮಾಡುತ್ತದೆ.

ಕೂದಲುದುರುವಿಕೆ ತಡೆಗಟ್ಟಲು ಇಲ್ಲಿದೆ ಪರಿಹಾರ: ಕೂದಲು ಮತ್ತು ಆಹಾರದ ನಡುವಿನ ಸಂಬಂಧವು ಬಹಳ ಸರಳವಾಗಿದೆ. ಕೂದಲು ಕೆರಟಿನ್ ಹೆಸರಿನ ಪ್ರೊಟೀನ್ ನಿಂದ ನಿರ್ಮಿತವಾಗಿರುತ್ತದೆ. ಹಾಗಾಗಿ ನಿಮ್ಮ ಡಯಟ್ ನಲ್ಲಿ ಸರಿಯಾದ ಪ್ರಮಾಣದ ಪ್ರೊಟೀನ್ ನ್ನು ಸೇವನೆಯನ್ನು ಅಳವಡಿಸಿಕೊಳ್ಳಬೇಕು.  ಪಾಲಕ್ ಸೊಪ್ಪು, ಬಾದಾಮಿ, ವಾಲ್ ನಟ್, ಪನ್ನೀರ್ ಮತ್ತು ಹಾಲು ಕೂದಲಿಗೆ ಖುಷಿ ನೀಡುವ ಆಹಾರ ಪದಾರ್ಥಗಳು. ಗ್ರೀನ್ ಟೀ ಕೂಡ ಪರಿಣಾಮಕಾರಿಯಾಗಿರುತ್ತದೆ. ಯಾಕೆಂದರೆ ಕೂದಲು ಉದುರುವಿಕೆಗೆ ಕಾರಣವಾಗುವ ಡಿಹೈಡ್ರೋಟೆಸ್ಟೊಸ್ಟೆರಾನ್ ಹಾರ್ಮೋನನ್ನು ಇದು ನಿರ್ಭಂಧಿಸುತ್ತದೆ.

ಮಹಿಳೆಯರು ಅತಿಯಾಗಿ ಕೂದಲಿನ ಅಲಂಕಾರ ಮಾಡುವುದು ಮತ್ತು ಕೂದಲಿಗಾಗಿ ಕೃತಕ ಬಣ್ಣಗಳನ್ನು ಬಳಕೆ ಮಾಡುವುದು ಕೂಡ ಕೂದಲು ಉದುರುವಿಕೆಯ ಪ್ರಮುಖ ಕಾರಣ. ಬಿಸಿ ಮತ್ತು ಕೆಮಿಕಲ್ ಗಳು ಕೂದಲನ್ನು ದುರ್ಬಲಗೊಳಿಸಿ ತುಂಡಾಗುವಂತೆ ಮಾಡುತ್ತದೆ.

ವಾರಕ್ಕೆ ಮೂರು ರಾತ್ರಿಗಳಲ್ಲಾದರೂ ಕೂದಲಿನ ನೆತ್ತಿಯನ್ನು ತೇವಗೊಳಿಸಬೇಕು. ಅದಕ್ಕಾಗಿ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯ ಬಳಕೆ ಸೂಕ್ತವಾದದ್ದು. ರಾತ್ರಿ ಎಣ್ಣೆ ಸವರಿದ ನಂತರ ಮಾರನೆಯ ದಿನ ಬೆಳಿಗ್ಗೆ ಕೂದಲನ್ನು ತೊಳೆಯಬೇಕು. ಪ್ರತಿ ಎಂಟು ವಾರಗಳಿಗೊಮ್ಮೆ ಕೂದಲಿನ ವಿಭಜನೆಯನ್ನು ಅಂದರೆ ಸ್ಪ್ಲಿಟ್ ಎಂಡ್ಸ್ ನ್ನು ಕತ್ತರಿಸಿ ಟ್ರಿಮ್ ಮಾಡಿಕೊಳ್ಳುವುದು ಕೂಡ ಒಳಿತು.

ಸರ್ವರೋಗದ ಮಾರಕ ಜಂತು ಧೂಮಪಾನ. ನೀವು ಧೂಮಪಾನ ಸೇವನೆಯಲ್ಲಿ ಒಳಗೆ ಎಳೆದುಕೊಳ್ಳುವ ಕಾರ್ಬನ್ ಮೊನಾಕ್ಸೈಡ್ ರಕ್ತದಲ್ಲಿ ಆಮ್ಲಜನಕ ಮತ್ತು ಪ್ರಮುಖ ಪೋಷಕಾಂಶವನ್ನು ಕೂದಲಿನ ಕಿರುಚೀಲಗಳಿಗೆ ಸಾಗಿಸುವ ಪ್ರಕ್ರಿಯೆಯನ್ನು ತಡೆಹಿಡಿಯುತ್ತದೆ. ನಿಕೋಟಿನ್ ರಕ್ತನಾಳವನ್ನು ಸಂಕುಚಿತಗೊಳಿಸುತ್ತದೆ. ತಾಜಾವಾಗಿ ಕೂದಲು ಬೆಳೆಯುವುದನ್ನು ತಡೆಯುತ್ತದೆ.

ಅಪರೂಪಕ್ಕೆ ಮಧ್ಯಪಾನ ಮಾಡುವವರು ಹೇಗೋ ಬಚಾಯಿಸಿಕೊಳ್ಳಬಹುದು. ಆದರೆ ದಿನನಿತ್ಯ ಕುಡಿತದ ಚಟವಿರುವವರು ಬೊಕ್ಕತಲೆಯನ್ನು ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆಲ್ಕೋಹಾಲ್ ಕಬ್ಬಿಣದ ಪೂರೈಕೆಯನ್ನು ತಡೆಹಿಡಿಯುತ್ತದೆ ಮತ್ತು ಸತುವಿನ ಹೀರಿಕೊಳ್ಳುವಿಕೆಯ ಮೇಲೂ ಕೂಡ ಪ್ರಭಾವ ಬೀರುತ್ತದೆ. ಇದರಿಂದಾಗಿ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ. ಕೂದಲು ಕೂಡ ನಾಲ್ಕನೇ ಒಂದಂಶದ ನೀರನ್ನು ಹೊಂದಿರುವುದರಿಂದಾಗಿ ಅತಿಯಾದ ಆಲ್ಕೋಹಾಲ್ ಸೇವನೆ ಕೂದಲಿನ ಆರೋಗ್ಯವನ್ನು ಹಾಳುಗೆಡವುತ್ತದೆ.

ಕೂದಲು ಉದುರುವುದಕ್ಕೆ ಒತ್ತಡವು ಪ್ರಮುಖ ಕಾರಣಗಳಲ್ಲೊಂದು. ಕೂದಲಿನ ಕೋಶಕವು ಬೆಳೆಯುವುದಕ್ಕೆ ಶಕ್ತಿಯ ಅಗತ್ಯವಿರುತ್ತದೆ. ಧಾನ್ಯಗಳು, ಮೀನು, ಮಾಂಸದಲ್ಲಿ ಕಂಡುಬರುವ ಕೊಯೆನ್ಜೈಮ್ ಕ್ಯೂ10 ನೆತ್ತಿಯ ಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದರಲ್ಲೂ ಪ್ರಮುಖವಾಗಿ ಇದರ ಕೆಲಸವು ಜೀವಕೋಶಧ ಮೈಕ್ರೋಕಾಂಡ್ರಿಯಾ ಅಥವಾ ಶಕ್ತಿಯ ಕಾರ್ಖಾನೆಯಲ್ಲಿ ಇರುತ್ತದೆ. ಒತ್ತಡವು ಆಕ್ಸಿಡೀಕರಣಕ್ಕೆ ಕಾರಣವಾಗುತ್ತದೆ ಮತ್ತು ಈ ಕೊಯೆನ್ಜೈಮ್ ಕ್ಯೂ10 ಗೆ ಹಾನಿ ಮಾಡುತ್ತದೆ

ಬೊಕ್ಕತಲೆ ತಡೆಯುವುದಕ್ಕಾಗಿ ಆಹಾರದಲ್ಲಿ ಈ ಕೆಳಗಿನ ಅಂಶಗಳು ಇರುವಂತೆ ನೋಡಿಕೊಳ್ಳಿ ವಿಟಮಿನ್ ಬಿ3, ಬಿ5, ಬಿ9 ಮತ್ತು ಇ ಇರುವ ಆಹಾರಗಳಾದ ಕಿತ್ತಳೆ, ಪಾಲಕ್, ಚಿಕನ್, ಮೀನು, ಬ್ರುಕೋಲಿ ಮತ್ತು ಸೋಯಾ ಕಾಳುಗಳನ್ನು ಸೇವಿಸಿ. ಸತುವಿನ ಅಂಶ ಇರುವ ಗೋಧಿ, ಡೈರಿ ವಸ್ತುಗಳು, ಓಟ್ಸ್ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಸೇವಿಸಿ. ಮೆಗ್ನೀಷಿಯಂ ಲಭ್ಯವಿರುವ ಹಾಲು, ಟ್ಯೂನಾ, ಬಾಳೆಹಣ್ಣು, ಗೇರುಬೀಜ ಸೇವಿಸಿ. ಕಬ್ಬಿಣಾಂಶ ಹೇರಳವಾಗಿರುವ ಮೀನು, ಹಸಿರು ಎಲೆಗಳು, ಬಲವರ್ಧಿತ ಸಿರಿಧಾನ್ಯಗಳು ಮತ್ತು ಬೀನ್ಸ್ ಕೂಡಾ ಸೇವಿಸಿ.

Published On - 10:05 pm, Mon, 7 October 19

ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ