ಈ ಆಚರಣೆಗಳನ್ನು ಪಾಲಿಸಿದರೆ ನೀವು ಹಣ ಉಳಿಸೋದು ಗ್ಯಾರಂಟಿ!
ಕೆಲವರು ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲೋದಿಲ್ಲ. ಅಂತಹವರು ಹಣ ಉಳಿಸೋಕೆ ಏನು ಮಾಡಬೇಕು ಅನ್ನೋದೇ ತಿಳಿಯುತ್ತಿಲ್ಲ ಅಂತಾ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸ್ತಾರೆ. ಇಷ್ಟಕ್ಕೂ ಏಕೆ ಹೀಗಾಗುತ್ತೆ? ಕಷ್ಟಪಟ್ಟು ದುಡಿಯುವ ಹಣ ಕೈಯಲ್ಲಿ ಉಳಿಯಲು ಮನೆಯಲ್ಲಿ ಏನೇನು ಮಾಡಬಾರದು? ಇದೆಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ ಹಣ ಉಳಿಸೋಕೆ ಉಪಾಯಗಳು *ಮನೆಯೊಳಗೊಂದು ಕನ್ನಡಿ ನೇತು ಹಾಕಿ. ಬಾಗಿಲಿಗೆ ನೇರವಾಗಿ ಕನ್ನಡಿ ನೇತುಹಾಕಿ. ಮನೆಯೊಳಗೆ ಪ್ರವೇಶಿಸಿದ ನಂತರ ಆ ಕನ್ನಡಿ ಕಾಣಿಸುವಂತಿರಬೇಕು. *ಮುಸ್ಸಂಜೆ ವೇಳೆ ಮನೆಯ ಕಸ ಗುಡಿಸದಿರೋದು ಒಳ್ಳೆಯದು. […]
ಕೆಲವರು ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲೋದಿಲ್ಲ. ಅಂತಹವರು ಹಣ ಉಳಿಸೋಕೆ ಏನು ಮಾಡಬೇಕು ಅನ್ನೋದೇ ತಿಳಿಯುತ್ತಿಲ್ಲ ಅಂತಾ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸ್ತಾರೆ. ಇಷ್ಟಕ್ಕೂ ಏಕೆ ಹೀಗಾಗುತ್ತೆ? ಕಷ್ಟಪಟ್ಟು ದುಡಿಯುವ ಹಣ ಕೈಯಲ್ಲಿ ಉಳಿಯಲು ಮನೆಯಲ್ಲಿ ಏನೇನು ಮಾಡಬಾರದು? ಇದೆಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ
ಹಣ ಉಳಿಸೋಕೆ ಉಪಾಯಗಳು *ಮನೆಯೊಳಗೊಂದು ಕನ್ನಡಿ ನೇತು ಹಾಕಿ. ಬಾಗಿಲಿಗೆ ನೇರವಾಗಿ ಕನ್ನಡಿ ನೇತುಹಾಕಿ. ಮನೆಯೊಳಗೆ ಪ್ರವೇಶಿಸಿದ ನಂತರ ಆ ಕನ್ನಡಿ ಕಾಣಿಸುವಂತಿರಬೇಕು. *ಮುಸ್ಸಂಜೆ ವೇಳೆ ಮನೆಯ ಕಸ ಗುಡಿಸದಿರೋದು ಒಳ್ಳೆಯದು. ಕಸ ಗುಡಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದರೆ ಗುಡಿಸಿದ ಕಸವನ್ನು ಮನೆಯಿಂದ ಆ ರಾತ್ರಿ ಮಟ್ಟಿಗಾದರೂ ಆಚೆ ಹಾಕಬೇಡಿ. *ತಲೆ ಬಾಚಿದ ನಂತರ ಕೂದಲು ಹೊರ ಹಾಕಿ. ಹೆಣ್ಣುಮಕ್ಕಳು ತಲೆ ಬಾಚಿದ ನಂತರ ಉದುರಿದ ಕೂದಲನ್ನು ಬೆರಳೊಳಗೆ ಸುತ್ತಿ ಸುತ್ತಿ ಮನೆಯಲ್ಲೇ ಹಾಕುತ್ತಿರುತ್ತಾರೆ. ಈ ರೀತಿ ಮಾಡಬಾರದು. *ಮುಸ್ಸಂಜೆ ಹೊತ್ತಿನಲ್ಲಿ ಮನೆಯಲ್ಲಿ ದೀಪ ಹಚ್ಚಿರಬೇಕು. ಅಥವಾ ಮನೆಯೊಳಗಿನ ಬಲ್ಬ್ ಹೊತ್ತಿರಬೇಕು. ತೀರಾ ಅನಾರೋಗ್ಯದ ಹೊರತಾಗಿ, ಅನಿವಾರ್ಯ ಸಂದರ್ಭದ ಹೊರತಾಗಿ ಮಲಗೋದು ನಿಷಿದ್ಧ. *ಸಂಜೆಯಾದ ನಂತರ ನಿಮ್ಮ ನೆರೆಹೊರೆಯವರು ಹಾಲು, ಮೊಸರು ಎಂದು ಕೇಳಿಕೊಂಡು ಬರುತ್ತಾರೆ. ಮೊಸರು ಕೊಟ್ಟರೆ ಕೊಟ್ಟವರಿಗೆ ಕೇಡಾಗೋ ಸಾಧ್ಯತೆ ಇರುತ್ತೆ. ಹಾಗೇ ಹಾಲು ಪಡೆದವರಿಗೆ ಅವರಿಗೆ ಒಳ್ಳೆಯದಾಗುವುದಿಲ್ಲ ಎಂಬ ನಂಬಿಕೆ ಇದೆ. *ಮನೆಯೊಳಗೆ ಪಾದರಕ್ಷೆ ಧರಿಸಿ, ಓಡಾಡುವುದು ಉತ್ತಮವಲ್ಲ. *ಹೊರಗಿಂದ ಮನೆಯೊಳಗೆ ಬರುವವರು ಕಡ್ಡಾಯವಾಗಿ ಕೈ-ಕಾಲುಗಳನ್ನು ತೊಳೆಯಲೇಬೇಕು. ಇನ್ನು ಶೌಚಾಲಯಕ್ಕೆ ಹೋದ ನಂತರ ಕೂಡ ಕೈ ಕಾಲು ತೊಳೆದು, ಕಣ್ಣಿಗೆ ನೀರು ಎರಚಿಕೊಳ್ಳಬೇಕು. *ಮಂಗಳವಾರ, ಶುಕ್ರವಾರ ಯಾರಿಗೂ ಹಣ ನೀಡದೇ ಇರೋದು ಒಳ್ಳೆಯದು. ಅನಿವಾರ್ಯ ಪರಿಸ್ಥಿತಿಯನ್ನು ಹೊರತುಪಡಿಸಿ ಈ ನಿಯಮ ಪಾಲಿಸಿ. *ಅಮಾವಾಸ್ಯೆಯ ದಿನವೂ ಯಾರಿಗೂ ಸಾಲ ಕೊಡಬಾರದು.
ಹಣವನ್ನು ಹತೋಟಿಯಲ್ಲಿಡಲು ಇವೆಲ್ಲಾ ಒಳ್ಳೆಯ ಪದ್ಧತಿಗಳು. ನಮಗಾಗಲಿ, ಇತರರಿಗಾಗಲೀ, ಆಪತ್ತಿನಲ್ಲಿ ಈ ನಿಯಮಗಳು ಕೆಲಸಕ್ಕೆ ಬರೋದಿಲ್ಲ. ಇನ್ನುಳಿದಂತೆ ಈ ನಿಯಮಗಳನ್ನು ಅನುಸರಿಸಿದ್ರೆ ಹಣವನ್ನು ಉಳಿಸಬಹುದು. ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಇಂತಹ ಆಚರಣೆಗಳ ಹಿಂದೆ ಸದುದ್ದೇಶ ಇರುತ್ತೆ. ಅದನ್ನು ಅರಿತು ಆಚರಿಸಿದ್ರೆ ಸುಂದರ ಜೀವನ ನಮ್ಮದಾಗುತ್ತೆ.
Published On - 2:09 pm, Mon, 2 December 19