ನವರಾತ್ರಿಯ 8ನೇ ದಿನ ಮಹಾಗೌರಿ ಆರಾಧನೆಯಿಂದ ಸಿಗುವ ಫಲಗಳೇನು?

ನವರಾತ್ರಿಯ 8ನೇ ದಿನ ಮಹಾಗೌರಿ ಆರಾಧನೆಯಿಂದ ಸಿಗುವ ಫಲಗಳೇನು?

ನವದುರ್ಗೆಯರಲ್ಲಿ ಮಹಾಗೌರಿಯದ್ದು ಎಂಟನೇ ರೂಪ. ಈಕೆ ಸಾಕ್ಷಾತ್ ಪರಮೇಶ್ವರನಿಗೆೇ ಶಕ್ತಿ ನೀಡಿದ ಮಹಾನ್ ತಾಯಿ. ಪಾರ್ವತಿಯ ರೂಪದಲ್ಲಿ ಶಿವನನ್ನು ಪತಿಯಾಗಿ ಪಡೆಯಲು ತಪಸ್ಸು ಮಾಡಿದ್ದಳು. ಮಹಾಗೌರಿಯನ್ನು ಆದಿಶಕ್ತಿಯ ಪ್ರತಿರೂಪ ಎನ್ನಲಾಗುತ್ತೆ.

ಈ ದೇವಿಯ ರೂಪ ಅತ್ಯಂತ ವಿಶೇಷ. ಶಾಂತ ಸ್ವರೂಪಿಯಾದ ಈಕೆ ವೃಷಭವಾಹನೆ. ಶ್ವೇತವರ್ಣೆಯಾಗಿ ಕಂಗೊಳಿಸೋ ಈ ದೇವಿ ಬಿಳಿಯ ವಸ್ತ್ರಾಭರಣಗಳನ್ನು ತೊಟ್ಟಿರ್ತಾಳೆ. ಚತುರ್ಭುಜಗಳುಳ್ಳ ಮಹಾಗೌರಿ ಅಭಯಮುದ್ರೆ, ತ್ರಿಶೂಲ, ಡಮರುಗ, ವರಮುದ್ರೆ ಸ್ವರೂಪಿ. ನೋಡಲು ಸುಂದರರೂಪಿಯಾಗಿ ಕಾಣ್ತಾಳೆ. ಮಹಾಗೌರಿ ಶುಂಭನಿಶುಂಭರ ವಧೆ ಮಾಡಿ, ದೇವಾನುದೇವತೆಗಳನ್ನು ರಕ್ಷಿಸ್ತಾಳೆ. ನವರಾತ್ರಿಯ ಎಂಟನೇ ದಿನ ಅಂದ್ರೆ ದುರ್ಗಾಷ್ಟಮಿಯಂದು ಮಹಾಗೌರಿ ಪೂಜೆಗೆ ವಿಶೇಷ ಮಹತ್ವ ಇದೆ. ಈ ದಿನ ಮಹಾಗೌರಿಯನ್ನು ಮಂತ್ರಸಹಿತವಾಗಿ ಪೂಜಿಸಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಅನ್ನೋ ನಂಬಿಕೆ ಧರ್ಮಶಾಸ್ತ್ರದಲ್ಲಿದೆ.

 

ಮಹಾಗೌರಿ ಮಂತ್ರ

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ

ದುರ್ಗಾಷ್ಟಮಿಯ ದಿನ ಮಹಾಗೌರಿಯನ್ನು ಉಪಾಸನೆ ಮಾಡುವ ಪರಂಪರೆ ಅನಾದಿಕಾಲದಿಂದಲೂ ಇದೆ. ಈ ದೇವಿಯ ಆರಾಧನೆ, ಕೃಪೆಯಿಂದ ಲೌಕಿಕ ಮತ್ತು ಅಲೌಕಿಕ ಸುಖ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ.

 

ಮಹಾಗೌರಿ ಪೂಜೆಯ ಫಲಗಳು

* ಈಕೆ ಶೀಘ್ರ ಫಲದಾಯಿನಿ
* ದುಃಖ ದೂರ ಮಾಡ್ತಾಳೆ
* ಭಕ್ತರಲ್ಲಿರುವ ಕೆಟ್ಟ ಬುದ್ಧಿಯನ್ನು ಹೋಗಲಾಡಿಸ್ತಾಳೆ
* ಪೂರ್ವಜನ್ಮದ ಪಾಪ ಪರಿಹರಿಸ್ತಾಳೆ
* ಭಕ್ತರ ಕಷ್ಟ ದೂರ ಮಾಡ್ತಾಳೆ
* ಇವಳ ಕೃಪೆಯಿಂದ ಸಾಧ್ಯವಿಲ್ಲದ ಕಾರ್ಯಗಳು ನೆರವೇರುತ್ತವೆ
* ದುಷ್ಟಶಕ್ತಿಗಳನ್ನು ನಾಶಮಾಡ್ತಾಳೆ

ದುರ್ಗಾಷ್ಟಮಿ ಜಗಜ್ಜನನಿಯಾದ ಮಹಾಗೌರಿಗೆ ವಿಶೇಷ ದಿನ. ಇಂದು ಮಹಾಗೌರಿಯ ಧ್ಯಾನ, ಸ್ಮರಣೆ, ಪೂಜೆಆರಾಧನೆ ಮಾಡುವುದು ಅತ್ಯಂತ ಶ್ರೇಯಸ್ಕರ. ಇವಳ ಮಹಿಮೆಯನ್ನು ಪುರಾಣಗಳಲ್ಲಿ ಹಾಡಿ ಹೊಗಳಿದ್ದಾರೆ. ಯಾರು ಮಹಾಗೌರಿಯನ್ನು ಪೂಜಿಸ್ತಾರೋ ಅವರು ಸಕಲ ಸುಖಸಂಪತ್ತನ್ನು ಪಡೆಯಬಹುದು ಎಂಬ ಉಲ್ಲೇಖ ಪುರಾಣಗಳಲ್ಲಿ ಇದೆ.

Click on your DTH Provider to Add TV9 Kannada