AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಹುತ್ತ, ಜೇನುಗೂಡು ಕಟ್ಟುವುದರಿಂದ ಸಿಗುವ ಫಲವೇನು? ಅದರ ಸಂಕೇತವೇನು?

ಮನೆಯ ಒಳಗೆ, ಹೊರಗೆ ಎರಡೂ ಕಡೆ ಏಕಕಾಲದಲ್ಲಿ ಜೇನುಗೂಡು ಕಟ್ಟಬಾರದು. ಇದು ನಮಗೆ ಅಪಾಯ ಹಾಗೂ ದುರಾದೃಷ್ಟದ ಮುನ್ಸೂಚನೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಮನೆಯಲ್ಲಿ ಹುತ್ತ, ಜೇನುಗೂಡು ಕಟ್ಟುವುದರಿಂದ ಸಿಗುವ ಫಲವೇನು? ಅದರ ಸಂಕೇತವೇನು?
ಜೇನುಗೂಡು
ಆಯೇಷಾ ಬಾನು
ಆಯೇಷಾ ಬಾನು|

Updated on: Apr 23, 2021 | 6:25 AM

Share

ನೆಮ್ಮದಿಯಿಂದ ಜೀವನ ಮಾಡಲು ತಮ್ಮದೇ ಆದ ಒಂದು ಸ್ವಂತ ಮನೆಗಳು ಇರಬೇಕು ಎಂದು ಎಲ್ಲರೂ ಆಸೆ ಪಡ್ತಾರೆ. ಅಷ್ಟೇ ಅಲ್ಲ, ಆ ಮನೆಯಲ್ಲಿ ಸದಾ ಸುಖ-ಸಂತೋಷ, ನೆಮ್ಮದಿ ಇರಬೇಕು ಎಂದು ಆಸೆ ಪಡ್ತಾರೆ. ಸುಖ ನೆಮ್ಮದಿ ಬೇಕು ಅಂದ್ರೆ ನಾವು ಕಟ್ಟುವ ಮನೆಯ ವಾಸ್ತು ಸರಿ ಇರಬೇಕು ಎನ್ನಲಾಗುತ್ತೆ. ಯಾವುದೇ ಮನೆ ಕಟ್ಟುವಾಗಲೂ ವಾಸ್ತು ನೋಡಿಯೇ ಕಟ್ಟುತ್ತಾರೆ. ಇದು ಹಿಂದಿನ ಕಾಲದಿಂದಲೂ ನೆಡೆದುಕೊಂಡು ಬಂದಿರುವ ಪದ್ಧತಿ ಮತ್ತು ನಂಬಿಕೆ. ಹೀಗೆ ವಾಸ್ತು ನೋಡಿ ಕಟ್ಟಿದ ಮನೆಯಲ್ಲೂ ಕೆಲವೊಮ್ಮೆ ನಾನಾ ವಿಧವಾದ ಅಶುಭಗಳು, ಅಪಶಕುನಗಳು ನಡೆಯೋದುಂಟು. ಹೀಗೆ ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ನಡೆಯುವ ಕೆಲವೊಂದು ಘಟನೆಗಳು ಮುಂಬರುವ ಶುಭ, ಅಶುಭ ಘಟನೆಗಳನ್ನು ಸೂಚಿಸುತ್ತವೆ ಎನ್ನುವ ನಂಬಿಕೆ ಇದೆ.

ಹೀಗೆ ಮುನ್ನೆಚ್ಚರಿಕೆ ಸಿಗುವುದರಿಂದ ತಪ್ಪುಗಳು ಆಗದಂತೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತೆ. ಹೀಗೆ ಸೂಚನೆ ನೀಡುವ ವಿಚಾರಕ್ಕೆ ಬಂದ್ರೆ ಮನೆಯಲ್ಲಿ ಹುತ್ತ ಬೆಳೆಯುವುದು ಅಥವಾ ಜೇನುಗೂಡು ಕಟ್ಟುವುದು ಪ್ರಮುಖವಾದುದು. ಇಷ್ಟಕ್ಕೂ, ಮನೆಯಲ್ಲಿ ಹುತ್ತ, ಜೇನುಗೂಡುಗಳು ಕಟ್ಟೀದ್ರಿಂದ ಸಿಗುವ ಫಲವೇನು ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ. ಹಾಗೆಯೇ ಮನೆಯ ದಿಕ್ಕಿಗೆ ಜೇನುಗೂಡು ಕಟ್ಟಿದರೆ ಶುಭ? ಯಾವ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ ಅಶುಭ ಅನ್ನೋ ಲೆಕ್ಕಾಚಾರ ಕೂಡ ನಡೆಯುತ್ತೆ. ಹಾಗಿದ್ರೆ ಬನ್ನಿ ಆ ಬಗ್ಗೆ ಇಲ್ಲಿ ತಿಳಿದುಕೊಳ್ಳಿ..

ಜೇನುಗೂಡು ಕಟ್ಟುವುದರ ಫಲಗಳೇನು? 1. ಮನೆಯ ಪೂರ್ವ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಉತ್ತಮ ಫಲ. 2.ಆಗ್ನೇಯದಲ್ಲಿ ಕಟ್ಟಿದರೆ ಆಪ್ತರು ಮನೆಗೆ ಆಗಮಿಸುತ್ತಾರೆ. 3.ದಕ್ಷಿಣದಲ್ಲಿ ಜೇನು ಕಟ್ಟಿದರೆ ಶುಭ ಫಲ. 4.ನೈರುತ್ಯದಲ್ಲಿ ಕಟ್ಟಿದರೆ ದಾರಿದ್ರ್ಯ, ಕಷ್ಟಗಳು ಬರುವ ಸಂಭವ. 5.ಪಶ್ಚಿಮ ದಿಕ್ಕಿನಲ್ಲಿ ಕಟ್ಟಿದರೆ ಶುಭ ಸೂಚನೆ. 6ವಾಯವ್ಯದಲ್ಲಿ ಕಟ್ಟಿದರೆ ಕೆಲಸ ಬೇಗ ಕೈಗೂಡುತ್ತೆ. 7.ಉತ್ತರ ದಿಕ್ಕಿನಲ್ಲಿ ಜೇನು ಕಟ್ಟಿದ್ರೆ ದ್ರವ್ಯ ಪ್ರಾಪ್ತಿಯಾಗುತ್ತೆ. 8.ಈಶಾನ್ಯದಲ್ಲಿ ಜೇಣು ಕಟ್ಟಿದ್ರೆ ಶುಭ . 9.ಮನೆಯ ಮಧ್ಯಭಾಗದಲ್ಲಿ ಜೇನು ಕಟ್ಟಿದ್ರೆ ಸ್ತ್ರೀಯರಿಂದ ಶುಭ.

ಇನ್ನು ಮನೆಯ ಒಳಗೆ, ಹೊರಗೆ ಎರಡೂ ಕಡೆ ಏಕಕಾಲದಲ್ಲಿ ಜೇನುಗೂಡು ಕಟ್ಟಬಾರದು. ಇದು ನಮಗೆ ಅಪಾಯ ಹಾಗೂ ದುರಾದೃಷ್ಟದ ಮುನ್ಸೂಚನೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಇದನ್ನೂ ಓದಿ: ದೇವರ ಸ್ತೋತ್ರವನ್ನು ಪಠಿಸಿದ್ರೆ ಆಗುವ ಅನುಕೂಲವೇನು?

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್