AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amavasya Rituals: ಅಮಾವಾಸ್ಯೆ ದಿನ ಪಿತೃ ದೋಷ ನಿವಾರಣೆಗೆ ಗಾಯತ್ರಿ ಜಪ ಮಾಡಿ

ಅಮಾವಾಸ್ಯೆಯು ಹಿಂದೂಗಳಲ್ಲಿ ಹೆಚ್ಚಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ಮಂತ್ರ ಪಠಿಸುವುದು, ಹವನ ಮಾಡುವುದು, ದಾನದಂತಹ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಮಾಡಲು ಶುಭವಾಗಿದೆ. ಇದರ ಹೊರತಾಗಿ ಅಮಾವಾಸ್ಯೆಯಂದು ಪೂರ್ವಜರನ್ನು ಪೂಜಿಸಲು ಮೀಸಲಿಡಲಾಗಿದೆ ಆದ್ದರಿಂದ ಜನರು ಪಿತೃ ದೋಷದ ನಿವಾರಣೆ ಮಾಡಿಕೊಳ್ಳಲು ಮತ್ತು ಪೂಜೆಯನ್ನು ಮಾಡಲು ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.

Amavasya Rituals: ಅಮಾವಾಸ್ಯೆ ದಿನ ಪಿತೃ ದೋಷ ನಿವಾರಣೆಗೆ ಗಾಯತ್ರಿ ಜಪ ಮಾಡಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 09, 2024 | 5:04 PM

Share

ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳು ಕೃಷ್ಣ ಪಕ್ಷದ ಕೊನೆಯ ದಿನವನ್ನು ಅಮಾವಾಸ್ಯೆಯೆಂದು ಆಚರಣೆ ಮಾಡಲಾಗುತ್ತದೆ. ಇನ್ನು ಧರ್ಮ ಗ್ರಂಥಗಳಲ್ಲಿ ಅಮಾವಾಸ್ಯೆ ತಿಥಿ ಬಹಳ ಮುಖ್ಯವಾಗಿದ್ದು, ಈ ದಿನವನ್ನು ಪಿತೃಗಳ ದಿನ ಎಂದು ನಂಬಲಾಗಿದೆ. ಮಾರ್ಚ್ ತಿಂಗಳ ಅಂದರೆ ಮಾಘ ಮಾಸದ ಅಮಾವಾಸ್ಯೆಯನ್ನು ಮಾರ್ಚ್ 10 ರಂದು, ಭಾನುವಾರ ಆಚರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಅಮಾವಾಸ್ಯೆಯು ಹಿಂದೂಗಳಲ್ಲಿ ಹೆಚ್ಚಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ಮಂತ್ರ ಪಠಿಸುವುದು, ಹವನ ಮಾಡುವುದು, ದಾನದಂತಹ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಮಾಡಲು ಶುಭವಾಗಿದೆ. ಇದರ ಹೊರತಾಗಿ ಅಮಾವಾಸ್ಯೆಯಂದು ಪೂರ್ವಜರನ್ನು ಪೂಜಿಸಲು ಮೀಸಲಿಡಲಾಗಿದೆ ಆದ್ದರಿಂದ ಜನರು ಪಿತೃ ದೋಷದ ನಿವಾರಣೆ ಮಾಡಿಕೊಳ್ಳಲು ಮತ್ತು ಪೂಜೆಯನ್ನು ಮಾಡಲು ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.

ಈ ತಿಂಗಳ ಮಾರ್ಚ್ 10 ರಂದು ಅಮಾವಾಸ್ಯೆ ತಿಥಿಯನ್ನು ಆಚರಣೆ ಮಾಡಲಾಗುತ್ತದೆ. ಮಾಘ ಅಮಾವಾಸ್ಯೆ ಮಾ. 9 ರಂದು ಸಂಜೆ 06:17ಕ್ಕೆ ಪ್ರಾರಂಭವಾಗಿ, ಮಾ.10 ರಂದು ಮಧ್ಯಾಹ್ನ 02:29ಕ್ಕೆ ಅಮಾವಾಸ್ಯೆ ತಿಥಿ ಕೊನೆಗೊಳ್ಳುತ್ತದೆ.

ಮಾಘ ಅಮಾವಾಸ್ಯೆ ಮಹತ್ವ:

ಮಾಘ ಅಮಾವಾಸ್ಯೆ ಹಿಂದೂ ಧರ್ಮದಲ್ಲಿ ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ, ಭಕ್ತರು ಗಂಗಾ ನದಿಯಲ್ಲಿ ಸ್ನಾನ ಮಾಡಲು, ಹವನ ಮತ್ತು ಯಜ್ಞ- ಯಾಗಾದಿಗಳನ್ನು ಮಾಡಲು ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಮತ್ತು ಈ ದಿನದಂದು ಪಿತೃ ಪೂಜೆ ಮಾಡುವ ಮೂಲಕ ಪೂರ್ವಜರ ಆಶೀರ್ವಾದವನ್ನು ಪಡೆಯುತ್ತಾರೆ. ಅಲ್ಲದೆ ಈ ದಿನ ಜನರು ಶ್ರಾದ್ದ ಆಚರಣೆಗಳನ್ನು ಕೂಡ ಮಾಡುತ್ತಾರೆ ಮತ್ತು ಆಹಾರ ದಾನ ಮಾಡುವ ಮೂಲಕ ಪುಣ್ಯ ಫಲಗಳನ್ನು ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ: ಹಿಂದೂ ಪುರಾಣದ ಪ್ರಕಾರ ರಾತ್ರಿ ಗೂಬೆಯನ್ನು ನೋಡಿದರೆ ಶುಭವೋ ಅಶುಭವೋ?

ಮಾಘ ಅಮಾವಾಸ್ಯೆಯ ಆಚರಣೆಗಳು:

  1. ಮುಂಜಾನೆ ಎದ್ದು ಸ್ನಾನ ಮಾಡಿ.
  2. ಈ ದಿನ ಪಿತೃದೋಷ ನಿವಾರಣೆಗೆ ಅಗತ್ಯವಿರುವ ಪೂಜೆಗಳನ್ನು ದೇವಸ್ಥಾನಗಳಲ್ಲಿ ಮಾಡಿಸಬಹುದು.
  3. ಅಮಾವಾಸ್ಯೆಯ ದಿನ ದಾನ ಮಾಡುವುದು ತುಂಬಾ ಒಳ್ಳೆಯದು. ಅಗತ್ಯವಿರುವ ಜನರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡಬಹುದು.
  4. ಈ ದಿನ ತಪ್ಪದೇ ಭಗವದ್ಗೀತೆ ಮತ್ತು ರಾಮಚರಿತಮಾನಸಗಳನ್ನು ಓದುವುದರಲ್ಲಿ ತೊಡಗಿಸಿಕೊಳ್ಳಬಹುದು.
  5. ಈ ದಿನ ಪಿತೃ ದೋಷ ಮತ್ತು ದುಷ್ಟ ಶಕ್ತಿಗಳ ನಿವಾರಣೆಗೆ ಗಾಯತ್ರಿ ಜಪವನ್ನು ಮಾಡಬಹುದು. ಇದರಿಂದ ಜಾತಕ ದೋಷವು ನಿವಾರಣೆಯಾಗುತ್ತದೆ.
  6. ಈ ದಿನ ಮಾಂಸಾಹಾರ ತ್ಯಜಿಸುವುದು ಒಳ್ಳೆಯದು.
  7. ಮನೆಯ ಬಳಿ ಶಿವನ ದೇವಾಲಯ ಇರುವವರು ದಿನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ರುದ್ರಾಭಿಷೇಕ ಮಾಡಿಸಿ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ.
  8. ಆರ್ಥಿಕ ನಷ್ಟ ಅನುಭವಿಸುತ್ತಿರುವವರು ಶಿವನಿಗೆ 4 ಅಮಾವಾಸ್ಯೆಯಂದು ಬಿಲ್ವಪತ್ರೆಯನ್ನು ಅರ್ಪಿಸಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ