- Kannada News Spiritual astro tips keep these five things in money vault of your house to get the blessings of goddess lakshmi
‘ಧನಾ’ತ್ಮಕತೆ ವೃದ್ಧಿ – ಮನೆಯ ತಿಜೋರಿಯಲ್ಲಿ ಈ ವಸ್ತುಗಳನ್ನಿಟ್ಟು ಪೂಜಿಸಿದರೆ ಧನ ಸಂಪತ್ತು ವೃದ್ಧಿಸುತ್ತದೆ
Astro Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ನಿಯಮಗಳನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಧನ ಸಂಪತ್ತು ವೃದ್ಧಿಸುತ್ತಿದೆ. ಲಕ್ಷ್ಮಿದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ಜೊತೆಗೆ ಲಕ್ಷ್ಮಿ ಪೂಜೆಯ ವೇಳೆ ಕರ್ಪೂರವನ್ನು ತಿಜೋರಿ ಇರುವ ಕೋಣೆಯಲ್ಲಿ ಹಚ್ಚುತ್ತಿದ್ದರೆ ನಕಾರಾತ್ಮಕತೆ ದೂರವಾಗಿ ‘ಧನಾ’ತ್ಮಕತೆ ವೃದ್ಧಿಸುತ್ತದೆ.
Updated on:Jan 08, 2022 | 6:26 AM

ಲಕ್ಷ್ಮಿ ಪೂಜೆಯಲ್ಲಿ ವೀಳ್ಯದೆಲೆ -ಅಡಿಕೆ (Betel Nut): ತಿಜೋರಿಯಲ್ಲಿ ಒಂದು ಚಿಕ್ಕ ಅಡಿಕೆ ಇಟ್ಟಿರಿ. ಇದನ್ನು ಆಗಾಗ ಬದಲಾಯಿಸುತ್ತಿರಿ. ಇದರ ಜೊತೆಗೆ ಎರಡು ವೀಳ್ಯದೆಲೆಗಳನ್ನು ಗಣೇಶ ಮತ್ತು ಗೌರಿಯ ರೂಪವೆಂದು ಭಾವಿಸಿ, ತಿಜೋರಿಯಲ್ಲಿ ಇಡಿ. ಅಡಿಕೆಯನ್ನು ಇಡುವ ಮೊದಲು ಈ ಎರಡು ವೀಳ್ಯದೆಲೆಗಳಿಗೆ ಪೂಜೆ ಮಾಡಿ. ಇದರಿಂದ ಲಕ್ಷ್ಮಿ ದೇವಿ ಮನೆಯಲ್ಲಿ ಕಾಯಂ ಆಗಿ ನೆಲೆಯೂರುತ್ತಾಳೆ.

ಲಕ್ಷ್ಮಿ ಪೂಜೆಯಲ್ಲಿ ಗೋಮತಿ ಚಕ್ರ (Gomti Chakra): ಸಿದ್ದ ಗೋಮತಿ ಚಕ್ರವನ್ನು ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಸುತ್ತಿಟ್ಟು ತಿಜೋರಿಯಲ್ಲಿಡಬೇಕು. ಇದರಿಂದ ನಿಮಗೆ ಎಂದಿಗೂ ಹಣದ ಕೊರತೆ ಎದುರಾಗದು. ವ್ಯಾಪಾರದಲ್ಲಿ ಸದಾ ಲಕ್ಷ್ಮಿ ಕಟಾಕ್ಷ ಲಭಿಸುತ್ತಿರುತ್ತದೆ.

ಲಕ್ಷ್ಮಿ ಪೂಜೆಯಲ್ಲಿ ಕುಬೇರ ಯಂತ್ರ (Kuber Yantra): ನಿಮ್ಮ ಮನೆಯಲ್ಲಿ ತಿಜೋರಿ ತುಂಬಬೇಕು ಅಂದರೆ ಕುಬೇರ ಯಂತ್ರ ಬಳಸಿ. ಕುಬೇರ ಯಂತ್ರ ಅಥವಾ ಶ್ರೀ ಯಂತ್ರವನ್ನು ತಿಜೋರಿ ಇಡಬೇಕು. ವಾರಕ್ಕೊಮ್ಮೆ ಯಂತ್ರಕ್ಕೆ ನಿಯಮಿತವಾಗಿ ಪೂಜೆ ಸಲ್ಲಿಸುತ್ತಿರಬೇಕು.

ಅರಿಶಿನ ಕೊಂಬು (Turmeric Root): ಕುಟುಂಬದವರ ಮೇಲೆ ಲಕ್ಷ್ಮಿ ದೇವಿ ಕೃಪಾಕಟಾಕ್ಷ ಬೀರಬೇಕು ಅಂತಾದರೆ ತಿಜೋರಿ ಅಥವಾ ಹಣವನ್ನು ಒಡುವ ಕೊಠಡಿಯಲ್ಲಿ ಅರಿಶಿನದ ಕೊಂಬನ್ನು ಇಟ್ಟಿರಬೇಕು. ಇದರಿಂದ ಧನ ಲಕ್ಷ್ಮಿ ಹೇರಳವಾಗಿ ಪ್ರಾಪ್ತಿಯಾಗುತ್ತದೆ.

ಪ್ರದಕ್ಷಿಣಾಕಾರ ಶಂಖ (Clockwise Conch): ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕಾಗಿ ಪ್ರದಕ್ಷಿಣಾಕಾರ ಶಂಖವನ್ನು ತಿಜೋರಿಯಲ್ಲಿ ಇಡಬೇಕು. ಇದರಿಂದ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ.
Published On - 6:06 am, Sat, 8 January 22









