AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Car Vastu Tips: ಸುರಕ್ಷಿತ ಪ್ರಯಾಣಕ್ಕಾಗಿ ಕಾರಿನಲ್ಲಿ ಯಾವ ದೇವರ ವಿಗ್ರಹ ಇಡಬೇಕು? ಇಲ್ಲಿದೆ ವಾಸ್ತು ಸಲಹೆಗಳು!

ನಿಮ್ಮ ಕಾರು ಕೂಡ ಎರಡನೇ ಮನೆಯಂತೆ, ಅಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ವಾಸ್ತು ನಿಯಮಗಳು ಮುಖ್ಯ. ಕಾರಿನಲ್ಲಿ ದೇವರ ವಿಗ್ರಹಗಳನ್ನು ಇಡುವುದರಿಂದ ಸುರಕ್ಷತೆ, ಧೈರ್ಯ ಮತ್ತು ಶಾಂತಿ ದೊರೆಯುತ್ತದೆ. ಗಣೇಶ ಮತ್ತು ಹನುಮಂತನ ವಿಗ್ರಹಗಳು ವಿಶೇಷವಾಗಿ ಶುಭ. ಆದರೆ, ವಿಗ್ರಹಗಳನ್ನು ಇಡುವಾಗ ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಅನಿವಾರ್ಯ.

Car Vastu Tips: ಸುರಕ್ಷಿತ ಪ್ರಯಾಣಕ್ಕಾಗಿ ಕಾರಿನಲ್ಲಿ  ಯಾವ ದೇವರ ವಿಗ್ರಹ ಇಡಬೇಕು? ಇಲ್ಲಿದೆ ವಾಸ್ತು ಸಲಹೆಗಳು!
ಕಾರಿನಲ್ಲಿ ದೇವರ ಮೂರ್ತಿ ಇಡಬಹುದೇ?Image Credit source: Pinterest
ಅಕ್ಷತಾ ವರ್ಕಾಡಿ
|

Updated on:Jun 16, 2026 | 5:01 PM

Share

ವಾಸ್ತು ಶಾಸ್ತ್ರವು ದೈನಂದಿನ ಜೀವನದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ. ಮನೆ, ಕಚೇರಿ ಅಥವಾ ವ್ಯಾಪಾರ ಸ್ಥಳ ಮಾತ್ರವಲ್ಲದೆ, ನಾವು ದಿನನಿತ್ಯ ಪ್ರಯಾಣಿಸುವ ಕಾರಿನಲ್ಲಿಯೂ ವಾಸ್ತು ನಿಯಮಗಳು ಅನ್ವಯಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಕಾರು ನಮ್ಮ ಎರಡನೇ ಮನೆಯಂತಿದ್ದಾಗ, ಅಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡುವುದು ಮುಖ್ಯ. ಹಿಂದೂ ಧರ್ಮದ ಪ್ರಕಾರ ದೇವರು ಸರ್ವವ್ಯಾಪಿಯಾಗಿದ್ದಾನೆ, ಆದ್ದರಿಂದ ಕಾರಿನಲ್ಲಿ ದೇವರ ವಿಗ್ರಹವನ್ನು ಇಡುವುದು ತಪ್ಪಲ್ಲ. ಮನಸ್ಸಿನಲ್ಲಿ ಭಕ್ತಿ ಇದ್ದರೆ, ಆ ವಿಗ್ರಹವು ಪ್ರಯಾಣದ ಸಮಯದಲ್ಲಿ ರಕ್ಷಣೆ, ಧೈರ್ಯ ಮತ್ತು ಶಾಂತಿಯ ಸಾಧನವಾಗುತ್ತದೆ.

ಕಾರಿನಲ್ಲಿ ಯಾವ ದೇವರ ವಿಗ್ರಹವನ್ನು ಇಡಬೇಕು?

ವಾಸ್ತು ತಜ್ಞರ ಪ್ರಕಾರ, ಕಾರಿನ ಡ್ಯಾಶ್‌ಬೋರ್ಡ್ (Dashboard) ವಿಗ್ರಹವನ್ನು ಇರಿಸಲು ಅತ್ಯಂತ ಸರಿಯಾದ ಸ್ಥಳವಾಗಿದೆ. ಆಧುನಿಕ ಕಾಲದಲ್ಲಿ ಗಣೇಶ, ವೆಂಕಟೇಶ್ವರ, ಆಂಜನೇಯ, ಶಿವ-ಪಾರ್ವತಿಯರ ವಿಗ್ರಹಗಳನ್ನು ಇಡುವುದು ಸಾಮಾನ್ಯವಾಗಿದೆ. ಆದರೆ ನಿರ್ದಿಷ್ಟವಾಗಿ ಕೆಳಗಿನ ವಿಗ್ರಹಗಳನ್ನು ಇಡುವುದು ಹೆಚ್ಚು ಶುಭ ಎನ್ನಲಾಗುತ್ತದೆ:

ವಿಘ್ನವಿನಾಶಕ ಗಣೇಶ:

ಅಡೆತಡೆಗಳನ್ನು ನಿವಾರಿಸುವ ಗಣೇಶನ ಸಣ್ಣ ವಿಗ್ರಹವನ್ನು ವಾಹನದಲ್ಲಿ ಸ್ಥಾಪಿಸಬೇಕು. ಆತ ಪ್ರಯಾಣದಲ್ಲಿ ಎದುರಾಗುವ ಎಲ್ಲಾ ಕಷ್ಟಗಳು ಮತ್ತು ಸಮಸ್ಯೆಗಳನ್ನು ದೂರ ಮಾಡುತ್ತಾನೆ. ಗಣೇಶನ ವಿಗ್ರಹವನ್ನು ಇಡುವಾಗ ದೇವರ ಬೆನ್ನಿನ ಭಾಗ ನಮಗೆ ಕಾಣಿಸಬಾರದು (ಏಕೆಂದರೆ ಗಣೇಶನ ಬೆನ್ನಿನಲ್ಲಿ ದಾರಿದ್ರ್ಯ ಇರುತ್ತದೆ ಎಂಬ ನಂಬಿಕೆಯಿದೆ). ಆದ್ದರಿಂದ ಎರಡು ಕಡೆ ಮುಖವಿರುವ (ಡಬಲ್ ಸೈಡ್) ಗಣೇಶನ ವಿಗ್ರಹವನ್ನು ಇಡುವುದು ಶ್ರೇಷ್ಠ.

ವಾಯುಪುತ್ರ ಹನುಮಂತ:

ನಿಮ್ಮ ಕಾರಿನಲ್ಲಿ ಯಾವಾಗಲೂ ಗಾಳಿಯಲ್ಲಿ ಹಾರುತ್ತಿರುವಂತೆ ಅಥವಾ ತೂಗಾಡುತ್ತಿರುವಂತೆ ಇರುವ ಹನುಮನ ವಿಗ್ರಹವನ್ನು ಇಟ್ಟುಕೊಳ್ಳುವುದು ಅತ್ಯಂತ ಶುಭ. ಹನುಮಂತನನ್ನು ವಾಯುವಿನ ಮೊದಲ ಅವತಾರವೆಂದು ಪರಿಗಣಿಸಲಾಗುತ್ತದೆ. ವಾಹನಗಳು ನಮ್ಮನ್ನು ಗಾಳಿಯ ವೇಗದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವುದರಿಂದ, ಹನುಮಂತನ ಚಿತ್ರ ಪ್ರಯಾಣಕ್ಕೆ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಕಾರಿನ ಇತರ ಭಾಗಗಳಲ್ಲಿ ಮೂರ್ತಿ ಇಡುವಾಗ ಗಮನಿಸಿ:

  • ಹಿಂಬದಿಯ ಕನ್ನಡಿ: ಕನ್ನಡಿಗೆ ದೇವರ ಸಣ್ಣ ಲಾಕೆಟ್ ಅಥವಾ ಫೋಟೋವನ್ನು ನೇತುಹಾಕುವುದರಿಂದ, ಅದು ಹಿಂದಿನಿಂದ ಬರುವ ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ.
  • ಸೀಟಿನ ಹಿಂಭಾಗ: ಒಂದು ವೇಳೆ ನಿಮ್ಮ ಬಳಿ ದೊಡ್ಡ ಪ್ರತಿಮೆಗಳಿದ್ದರೆ, ಅವುಗಳನ್ನು ಡ್ಯಾಶ್‌ಬೋರ್ಡ್‌ನಲ್ಲಿ ಇಡಬೇಡಿ. ಬದಲಿಗೆ ಕಾರಿನ ಹಿಂಭಾಗದಲ್ಲಿ ಇಡಬಹುದು. ಆದರೆ, ಅವುಗಳು ಚಾಲನೆ ಮಾಡುವಾಗ ಚಾಲಕನಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ನೋಡಿಕೊಳ್ಳಿ.

ಕಾರಿನಲ್ಲಿ ದೇವರ ವಿಗ್ರಹ ಇಡುವಾಗ ಪಾಲಿಸಬೇಕಾದ ಕಟ್ಟುನಿಟ್ಟಿನ ನಿಯಮಗಳು:

ಕಾರಿನಲ್ಲಿ ದೇವರ ಮೂರ್ತಿಯನ್ನು ಇಟ್ಟರೆ ಸಾಲದು, ಅದಕ್ಕೊಂದು ಶಿಸ್ತು ಮತ್ತು ನಿಯಮವಿರಬೇಕು ಎಂದು ಹಿರಿಯರು ಹೇಳುತ್ತಾರೆ. ನೀವು ಕಾರಿನಲ್ಲಿ ಸಿಗರೇಟ್, ಮದ್ಯ ಅಥವಾ ಮಾಂಸಾಹಾರವನ್ನು ಬಳಸುವ ಅಭ್ಯಾಸ ಹೊಂದಿದ್ದರೆ, ದಯವಿಟ್ಟು ಕಾರಿನಲ್ಲಿ ಯಾವುದೇ ದೇವರ ವಿಗ್ರಹವನ್ನು ಇಡಬೇಡಿ. ಚಾಲನೆ ಮಾಡುವಾಗ ಪ್ರತಿಮೆ ಅಥವಾ ವಿಗ್ರಹವು ಎಂದಿಗೂ ಕೆಳಗೆ ಬೀಳದಂತೆ ಗಟ್ಟಿಯಾಗಿ ಅಂಟಿಸಿರಬೇಕು. ಇದಲ್ಲದೇ ವಿಗ್ರಹವು ಚಾಲಕನಿಗೆ ರಸ್ತೆ ಕಾಣಿಸದಂತೆ ತಡೆಯುವಷ್ಟು ತೀರಾ ದೊಡ್ಡದಾಗಿರಬಾರದು ಅಥವಾ ಕಣ್ಣಿಗೇ ಕಾಣಿಸದಷ್ಟು ತೀರಾ ಚಿಕ್ಕದಾಗಿರಬಾರದು. ವಾರಕ್ಕೊಮ್ಮೆಯಾದರೂ ಕಾರಿನ ಒಳಗಿನ ಮೂರ್ತಿಯನ್ನು ಸ್ವಚ್ಛಗೊಳಿಸಿ, ಹೂವು ಅಥವಾ ಕಾಣಿಕೆಯನ್ನು ಅರ್ಪಿಸಿ ನಮಸ್ಕರಿಸಬೇಕು. ಪ್ರತಿದಿನ ಕಾರನ್ನು ಸ್ಟಾರ್ಟ್ ಮಾಡುವಾಗ ‘ಓಂ’ ಅಥವಾ ನಿಮ್ಮ ಇಷ್ಟದೇವತೆಯ ಮಂತ್ರವನ್ನು ಜಪಿಸಿ ಚಾಲನೆ ಮಾಡುವುದನ್ನು ರೂಢಿಸಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Tue, 16 June 26

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು