Chanakya Niti in Kannada: ಈ ನೀತಿ ಅನುಸರಿಸಿದರೆ ಎಷ್ಟೇ ಕಷ್ಟ ಬಂದರೂ ದೂರವಾಗುತ್ತೆ
ಜೀವನದಲ್ಲಿ ಏನನ್ನಾದರೂ ಸಾಧಿಸಲು ಚಾಣಕ್ಯರ ನೀತಿ ನಿಮಗೆ ಸಹಾಯ ಮಾಡುತ್ತದೆ. ಇದನ್ನು ಸರಿಯಾಗಿ ಅನುಸರಿಸಿದರೆ ನೀವು ಯಶಸ್ವಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜೊತೆಗೆ ಕಷ್ಟದ ಸಮಯದಲ್ಲಿ ಇದು ಮನುಷ್ಯನಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಎಷ್ಟೇ ಬಿಕ್ಕಟ್ಟಿನ ಸಮಯದಲ್ಲಿಯೂ ಕೂಡ, ವ್ಯಕ್ತಿಯು ಈ 5 ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು ಎಂದು ಚಾಣಕ್ಯರ ನೀತಿಯಲ್ಲಿ ಹೇಳಲಾಗಿದೆ. ಹಾಗಾದರೆ ಅವರು ಹೇಳಿರುವ ನೀತಿಗಳಲ್ಲಿ ಏನಿದೆ? ಯಾವುದು ಆ ನೀತಿ? ಇಲ್ಲಿದೆ ಉತ್ತರ.
ಮನುಷ್ಯನಿಗೆ ಕಷ್ಟ ಬರುವುದು ಸಾಮಾನ್ಯ ಆದರೆ ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡುವುದೇ ಬುದ್ದಿವಂತಿಕೆ. ಬಂದ ಕಷ್ಟಗಳನ್ನು ಹೆದರದೆಯೇ ಎದುರಿಸಲು ನಮಗೆ ಕೆಲವು ಸಲಹೆಗಳ ಅಗತ್ಯವಿರುತ್ತದೆ. ಅಂತಹ ಬುದ್ಧಿವಾದದ ಮಾತುಗಳು ನಮಗೆ ಆಚಾರ್ಯ ಚಾಣಕ್ಯರಿಂದ ಸಿಗುತ್ತದೆ. ಅವರು ಬೋಧಿಸಿದಂತಹ ವಿಷಯಗಳು ಇಂದಿಗೂ ನಮಗೆ ಅನ್ವಯಿಸುತ್ತವೆ. ಜೀವನದಲ್ಲಿ ಏನನ್ನಾದರೂ ಸಾಧಿಸಲು ಚಾಣಕ್ಯರ ನೀತಿ ನಿಮಗೆ ಸಹಾಯ ಮಾಡುತ್ತದೆ. ಇದನ್ನು ಸರಿಯಾಗಿ ಅನುಸರಿಸಿದರೆ ನೀವು ಯಶಸ್ವಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜೊತೆಗೆ ಕಷ್ಟದ ಸಮಯದಲ್ಲಿ ಇದು ಮನುಷ್ಯನಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಎಷ್ಟೇ ಬಿಕ್ಕಟ್ಟಿನ ಸಮಯದಲ್ಲಿಯೂ ಕೂಡ, ವ್ಯಕ್ತಿಯು ಈ 5 ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು ಎಂದು ಚಾಣಕ್ಯರ ನೀತಿಯಲ್ಲಿ ಹೇಳಲಾಗಿದೆ. ಹಾಗಾದರೆ ಅವರು ಹೇಳಿರುವ ನೀತಿಗಳಲ್ಲಿ ಏನಿದೆ? ಯಾವುದು ಆ ನೀತಿ? ಇಲ್ಲಿದೆ ಉತ್ತರ.
ಜಾಗರೂಕತೆ ಅನಿವಾರ್ಯ!
ಚಾಣಕ್ಯ ನೀತಿಯ ಪ್ರಕಾರ, ಬಿಕ್ಕಟ್ಟಿನ ಸಮಯದಲ್ಲಿ ವ್ಯಕ್ತಿ ತುಂಬಾ ಜಾಗರೂಕರಾಗಿರಬೇಕು, ಏಕೆಂದರೆ ಅಂತಹ ಸಮಯದಲ್ಲಿ ಅವಕಾಶಗಳು ಸೀಮಿತವಾಗಿರುತ್ತದೆ ಆದರೆ ಸವಾಲುಗಳು ಹೆಚ್ಚಿರುತ್ತದೆ. ಇದರಿಂದ ಸಣ್ಣ ತಪ್ಪು ಕೂಡ ದೊಡ್ಡ ನಷ್ಟ ಉಂಟುಮಾಡಬಹುದು, ಆದ್ದರಿಂದ ಆದಷ್ಟು ಜಾಗರೂಕರಾಗಿರುವುದು ಬಹಳ ಮುಖ್ಯ.
ಕಾರ್ಯತಂತ್ರ ರೂಪಿಸಿಕೊಳ್ಳಿ!
ಆಚಾರ್ಯ ಚಾಣಕ್ಯರು ಹೇಳಿರುವ ಪ್ರಕಾರ ಒಬ್ಬ ವ್ಯಕ್ತಿಯು ಅವನ ತೊಂದರೆಯಿಂದ ಹೊರಬರಲು ಕಾರ್ಯತಂತ್ರ ರೂಪಿಸಬೇಕಾಗುತ್ತದೆ. ಈ ಪ್ರಕಾರದಲ್ಲಿ ಹಂತ ಹಂತವಾಗಿ ಕೆಲಸ ಮಾಡಬೇಕು ಆಗ ಮಾತ್ರ ಅಂತಿಮವಾಗಿ ವಿಜಯ ಸಾಧಿಸಲು ಸಾಧ್ಯವಾಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ, ಯಾವುದೇ ಪೂರ್ವ ಸಿದ್ಧತೆಗಳಿಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ, ಬಿಕ್ಕಟ್ಟಿನ ಸಮಯದಲ್ಲಿ ಜಾಗರೂಕರಾಗಿರಿ.
ಕುಟುಂಬ ಸದಸ್ಯರ ಸುರಕ್ಷತೆಯ ಬಗ್ಗೆ ಗಮನ ಕೊಡಿ!
ಬಿಕ್ಕಟ್ಟಿನ ಸಮಯದಲ್ಲಿ, ವ್ಯಕ್ತಿಯ ಮೊದಲ ಕರ್ತವ್ಯವೆಂದರೆ ಕುಟುಂಬದಲ್ಲಿ ತನಗಿರುವ ಜವಾಬ್ದಾರಿಯನ್ನು ಪೂರೈಸುವುದು. ಅಲ್ಲದೆ, ಕುಟುಂಬ ಸದಸ್ಯರ ಸುರಕ್ಷತೆಗಾಗಿ ವಿಶೇಷ ಕಾಳಜಿ ವಹಿಸಬೇಕು. ಇದನ್ನು ಮಾಡುವುದರಿಂದ, ನೀವು ಯಾವುದೇ ಸಮಸ್ಯೆಯಲ್ಲಿದ್ದರೂ ಹೊರಬರಬಹುದು ಜೊತೆಗೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬಹುದು.
ಇದನ್ನೂ ಓದಿ: ಈ ದೇವಾಲಯದ ನೆಲದ ಮೇಲೆ ಮಲಗಿದರೆ ಮಕ್ಕಳಿಲ್ಲದ ಮಹಿಳೆ ಗರ್ಭವತಿಯಾಗುತ್ತಾಳೆ!
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ!
ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ಮೊದಲು ತನ್ನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಏಕೆಂದರೆ ಇದುವೇ ಮನುಷ್ಯನ ಅತಿದೊಡ್ಡ ಸಂಪತ್ತು. ಆರೋಗ್ಯವು ಉತ್ತಮವಾಗಿದ್ದರೆ ಮಾತ್ರ ನೀವು ಅಂದುಕೊಂಡದ್ದನ್ನು ಮಾಡಲು ಸಾಧ್ಯವಾಗುತ್ತದೆ. ಆಗ ನಿಮ್ಮ ಮಾನಸಿಕ ಮತ್ತು ದೈಹಿಕ ಶಕ್ತಿಯಿಂದ ನೀವು ಸವಾಲುಗಳನ್ನು ಜಯಿಸಬಹುದು.
ಹಣವನ್ನು ಉಳಿಸಿ!
ಜೀವನದಲ್ಲಿ ಮುಖ್ಯವಾಗಿ ಹಣ ಉಳಿತಾಯ ಮಾಡುವುದನ್ನು ಕಲಿಯಿರಿ. ಏಕೆಂದರೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ ದೊಡ್ಡ ಬಿಕ್ಕಟ್ಟಿನಿಂದ ಹೊರಬರಬಹುದು, ನೆನಪಿಡಿ, ಕಷ್ಟಕಾಲದಲ್ಲಿ ಹಣ ಕೂಡ ನಿಮ್ಮ ಸ್ನೇಹಿತ. ದುಡ್ಡಿನ ಕೊರತೆ ಇದ್ದಲ್ಲಿ ವ್ಯಕ್ತಿಗೆ ಬಿಕ್ಕಟ್ಟನ್ನು ನಿವಾರಿಸುವುದು ತುಂಬಾ ಕಷ್ಟಕರವಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಹಣವನ್ನು ಉಳಿತಾಯ ಮಾಡಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:54 pm, Tue, 30 April 24