AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mata Simsa Devi Mandir: ಈ ದೇವಾಲಯದ ನೆಲದ ಮೇಲೆ ಮಲಗಿದರೆ ಮಕ್ಕಳಿಲ್ಲದ ಮಹಿಳೆ ಗರ್ಭವತಿಯಾಗುತ್ತಾಳೆ!

ಸಂತಾನ ಭಾಗ್ಯಕ್ಕಾಗಿ ದೇವರ ಮೊರೆ ಹೋಗುವವರೇ ಹೆಚ್ಚು. ಈ ಸಾಲಿನಲ್ಲಿ ಹಿಮಾಚಲ ಪ್ರದೇಶದಲ್ಲಿರುವ ಮಾತಾ ಸಿಮ್ಸಾ ದೇವಾಲಯವು ಸೇರಿಕೊಳ್ಳುತ್ತದೆ. ನಂಬಿಕೆ ಇದ್ದಲ್ಲಿ ಎಲ್ಲವೂ ಸಾಧ್ಯ ಎಂಬ ಮಾತು ಇಲ್ಲಿ ಭೇಟಿ ನೀಡುವ ಭಕ್ತರ ಅರಿವಿಗೆ ಬರುತ್ತದೆ. ಈ ದೇವಾಲಯದ ವಿಶೇಷತೆ ಏನು? ಯಾಕೆ ಈ ದೇವಾಲಯ ಪ್ರಸಿದ್ದಿಗೆ ಬಂತು? ಸಂಪೂರ್ಣ ಮಾಹಿತಿ ಇಲ್ಲಿದೆ.

Mata Simsa Devi Mandir: ಈ ದೇವಾಲಯದ ನೆಲದ ಮೇಲೆ ಮಲಗಿದರೆ ಮಕ್ಕಳಿಲ್ಲದ ಮಹಿಳೆ ಗರ್ಭವತಿಯಾಗುತ್ತಾಳೆ!
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Apr 30, 2024 | 5:52 PM

Share

ಮಕ್ಕಳ ಪ್ರೀತಿಯನ್ನು ಅನುಭವಿಸಿಯೇ ಪಡೆಯುವಂತದ್ದು. ಅದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಮಕ್ಕಳಾಗದವರಿಗೆ ಮಾತ್ರ ಆ ನೋವು ಗೊತ್ತಿರಲು ಸಾಧ್ಯ. ಸಾಮಾನ್ಯವಾಗಿ ಮಗು ಬಯಸುವ ದಂಪತಿ ತಮ್ಮ ಕೈಯಲ್ಲಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಅದರಲ್ಲಿಯೂ ಸಂತಾನ ಭಾಗ್ಯಕ್ಕಾಗಿ ದೇವರ ಮೊರೆ ಹೋಗುವವರೇ ಹೆಚ್ಚು. ಈ ಸಾಲಿನಲ್ಲಿ ಹಿಮಾಚಲ ಪ್ರದೇಶದಲ್ಲಿರುವ ಮಾತಾ ಸಿಮ್ಸಾ ದೇವಾಲಯವು ಸೇರಿಕೊಳ್ಳುತ್ತದೆ. ನಂಬಿಕೆ ಇದ್ದಲ್ಲಿ ಎಲ್ಲವೂ ಸಾಧ್ಯ ಎಂಬ ಮಾತು ಇಲ್ಲಿ ಭೇಟಿ ನೀಡುವ ಭಕ್ತರ ಅರಿವಿಗೆ ಬರುತ್ತದೆ. ಈ ದೇವಾಲಯದ ವಿಶೇಷತೆ ಏನು? ಯಾಕೆ ಈ ದೇವಾಲಯ ಪ್ರಸಿದ್ದಿಗೆ ಬಂತು? ಸಂಪೂರ್ಣ ಮಾಹಿತಿ ಇಲ್ಲಿದೆ.

ಹಿಮಾಚಲ ಪ್ರದೇಶವನ್ನು ದೇವ ಭೂಮಿ ಎಂದೂ ಕರೆಯಲಾಗುತ್ತದೆ. ಇಲ್ಲಿ ಹೆಚ್ಚಿನ ಶಕ್ತಿಪೀಠಗಳು, ಪವಾಡ ಕ್ಷೇತ್ರಗಳು ಕೂಡ ಇದೆ. ಅವುಗಳಲ್ಲಿ ಒಂದು, ಮಂಡಿ ಜಿಲ್ಲೆಯ ಸಿಮಾಸ್ ಗ್ರಾಮದಲ್ಲಿರುವ 200 ವರ್ಷಗಳಷ್ಟು ಹಳೆಯದಾದ ಮಾತಾ ಸಿಮ್ಸಾ ದೇವಾಲಯ. ಧಾರ್ಮಿಕ ನಂಬಿಕೆಗಳ ಪ್ರಕಾರ ಇಲ್ಲಿ, ಸತಿ ದೇವಿಯು ಮಾತಾ ಸಿಮ್ಸಾ ರೂಪದಲ್ಲಿ ಕುಳಿತಿದ್ದು ಮಕ್ಕಳಾಗದ ಮಹಿಳೆಯರ ಒಡಲು ತುಂಬುತ್ತಾಳೆ. ಈ ಕಾರಣದಿಂದ ಇಲ್ಲಿಗೆ ಬರುವ ಜನರು ಎಂದಿಗೂ ನಿರಾಶೆಗೊಳ್ಳುವುದಿಲ್ಲ. ಆದ್ದರಿಂದ ಅವಳನ್ನು ಸಂತಾನ ದಾತ್ರಿ ಎಂದೂ ಕೂಡ ಪೂಜಿಸಲಾಗುತ್ತದೆ.

ಇದನ್ನೂ ಓದಿ: ಮೇ ತಿಂಗಳಿನಲ್ಲಿ ಯಾವ ದಿನ ಯಾವ ವ್ರತವನ್ನು ಆಚರಣೆ ಮಾಡಬೇಕು? ಇಲ್ಲಿದೆ ಮಾಹಿತಿ

ಮಕ್ಕಳಾಗದ ಮಹಿಳೆಯರು ಬಂದು ಈ ದೇವಾಲಯದ ಚಾವಡಿಯಲ್ಲಿ ಎಷ್ಟೇ ಹೊತ್ತಿನಲ್ಲಿ ಮಲಗಿದರೂ ತಾಯಿ ಎಂದಿಗೂ ಅವಳನ್ನು ನಿರಾಶೆಗೊಳಿಸುವುದಿಲ್ಲ. ತಾಯಿ ಮಲಗಿರುವ ಮಹಿಳೆಯ ಕನಸಿನಲ್ಲಿ ಕಾಣಿಸಿಕೊಂಡು ಆಕೆಯನ್ನು ಆಶೀರ್ವದಿಸುತ್ತಾಳೆ. ಜೊತೆಗೆ ಗಂಡು ಮಗುವೋ ಅಥವಾ ಹೆಣ್ಣು ಮಗುವೋ ಎಂಬ ಸೂಚನೆಯನ್ನು ಕೂಡ ಕೊಡುತ್ತಾಳೆ. ಇಲ್ಲಿನ ನಿಯಮಗಳ ಪ್ರಕಾರ, ತಾಯಿ ಕನಸಿನಲ್ಲಿ ಬಂದು ಬಾಳೆಹಣ್ಣು ಅಥವಾ ಪೇರಳೆ ಹಣ್ಣನ್ನು ತಂದರೆ ಆಕೆಗೆ ಮಗ ಜನಿಸುತ್ತಾನೆ ಎಂದರ್ಥ. ಬೆಂಡೆಕಾಯಿ ಅಥವಾ ಸೋರೆಕಾಯಿಯನ್ನು ತಂದರೆ ಆ ಮಹಿಳೆಗೆ ಹೆಣ್ಣು ಮಗು ಜನಿಸುತ್ತದೆ. ಅಷ್ಟೇ ಅಲ್ಲ, ಕನಸಿನಲ್ಲಿ ಲೋಹ ಹಿಡಿದು ಬಂದರೆ ಮಕ್ಕಳಾಗುವುದಿಲ್ಲ ಅಥವಾ ತುಂಬಾ ತಡವಾಗಿ ಗರ್ಭ ಧರಿಸುತ್ತಾಳೆ ಎಂಬ ಅರ್ಥವಿದೆ. ಕನಸು ಬಿದ್ದು ತಾಯಿ ಸೂಚನೆ ಕೊಟ್ಟ ಬಳಿಕ ಅಲ್ಲಿಂದ ಎದ್ದು ಹೊರಡಬೇಕು ಇಲ್ಲವಾದಲ್ಲಿ ಇರುವೆಗಳು ಮಹಿಳೆಯನ್ನು ಕಚ್ಚಲು ಪ್ರಾರಂಭಿಸುತ್ತವೆ. ಹಾಗಾಗಿ ಕನಸು ಬಿದ್ದ ಬಳಿಕ ಆ ಆವರಣದಲ್ಲಿ ಮಲಗಬಾರದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:41 pm, Tue, 30 April 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ