AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ವೇಳೆಯಲ್ಲಿ ಬಟ್ಟೆ ಒಗೆಯಬಾರದು ಏಕೆ? ಜ್ಯೋತಿಷ್ಯ ಮತ್ತು ಧಾರ್ಮಿಕ ಕಾರಣ ಇಲ್ಲಿದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾತ್ರಿ ವೇಳೆ ಬಟ್ಟೆ ಒಗೆದು ಒಣಗಿಸುವುದರಿಂದ ನಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ, ಲಕ್ಷ್ಮಿ ಕೃಪೆ ದೂರವಾಗುತ್ತದೆ. ವೈಜ್ಞಾನಿಕವಾಗಿ, ರಾತ್ರಿಯ ತೇವಾಂಶವು ಬ್ಯಾಕ್ಟೀರಿಯಾ, ಶಿಲೀಂಧ್ರಗಳಿಗೆ ಕಾರಣವಾಗಿ ಚರ್ಮದ ಸಮಸ್ಯೆಗಳಿಗೆ ಎಡೆಮಾಡಬಹುದು. ಹಗಲಿನಲ್ಲಿ ಸೂರ್ಯನ ಕಿರಣಗಳು ಬಟ್ಟೆಗಳನ್ನು ಶುದ್ಧೀಕರಿಸಿ, ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ತುಂಬುತ್ತದೆ. ಆರೋಗ್ಯಕರ ಜೀವನಕ್ಕೆ ಹಗಲಿನಲ್ಲಿ ಬಟ್ಟೆ ಒಗೆಯುವುದು ಶ್ರೇಷ್ಠ.

ರಾತ್ರಿ ವೇಳೆಯಲ್ಲಿ ಬಟ್ಟೆ ಒಗೆಯಬಾರದು ಏಕೆ? ಜ್ಯೋತಿಷ್ಯ ಮತ್ತು ಧಾರ್ಮಿಕ ಕಾರಣ ಇಲ್ಲಿದೆ
ರಾತ್ರಿ ವೇಳೆಯಲ್ಲಿ ಬಟ್ಟೆ ಒಗೆಯಬಾರದು ಏಕೆ?Image Credit source: Getty Images
ಅಕ್ಷತಾ ವರ್ಕಾಡಿ
|

Updated on: Jul 21, 2026 | 11:11 AM

Share

ಜ್ಯೋತಿಷ್ಯ ಶಾಸ್ತ್ರವು ದೈನಂದಿನ ಜೀವನದ ಪ್ರತಿಯೊಂದು ಸಣ್ಣಪುಟ್ಟ ಕೆಲಸಗಳಿಗೂ ಕೆಲವು ನಿಯಮಗಳನ್ನು ಸೂಚಿಸುತ್ತದೆ. ತಪ್ಪು ಸಮಯದಲ್ಲಿ ಮಾಡುವ ಕೆಲಸಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative Energy) ಸೃಷ್ಟಿಸುತ್ತವೆ ಮತ್ತು ಜೀವನದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂಬ ನಂಬಿಕೆಯಿದೆ. ಅಂತಹ ನಿಯಮಗಳಲ್ಲಿ ಒಂದಾದ “ರಾತ್ರಿ ವೇಳೆ ಬಟ್ಟೆಗಳನ್ನು ಒಗೆಯಬಾರದು ಮತ್ತು ಒಣಗಿಸಬಾರದು” ಎಂಬುದರ ಹಿಂದಿರುವ ಧಾರ್ಮಿಕ, ಜ್ಯೋತಿಷ್ಯ ಮತ್ತು ವೈಜ್ಞಾನಿಕ ಕಾರಣಗಳ ಬಗ್ಗೆ ಖ್ಯಾತ ಜ್ಯೋತಿಷಿ ಚಂದ್ರೇಶ್ ಶರ್ಮಾ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಜ್ಯೋತಿಷ್ಯ ಮತ್ತು ಧಾರ್ಮಿಕ ಕಾರಣಗಳು:

ಜ್ಯೋತಿಷ್ಯದ ಪ್ರಕಾರ, ಸೂರ್ಯನ ಬೆಳಕು ಸಕಾರಾತ್ಮಕತೆ ಮತ್ತು ಶುದ್ಧತೆಯ ಸಂಕೇತವಾದರೆ, ರಾತ್ರಿಯ ಕತ್ತಲೆಯು ನಕಾರಾತ್ಮಕತೆಯ ಸಂಕೇತವಾಗಿದೆ. ಪ್ರಾಚೀನ ನಂಬಿಕೆಗಳ ಪ್ರಕಾರ, ರಾತ್ರಿ ವೇಳೆ ಬಟ್ಟೆ ಒಗೆದು ಒಣಗಾಕುವುದರಿಂದ ಮನೆಯಲ್ಲಿರುವ ಸಂತೋಷ, ಶಾಂತಿ ಮತ್ತು ಲಕ್ಷ್ಮಿ ದೇವಿಯ ಕೃಪೆ ಕಡಿಮೆಯಾಗುತ್ತದೆ. ರಾತ್ರಿಯ ಕತ್ತಲೆಯಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿಗಳ ಚಲನವಲನ ಹೆಚ್ಚಿರುತ್ತದೆ. ಒದ್ದೆಯಾದ ಬಟ್ಟೆಗಳು ಈ ಶಕ್ತಿಯನ್ನು ಸುಲಭವಾಗಿ ಹೀರಿಕೊಳ್ಳುತ್ತವೆ, ಇದು ಮನೆಯ ಸದಸ್ಯರ ಆರೋಗ್ಯ ಮತ್ತು ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೀರಬಹುದು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ವೈಜ್ಞಾನಿಕ ಹಾಗೂ ಆರೋಗ್ಯದ ಕಾರಣಗಳು:

ಕೇವಲ ಧಾರ್ಮಿಕ ನಂಬಿಕೆ ಮಾತ್ರವಲ್ಲದೆ, ಇದರ ಹಿಂದೆ ಪ್ರಮುಖ ಆರೋಗ್ಯಕರ ಮತ್ತು ವೈಜ್ಞಾನಿಕ ಕಾರಣಗಳೂ ಇವೆ:

ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಅಪಾಯ:

ಸೂರ್ಯನ ಬೆಳಕಿನಲ್ಲಿ ನೈಸರ್ಗಿಕವಾಗಿ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಶಕ್ತಿಯಿದೆ (UV-rays). ರಾತ್ರಿ ಸೂರ್ಯನ ಬೆಳಕು ಇಲ್ಲದಿರುವುದರಿಂದ ಬಟ್ಟೆಯಲ್ಲಿನ ತೇವಾಂಶವು ಬ್ಯಾಕ್ಟೀರಿಯಾ, ಶಿಲೀಂಧ್ರ (Fungus) ಮತ್ತು ಕೀಟಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಚರ್ಮದ ಅಲರ್ಜಿ ಅಥವಾ ಸೋಂಕಿಗೆ (Skin Infections) ದಾರಿಯಾಗಬಹುದು. ಇದಲ್ಲದೇ ರಾತ್ರಿ ಗಾಳಿ ಮತ್ತು ಬೆಳಕಿನ ಕೊರತೆಯಿಂದ ಬಟ್ಟೆಗಳು ಸರಿಯಾಗಿ ಒಣಗದೆ ತೇವಾಂಶದಿಂದ ಕೂಡಿದ್ದು, ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತವೆ.

ಹಳೆಯ ಕಾಲದ ಪ್ರಾಯೋಗಿಕ ವ್ಯವಸ್ಥೆ:

ಹಳೆಯ ದಿನಗಳಲ್ಲಿ ಮನೆಗಳಲ್ಲಿ ವಿದ್ಯುತ್ (Electricity) ಸೌಲಭ್ಯ ಇರಲಿಲ್ಲ. ಕತ್ತಲೆಯಲ್ಲಿ ಬಟ್ಟೆ ಒಗೆಯುವಾಗ ಬಟ್ಟೆಯ ಮೇಲಿನ ಕೊಳಕು ಸರಿಯಾಗಿ ಕಾಣಿಸುತ್ತಿರಲಿಲ್ಲ. ಅಲ್ಲದೆ, ಕತ್ತಲೆಯಲ್ಲಿ ವಿಷಪೂರಿತ ಕೀಟಗಳು ಬಟ್ಟೆಯ ಮೇಲೆ ಕುಳಿತುಕೊಳ್ಳುವ ಅಪಾಯವೂ ಇತ್ತು. ಈ ಎಲ್ಲಾ ಕಾರಣಗಳಿಂದ ಹಿರಿಯರು ಹಗಲಿನಲ್ಲಿ ಮಾತ್ರ ಬಟ್ಟೆ ಒಗೆಯುವ ಪದ್ಧತಿಯನ್ನು ಜಾರಿಗೆ ತಂದರು.

ಹಗಲಿನ ಬೆಳಕು ಬಟ್ಟೆಗಳನ್ನು ಮತ್ತು ಮನೆಯ ವಾತಾವರಣವನ್ನು ನೈಸರ್ಗಿಕವಾಗಿ ಶುದ್ಧೀಕರಿಸುತ್ತದೆ. ಹೀಗಾಗಿ, ಮನೆಯಲ್ಲಿ ಶಾಂತಿ, ಆರೋಗ್ಯ ಮತ್ತು ಸಕಾರಾತ್ಮಕ ಶಕ್ತಿ ನೆಲೆಸಬೇಕೆಂದರೆ ಬಟ್ಟೆಗಳನ್ನು ಹಗಲಿನ ವೇಳೆಯಲ್ಲೇ ಒಗೆದು ಸೂರ್ಯನ ಬೆಳಕಿನಲ್ಲಿ ಒಣಗಿಸುವುದು ಶ್ರೇಷ್ಠ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು