AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spiritual remedies: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದೀರಾ? ಏಲಕ್ಕಿ ಬಳಸಿ ಈ ಸರಳ ಪರಿಹಾರ ಪ್ರಯತ್ನಿಸಿ

ಹೆಚ್ಚುತ್ತಿರುವ ಸಾಲದ ಹೊರೆ ಮತ್ತು ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವವರಿಗೆ ಆಧ್ಯಾತ್ಮಿಕ ಶಾಸ್ತ್ರದಲ್ಲಿ ಒಂದು ವಿಶೇಷ ಪರಿಹಾರವಿದೆ. ಲಕ್ಷ್ಮಿ ದೇವಿಗೆ ಪ್ರಿಯವಾದ ಏಲಕ್ಕಿ ಮಾಲೆಯನ್ನು ಭಕ್ತಿಯಿಂದ ಧರಿಸುವುದರಿಂದ ಅಥವಾ ದೇವಿಗೆ ಅರ್ಪಿಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಹಣಕಾಸಿನ ಹರಿವು ಸುಧಾರಿಸುತ್ತದೆ. ಶುಕ್ರವಾರದಂದು ಈ ಪವಿತ್ರ ಹಾರವನ್ನು ಸಮರ್ಪಿಸುವುದರಿಂದ ಸಾಲದ ಬಾಧೆ ನೀಗಿ, ವೃತ್ತಿಜೀವನದಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬರುತ್ತದೆ ಎಂದು ನಂಬಲಾಗಿದೆ.

Spiritual remedies: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದೀರಾ? ಏಲಕ್ಕಿ ಬಳಸಿ ಈ ಸರಳ ಪರಿಹಾರ ಪ್ರಯತ್ನಿಸಿ
ಏಲಕ್ಕಿImage Credit source: Pinterest
ಅಕ್ಷತಾ ವರ್ಕಾಡಿ
|

Updated on: May 10, 2026 | 6:11 PM

Share

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಆರ್ಥಿಕ ಸಮಸ್ಯೆ ಹಾಗೂ ಹೆಚ್ಚುತ್ತಿರುವ ಸಾಲದ ಸುಳಿಯಲ್ಲಿ ಸಿಲುಕಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಅಡುಗೆ ಮನೆಯಲ್ಲಿ ಬಳಸುವ ಸಾಧಾರಣ ಏಲಕ್ಕಿಗೆ ಅಪಾರವಾದ ದೈವಿಕ ಶಕ್ತಿಯನ್ನು ಹೊಂದಿದೆ. ಈ ಏಲಕ್ಕಿ ಬಳಸಿ ಸರಳ ಪರಿಹಾರವನ್ನು ಮಾಡುವುದರಿಂದ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನಲಾಗುತ್ತದೆ.

ಆಧ್ಯಾತ್ಮಿಕತೆಯಲ್ಲಿ ಏಲಕ್ಕಿಯ ಮಹತ್ವ:

ಏಲಕ್ಕಿಯನ್ನು ಕೇವಲ ಮಸಾಲೆ ಪದಾರ್ಥವೆಂದು ಪರಿಗಣಿಸದೆ, ಇದನ್ನು ಶುದ್ಧತೆ ಮತ್ತು ಶುಭದ ಸಂಕೇತವೆಂದು ನೋಡಲಾಗುತ್ತದೆ. ಏಲಕ್ಕಿಯು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದುದು. ಆದ್ದರಿಂದ, ಏಲಕ್ಕಿಯನ್ನು ಬಳಸಿ ಮಾಡುವ ಪೂಜೆಗಳು ಮನೆಯಲ್ಲಿ ಧನವೃದ್ಧಿಗೆ ಸಹಕಾರಿಯಾಗುತ್ತವೆ.

ಸಾಲದ ಸಮಸ್ಯೆ ನೀಗಿಸಲು ಏಲಕ್ಕಿ ಹಾರದ ಸೇವೆ:

ನಿಮ್ಮನ್ನು ಸಾಲದ ಬಾಧೆ ಸತತವಾಗಿ ಕಾಡುತ್ತಿದ್ದರೆ, ಶುಕ್ರವಾರದಂದು ಲಕ್ಷ್ಮಿ ದೇವಿಗೆ ಏಲಕ್ಕಿ ಮಾಲೆಯನ್ನು ಅರ್ಪಿಸಿ. ಇದಲ್ಲದೇ ಬುಧವಾರದಂದು ಕೂಡ ದೇವರಿಗೆ ಏಲಕ್ಕಿ ಹಾರವನ್ನು ಅರ್ಪಿಸುವುದರಿಂದ ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರುತ್ತದೆ.

ವೆಂಕಟೇಶ್ವರ ಸ್ವಾಮಿ ಸೇವೆ:

ವೆಂಕಟೇಶ್ವರನಿಗೆ ಏಲಕ್ಕಿ ಎಂದರೆ ಪ್ರೀತಿ. ಏಳು ಏಲಕ್ಕಿಗಳ ಮಾಲೆಯನ್ನು ದೇವರಿಗೆ ಅರ್ಪಿಸುವುದರಿಂದ ಸಾಲದ ಹೊರೆ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ದಿಂಬಿನ ಕೆಳಗೆ ಏಲಕ್ಕಿ ಇಡುವ ಸರಳ ಪರಿಹಾರ:

ಆರ್ಥಿಕ ಸಮಸ್ಯೆ ಹಾಗೂ ದೃಷ್ಟಿ ದೋಷ ನಿವಾರಣೆಗೆ ಶುಕ್ರವಾರದಂದು ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಐದು ಏಲಕ್ಕಿಗಳನ್ನು ಇಟ್ಟು ಸಣ್ಣ ಗಂಟು ಕಟ್ಟಿ. ಮಲಗುವಾಗ ಈ ಗಂಟನ್ನು ನಿಮ್ಮ ದಿಂಬಿನ ಕೆಳಗೆ ಇರಿಸಿಕೊಳ್ಳಿ. ಮರುದಿನ ಬೆಳಿಗ್ಗೆ ಆ ಏಲಕ್ಕಿಗಳನ್ನು ಯಾರೂ ತುಳಿಯದ ಅಥವಾ ಮುಟ್ಟದ ಪವಿತ್ರ ಸ್ಥಳದಲ್ಲಿ ಇರಿಸಿ. ಈ ಪ್ರಕ್ರಿಯೆಯನ್ನು ಸತತವಾಗಿ ಮೂರು ಶುಕ್ರವಾರಗಳ ಕಾಲ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಹಣಕಾಸಿನ ಹರಿವು ಸುಧಾರಿಸುತ್ತದೆ ಎಂದು ನಂಬಲಾಗಿದೆ

ಅದ್ಭುತ ಫಲಿತಾಂಶಕ್ಕಾಗಿ ಐದು ವಾರಗಳ ವ್ರತ:

ಏಲಕ್ಕಿಯನ್ನು ಹಾರವಾಗಿ ಪೋಣಿಸಿ ಸತತ ಐದು ಶುಕ್ರವಾರಗಳ ಕಾಲ ಧರಿಸುವುದರಿಂದ ಅಥವಾ ದೇವಿಗೆ ಅರ್ಪಿಸುವುದರಿಂದ ಅದ್ಭುತ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಇದು ಕೇವಲ ಸಾಲದ ಬಾಧೆಯನ್ನಷ್ಟೇ ಅಲ್ಲದೆ, ಅನಾರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ನೀಡುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು
ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​
ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​
ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!
ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!
ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ
ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ
ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ
ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ
ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು
ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು!
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು!
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾದ ವಿಜಯ್​​ಗೆ ಶುಭ ಕೋರಿದ ಪ್ರಧಾನಿ ಮೋದಿ
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾದ ವಿಜಯ್​​ಗೆ ಶುಭ ಕೋರಿದ ಪ್ರಧಾನಿ ಮೋದಿ
'ಉಚಿತ ವಿದ್ಯುತ್' ಯೋಜನೆಗೆ ಸಹಿ ಹಾಕಿದ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್
'ಉಚಿತ ವಿದ್ಯುತ್' ಯೋಜನೆಗೆ ಸಹಿ ಹಾಕಿದ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್