AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಜ ನಿರ್ಮಾಣದ ಅಡಿಪಾಯವೇ ತಾಯ್ತನ; ಮಾತೃತ್ವದ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ

ನವದೆಹಲಿಯಲ್ಲಿ ವಿಶ್ವ ಮಾಂಗಲ್ಯ ಸಭಾ ಆಯೋಜಿಸಿದ್ದ 2 ದಿನಗಳ ರಾಷ್ಟ್ರೀಯ ಜಾಗೃತಿ ಸಮ್ಮೇಳನವು ಬಹಳ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆಧುನಿಕ ಯುಗದಲ್ಲಿ ಮಾತೃತ್ವದ ವಿಷಯದ ಕುರಿತು ನಡೆದ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಭಾಗವಹಿಸಿ ಮಾತೃತ್ವ, ಕುಟುಂಬ ವ್ಯವಸ್ಥೆ ಮತ್ತು ಭಾರತೀಯ ಸಂಸ್ಕೃತಿಯ ಮಹತ್ವದ ಕುರಿತು ಹಲವು ಹೇಳಿಕೆಗಳನ್ನು ನೀಡಿದರು. ಈ ವಿಷಯವು ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದೆ. ಆದರೆ ಭಾರತೀಯ ಸಂಪ್ರದಾಯ, ಸಂಸ್ಕೃತಿ ಮತ್ತು ಸಮಾಜದ ರಚನೆಯಲ್ಲಿ ತಾಯ್ತನವು ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದರು.

ಸಮಾಜ ನಿರ್ಮಾಣದ ಅಡಿಪಾಯವೇ ತಾಯ್ತನ; ಮಾತೃತ್ವದ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ
Mohan BhagwatImage Credit source: TV9
ಸುಷ್ಮಾ ಚಕ್ರೆ
|

Updated on: Jul 24, 2026 | 11:00 PM

Share

ನವದೆಹಲಿ, ಜುಲೈ 24: ಮಾತೃತ್ವವಿಲ್ಲದೆ ಜೀವರಾಶಿಯ ಸೃಷ್ಟಿ, ಪೋಷಣೆ ಅಸಾಧ್ಯವಾಗಿದ್ದು, ಮಾತೃತ್ವವೇ ಮಾನವ ಸಮಾಜದ ನಿಜವಾದ ಅಡಿಪಾಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ನವದೆಹಲಿಯ ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ‘ವಿಶ್ವ ಮಾಂಗಲ್ಯ ಸಭಾ’ ಆಯೋಜಿಸಿದ್ದ “ಸಮಕಾಲೀನ ಮಾತೃತ್ವ” ವಿಷಯದ ಕುರಿತ ರಾಷ್ಟ್ರೀಯ ಜಾಗೃತಿ ಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರ್ ಅವರಂತಹ ಮಹಾನ್ ವ್ಯಕ್ತಿಗಳು ಸಹ ಮಾತೃತ್ವ ಮತ್ತು ಕುಟುಂಬ ವ್ಯವಸ್ಥೆಯ ಬಗ್ಗೆ ಆಳವಾದ ಆಲೋಚನೆಗಳನ್ನು ಹೊಂದಿದ್ದರು ಎಂದು ಮೋಹನ್ ಭಾಗವತ್ ನೆನಪಿಸಿಕೊಂಡಿದ್ದಾರೆ.

ತಾಯ್ತನದ ಶಾಶ್ವತ ಮೌಲ್ಯಗಳು ಎಂದಿಗೂ ಬದಲಾಗುವುದಿಲ್ಲ. ಕಾಲಕ್ರಮೇಣ ಪರಿಸ್ಥಿತಿಗಳು ಬದಲಾದರೂ, ತಾಯ್ತನದ ನಿಜವಾದ ಸ್ವರೂಪ ಬದಲಾಗುವುದಿಲ್ಲ. ಜಗತ್ತಿನಲ್ಲಿ ಜೀವನದ ಸೃಷ್ಟಿ, ಪೋಷಣೆ ಮತ್ತು ಮುಂದುವರಿಕೆಗೆ ತಾಯ್ತನವೇ ಮುಖ್ಯ ಆಧಾರ. ಪ್ರತಿಯೊಬ್ಬ ಮನುಷ್ಯನ ಮೊದಲ ಶಿಕ್ಷಕಿ ತಾಯಿ. ಆ ಮಗುವಿನ ವ್ಯಕ್ತಿತ್ವ ವಿಕಸನ ಮತ್ತು ಆಲೋಚನೆಗಳಿಗೆ ಸರಿಯಾದ ದಿಕ್ಕನ್ನು ತೋರಿಸುವವಳು ತಾಯಿ ಎಂದು ಅವರು ಹೇಳಿದರು.

ಇದನ್ನೂ ಓದಿ: ಜಾಗತಿಕ ಬಿಕ್ಕಟ್ಟುಗಳಿಗೆ ಭಾರತ ಒಂದೇ ಪರಿಹಾರ; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ

ಇಂದಿನ ಕುಟುಂಬಗಳಲ್ಲಿ ಮಕ್ಕಳಿಗಾಗಿ ಸಮಯವನ್ನು ಮೀಸಲಿಡುವುದು ಮತ್ತು ಅವರೊಂದಿಗೆ ನಿರಂತರವಾಗಿ ಸಂವಹನ ನಡೆಸುವುದು ಬಹಳ ಮುಖ್ಯ. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಅವರ ಆಸಕ್ತಿಗಳನ್ನು ಪ್ರೋತ್ಸಾಹಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಮಕ್ಕಳು ತಮ್ಮ ಹೆತ್ತವರ ನಡವಳಿಕೆಯನ್ನು ಅವರ ಮಾತುಗಳಿಗಿಂತ ಹೆಚ್ಚಾಗಿ ಅನುಕರಿಸುತ್ತಾರೆ ಮತ್ತು ಆದ್ದರಿಂದ, ಪೋಷಕರು ಮಾದರಿಯಾಗಿರಬೇಕು ಎಂದು ಮೋಹನ್ ಭಾಗವತ್ ಸಲಹೆ ನೀಡಿದರು.

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕುರಿತಾದ ತಪ್ಪು ಕಲ್ಪನೆಗಳ ಬಗ್ಗೆ ಎಚ್ಚರಿಸಿದ ಅವರು, ಭಾರತದ ನಾಗರಿಕತೆಯ ಅಡಿಪಾಯಗಳು ಇಂದಿಗೂ ಗಟ್ಟಿಯಾಗಿವೆ. ಸಮಾಜವು ತನ್ನ ಸಾಂಸ್ಕೃತಿಕ ಪರಂಪರೆ, ಜ್ಞಾನ ವ್ಯವಸ್ಥೆ ಮತ್ತು ಇತಿಹಾಸದ ಮೇಲೆ ನಂಬಿಕೆಯಿಟ್ಟು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದರು. ಭಾರತೀಯ ಸಂಸ್ಕೃತಿಯ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಉದ್ದೇಶಪೂರ್ವಕವಾಗಿ ಹರಡಲಾಗಿದೆ. ವೈವಿಧ್ಯತೆಯಲ್ಲಿ ಏಕತೆ ಭಾರತೀಯ ಸಂಸ್ಕೃತಿಯ ಮುಖ್ಯ ಸಂದೇಶವಾಗಿದ್ದು, ವಿದೇಶಿ ಜೀವನ ವಿಧಾನಗಳನ್ನು ಕುರುಡಾಗಿ ಅನುಸರಿಸುವ ಬದಲು ಭಾರತೀಯ ಕುಟುಂಬ ವ್ಯವಸ್ಥೆಯನ್ನು ಬಲಪಡಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್ ಸಮನ್ಸ್

ಬೃಹತ್ ಸಮಾವೇಶ:

ಜುಲೈ 23 ಮತ್ತು ಇಂದು “ಮಾತೃತ್ವದ ಮೂಲಕ ರಾಷ್ಟ್ರ ನಿರ್ಮಾಣ” ಎಂಬ ಆಶಯದಡಿ ನಡೆದ ಎರಡು ದಿನಗಳ ಈ ರಾಷ್ಟ್ರೀಯ ಜಾಗೃತಿ ಸಭೆಯಲ್ಲಿ, ದೇಶಾದ್ಯಂತದಿಂದ ಸುಮಾರು 280 ಮಹಿಳೆಯರು ಭಾಗವಹಿಸಿ ಸಮಕಾಲೀನ ಮಾತೃತ್ವ, ಬದಲಾಗುತ್ತಿರುವ ಸಾಮಾಜಿಕ ವಾಸ್ತವಗಳು ಮತ್ತು ಭಾರತೀಯ ಕುಟುಂಬ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ತಾಯಂದಿರ ಪಾತ್ರದ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ 900ಕ್ಕೂ ಹೆಚ್ಚು ಮಹಿಳಾ ನಾಯಕಿಯರು ಮತ್ತು ಗಣ್ಯರು ಭಾಗವಹಿಸಿದ್ದರು. ಈ ವಿಷಯದ ಸಂವಾದಕ್ಕಾಗಿ ಸುಮಾರು 2000ದಿಂದ 2500 ಮಹಿಳೆಯರು ನೋಂದಾಯಿಸಿಕೊಂಡಿದ್ದರು. 2010ರಲ್ಲಿ ನಾಗಪುರದಲ್ಲಿ ಪರಮ ಪೂಜ್ಯ ಆಚಾರ್ಯ ಸ್ವಾಮಿ ಜಿತೇಂದ್ರನಾಥ್ ಜಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ‘ವಿಶ್ವ ಮಾಂಗಲ್ಯ ಸಭಾ’ ಪ್ರಸ್ತುತ ಭಾರತದ 33 ಪ್ರಾಂತ್ಯಗಳಲ್ಲಿ ಸಕ್ರಿಯವಾಗಿದ್ದು, ಸುಮಾರು 6 ಲಕ್ಷ ಮಹಿಳೆಯರು ಇದರೊಂದಿಗೆ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕ ಮತ್ತು ನೆದರ್‌ಲ್ಯಾಂಡ್ಸ್ ಸೇರಿದಂತೆ 14 ದೇಶಗಳಲ್ಲೂ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ನಮ್ಮ ತಂದೆ ತಾಯಿ ಸಂಸಾರು ಶುರು ಮಾಡಿದ್ದೇ ಬಾಡಿಗೆ ಮನೆಯಿಂದ
ನಮ್ಮ ತಂದೆ ತಾಯಿ ಸಂಸಾರು ಶುರು ಮಾಡಿದ್ದೇ ಬಾಡಿಗೆ ಮನೆಯಿಂದ
ದೇವೇಗೌಡ್ರು ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ
ದೇವೇಗೌಡ್ರು ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ